Astro Tips: ನಿಮ್ಮ ಅಡುಗೆ ಮನೆಯಲ್ಲಿ ಇವು ಖಾಲಿಯಾದ್ರೆ ಬಡತನ ಬೆನ್ನಟ್ಟಿ ಬರುತ್ತದೆ..!
ಹಿಂದೂ ಧರ್ಮದಲ್ಲಿ ಅಡುಗೆಮನೆಯಲ್ಲಿರುವ ಅರಿಶಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆಗೆ ಸಂಬಂಧಿಸಿದ ಪ್ರತಿಯೊಂದು ಕೆಲಸಗಳಲ್ಲಿ ಅರಿಶಿನವನ್ನು ಬಳಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಅರಿಶಿನ ಇಲ್ಲದಿರುವುದು ಅಶುಭ ಮತ್ತು ಇದು ಜಾತಕದಲ್ಲಿ ಗುರುದೋಷವನ್ನುಂಟು ಮಾಡುತ್ತದೆ. ಇದು ಶುಭ ಕಾರ್ಯಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ ಅನ್ನೋ ನಂಬಿಕೆಯಿದೆ.
ಅಕ್ಕಿಯನ್ನು ವಿಶೇಷವಾಗಿ ಆಚರಣೆಗಳಲ್ಲಿ ಬಳಸಲಾಗುತ್ತದೆ. ಅಡುಗೆಮನೆಯಲ್ಲಿ ಅಕ್ಕಿಯನ್ನು ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ, ಅಕ್ಕಿ ಪಾತ್ರೆಯು ಸಂಪೂರ್ಣವಾಗಿ ಖಾಲಿಯಾಗಬಾರದು. ಒಂದು ವೇಳೆ ಅಕ್ಕಿ ಪಾತ್ರೆಯಲ್ಲಿ ಖಾಲಿಯಾಗುತ್ತಿದ್ದರೆ ಅದನ್ನು ತುಂಬಿಸಬೇಕು. ಮನೆಯಲ್ಲಿ ಅಕ್ಕಿಯ ಪಾತ್ರೆ ಖಾಲಿಯಾಗಿದ್ದರೆ ತಾಯಿ ಅನ್ನಪೂರ್ಣೇಶ್ವರಿಯು ನಿಮ್ಮ ಮೇಲೆ ಕೋಪಿಸಿಕೊಂಡಿದ್ದಾಳೆಂದು ಅರ್ಥ. ಇದರ ಪರಿಣಾಮ ಶುಕ್ರದೆಸೆಯು ನಿಮ್ಮಿಂದ ದೂರಾಗುತ್ತದೆ ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.
ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಯಾವಾಗಲೂ ಹಿಟ್ಟನ್ನು ಹೆಚ್ಚಿನ ಪ್ರಮಾಣದಲ್ಲಿಟ್ಟುಕೊಂಡಿರಬೇಕು. ಹೀಗೆ ಮಾಡುವುದರಿಂದ ಹಿಟ್ಟು ಬೇಗನೆ ಖಾಲಿಯಾಗುವುದಿಲ್ಲ ಮತ್ತು ಅದು ಖಾಲಿಯಾಗಲು ಪ್ರಾರಂಭಿಸಿದಾಗ, ಸಮಯಕ್ಕೆ ಮುಂಚಿತವಾಗಿ ಪುನಃ ತುಂಬಿಸಬೇಕು. ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಹಿಟ್ಟು ಖಾಲಿಯಾಗುವುದು ಅಶುಭ ಮತ್ತು ಅದು ಕುಟುಂಬದ ಸದಸ್ಯರ ಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ.
ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿಟ್ಟಿರುವ ಉಪ್ಪಿನ ಪೆಟ್ಟಿಗೆ ಸಂಪೂರ್ಣವಾಗಿ ಖಾಲಿ ಇರಬಾರದು. ಅದು ಖಾಲಿಯಾಗುವ ಮೊದಲು ತುಂಬಿಸಬೇಕು. ಮನೆಯಲ್ಲಿ ಉಪ್ಪು ಖಾಲಿಯಾಗುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಬಂದು ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.