Astro Tips: ಈ ವಸ್ತುಗಳನ್ನು ದಾನ ಬೇಡ, ಮನೆಯ ಸುಖ-ಸಮೃದ್ಧಿ ಹಾಳಾಗುತ್ತದೆ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಕಬ್ಬಿಣವನ್ನು ದಾನ ಮಾಡುವ ಮೂಲಕ, ಒಬ್ಬ ವ್ಯಕ್ತಿಯು ಸಾಕಷ್ಟು ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾನೆ ಎನ್ನಲಾಗಿದೆ. ಇದರಿಂದ ವ್ಯಕ್ತಿ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಕಬ್ಬಿಣದ ವಸ್ತುಗಳನ್ನು ದಾನ ಮಾಡುವ ಮೂಲಕ ವ್ಯಕ್ತಿ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಕಬ್ಬಿಣದ ಸಂಬಂಧವನ್ನು ಶನಿದೇವನೊಂದಿಗೆ ಜೋಡಿಸಲಾಗಿದೆ. ಶನಿ ದೇವರು ಕಬ್ಬಿಣದಲ್ಲಿ ನೆಲೆಸಿದ್ದಾನೆ. ಕಬ್ಬಿಣದ ವಸ್ತುಗಳನ್ನು ಯಾರಿಗಾದರೂ ದಾನ ಮಾಡಿದರೆ ಶನಿದೇವನಿಗೆ ಕೋಪ ಬರುತ್ತದೆ ಎಂದು ಹೇಳಲಾಗುತ್ತದೆ.
ವೈದಿಕ ಗ್ರಂಥಗಳ ಪ್ರಕಾರ, ಕಪ್ಪು ಎಳ್ಳು ನೇರವಾಗಿ ರಾಹು ಮತ್ತು ಕೇತುಗಳಿಗೆ ಸಂಬಂಧಿಸಿದೆ. ಇದರೊಂದಿಗೆ ಶನಿದೇವನೊಂದಿಗೂ ಕೂಡ ಕಪ್ಪು ಎಳ್ಳಿನ ಸಂಬಂಧ ಕಲ್ಪಿಸಲಾಗಿದೆ. ಬಿಳಿ ಎಳ್ಳಿನ ದಾನದ ವಿಶೇಷ ಮಹತ್ವವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಆದರೆ ಕಪ್ಪು ಎಳ್ಳನ್ನು ದಾನ ಮಾಡುವುದನ್ನು ನಿಷಿದ್ಧ ಎಂದು ಹೇಳಲಾಗಿದೆ. ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಸಹ ಎದುರಿಸಬೇಕಾಗುತ್ತದೆ.
ಉಪ್ಪನ್ನು ದಾನ ಮಾಡುವುದರಿಂದ ವ್ಯಕ್ತಿ ಸಾಲಬಾಧೆ ಎದುರಿಸುತ್ತಾನೆ ಎಂದು ಹೇಳಲಾಗಿದೆ. ಯಾವುದೇ ನಿರ್ಗತಿಕರಿಗೆ ಉಪ್ಪನ್ನು ದಾನ ಮಾಡಬೇಡಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಉಪ್ಪನ್ನು ದಾನ ಮಾಡುವುದರಿಂದ ವ್ಯಕ್ತಿ ಶನಿಯ ಸಾಡೆಸತಿ ಎದುರಿಸಬೇಕಾಗುತ್ತದೆ. ಅಲ್ಲದೆ, ವ್ಯಕ್ತಿಯು ಕ್ರಮೇಣ ಸಾಲದಲ್ಲಿ ಮುಳುಗುತ್ತಾನೆ ಎನ್ನಲಾಗಿದೆ .
ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯು ವಿಶೇಷ ಫಲವನ್ನು ಪಡೆಯುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇ ರೀತಿ, ಕೆಲವು ವಸ್ತುಗಳ ದಾನವು ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸುತ್ತದೆ. ಇಂತಹುದೇ ವಸ್ತುಗಳಲ್ಲಿ ಬೆಂಕಿ ಪೊಟ್ಟಣ ಕೂಡ ಒಂದು. ಅಪ್ಪಿತಪ್ಪಿಯೂ ಯಾರಿಗೂ ಕೂಡ ಬೆಂಕಿಕಡ್ಡಿಗಳನ್ನು ದಾನವಾಗಿ ಕೊಡಬೇಡಿ. ಏಕೆಂದರೆ ಇದರಿಂದ ಸಂಸಾರದ ನೆಮ್ಮದಿ ಹಾಳಾಗುತ್ತದೆ ಎಂಬ ಮಾತಿದೆ. ಮತ್ತು ಯಾವುದೇ ಕಾರಣವಿಲ್ಲದೆ ಕುಟುಂಬದಲ್ಲಿ ಜಗಳಗಳು ನಡೆಯುತ್ತವೆ.