Astro Tips: ಆರ್ಥಿಕ ಪ್ರಗತಿ & ಧನಲಾಭಕ್ಕಾಗಿ ಪ್ರತಿನಿತ್ಯ ಈ ಲಕ್ಷ್ಮಿದೇವಿಯ ಮಂತ್ರ ಪಠಿಸಿ
ಶುಕ್ರವಾರ ತಾಯಿ ಲಕ್ಷ್ಮಿದೇವಿಯನ್ನು ಆರಾಧಿಸುವುದರಿಂದ ವಿಶೇಷವಾಗಿ ಆಕೆಯ ಕೃಪೆಗೆ ಪಾತ್ರರಾಗುತ್ತೀರಿ. ಅದರಲ್ಲೂ ಸಂಜೆ ವೇಳೆ ಮನೆಯಲ್ಲಿ ದೀಪ ಹಚ್ಚಿ ಲಕ್ಷ್ಮಿದೇವಿಯ ಸ್ತೋತ್ರ ಪಠಿಸುವುದರಿಂದ ಹಣಕಾಸಿನ ಅಭಿವೃದ್ಧಿ, ಸುಖ, ಶಾಂತಿ & ಸಂತೋಷ ವೃದ್ಧಿಯಾಗುವುದು.
ʼಮಹಾಲಕ್ಷ್ಮಿ ಚ ವಿದ್ಮಹೇ ವಿಷ್ಣುಪತ್ನೀ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್
ಈ ಮಂತ್ರವನ್ನು ಪಠಿಸುವುದರಿಂದ ನೀವು ತಾಯಿ ಲಕ್ಷ್ಮಿದೇವಿಯ ಕೃಪೆಗೆ ಪಾತ್ರರಾಗುತ್ತೀರಿ.
ಸಂಜೆ ಹೊತ್ತು ಮಡಿಯಲ್ಲಿ ಪದ್ಮಾಸನ ಹಾಕಿ ಕುಳಿತು ಕೆಂಪು ಅಕ್ಷತೆ ಮತ್ತು ಹೂಗಳನ್ನು ತಾಯಿ ಲಕ್ಷ್ಮಿದೇವಿಗೆ ಅರ್ಪಿಸುತ್ತಾ ಈ ಮಂತ್ರವನ್ನು ಹೇಳುವುದರಿಂದ ಸಮೃದ್ಧಿ ಕಾಣುತ್ತೀರಿ. ಇದಲ್ಲದೆ ಈ ಮಂತ್ರವನ್ನೂ ನೀವು ಜಪಿಸಬಹುದು.
'ಓಂ ಶ್ರೀಂ ಶ್ರೀಂ ಮಹಾಲಕ್ಷ್ಮೈ ಶ್ರೀಂ ಶ್ರೀಂ ಓಂ ನಮಃ' ಎನ್ನುವ ಮಂತ್ರವನ್ನು ಪ್ರತಿನಿತ್ಯ ಸಂಜೆ ಹೊತ್ತು ಭಕ್ತಿಯಿಂದ ಜಪಿಸುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗಿ ಧನಾಭಿವೃದ್ಧಿ ಪಡೆಯುತ್ತೀರಿ. ಪೂಜೆಯ ನಂತರ ದೇವಿಗೆ ನೈವೇದ್ಯ ಮತ್ತು ಆರತಿ ಬೆಳಗುವುದನ್ನು ನೋಡಬೇಡಿ.