ಇಂದೇ ಈ 5 ವಸ್ತು ಮನೆಗೆ ತನ್ನಿ.. ಲಕ್ಷ್ಮಿ - ಕುಬೇರ ಪ್ರಸನ್ನರಾಗುತ್ತಾರೆ, ಧನ ಕನಕದ ಮಳೆಯೇ ಸುರಿಯುವುದು!
ಮೀನಿನ ಬೆಳ್ಳಿಯ ಪ್ರತಿಮೆ: ವಾಸ್ತು ಶಾಸ್ತ್ರದ ಪ್ರಕಾರ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಉತ್ತಮ ಆರೋಗ್ಯಕ್ಕಾಗಿ ನೀವು ಮೀನಿನ ಬೆಳ್ಳಿಯ ಪ್ರತಿಮೆಯನ್ನು ಮನೆಯಲ್ಲಿ ಇಡಬಹುದು. ಈ ರೀತಿಯ ಪ್ರತಿಮೆಯು ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ.
ಕವಡೆ: ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು, ಬಿಳಿ ಕವಡೆಗಳನ್ನು ಅರಿಶಿನ ಅಥವಾ ಕುಂಕುಮದಲ್ಲಿ ನೆನೆಸಿ ಒಣಗಿಸಿ. ಇವುಗಳ ಬಣ್ಣ ಹಳದಿ ಬಣ್ಣಕ್ಕೆ ತಿರುಗಿದಾಗ ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಕಪಾಟಿನಲ್ಲಿ ಇಡಿ. ಹಳದಿ ಕವಡೆಯು ಲಕ್ಷ್ಮಿ ದೇವಿಯ ಸಂಕೇತವಾಗಿದೆ. ಹೀಗೆ ಇಟ್ಟುಕೊಳ್ಳುವುದರಿಂದ ಹಣ ಬರಲಾರಂಭಿಸುತ್ತದೆ.
ನಾಣ್ಯಗಳು : ಲಕ್ಷ್ಮಿ ಮತ್ತು ಕುಬೇರ ದೇವನ ಆಶೀರ್ವಾದವನ್ನು ಪಡೆಯಲು 3 ನಾಣ್ಯಗಳನ್ನು ಸುರಕ್ಷಿತ ಜಾಗದಲ್ಲಿ ಅಥವಾ ಪರ್ಸ್‌ನಲ್ಲಿ ಇರಿಸಿ. ನೀವು ದೆವರಮನೆಯಲ್ಲಿ ಕೆಂಪು ರಿಬ್ಬನ್‌ನಿಂದ ಕಟ್ಟಿದ 3 ನಾಣ್ಯಗಳನ್ನು ಸಹ ಇರಿಸಬಹುದು. ಈ ರೀತಿ ಮಾಡುವುದರಿಂದ ಅದೃಷ್ಟ ಒಲಿಯುತ್ತದೆ ಮತ್ತು ಅನೇಕ ರೀತಿಯ ಸಮಸ್ಯೆಗಳು ದೂರವಾಗುತ್ತವೆ. ಆರ್ಥಿ ವೃದ್ಧಿಯಾಗುತ್ತದೆ.
ಕಲಶ: ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು, ಅಷ್ಟಭುಜಾಕೃತಿಯ ಕಮಲವನ್ನು ಮಾಡುವ ಮೂಲಕ ಮನೆಯ ಈಶಾನ್ಯ ಮೂಲೆಯಲ್ಲಿ ಮಂಗಲ ಕಲಶವನ್ನು ಸ್ಥಾಪಿಸಬಹುದು. ಆ ಪಾತ್ರೆಯಲ್ಲಿ ನೀರು ತುಂಬಿಸಿ ತಾಮ್ರದ ನಾಣ್ಯವನ್ನು ಹಾಕಿ. ಇದರ ನಂತರ ಮಾವಿನ ಎಲೆಗಳನ್ನು ಜೋಡಿಸಿ, ಅದರ ಮೇಲೆ ತೆಂಗಿನಕಾಯಿಯನ್ನು ಇಡಬೇಕು. ಈ ರೀತಿಯ ಕಲಶ ಸ್ಥಾಪನೆ ಮನೆಯ ಸಿರಿವಂತಿಕೆಯನ್ನು ಹೆಚ್ಚಿಸುತ್ತದೆ.
ಲಕ್ಷ್ಮಿ, ಕುಬೇರ ಮತ್ತು ಗಣೇಶನ ಮೂರ್ತಿ : ಮನೆಯಲ್ಲಿ ಹಣದ ಹರಿವನ್ನು ಹೆಚ್ಚಿಸಲು, ಲಕ್ಷ್ಮಿ, ಕುಬೇರ ಮತ್ತು ಗಣೇಶನ ಮೂರ್ತಿಗಳನ್ನು ಪೂಜಾ ಕೋಣೆಯಲ್ಲಿ ಇಡಬೇಕು. ಈ ಮೂರು ದೇವರುಗಳನ್ನು ಪ್ರತಿನಿತ್ಯ ಸರಿಯಾದ ವಿಧಿವಿಧಾನಗಳೊಂದಿಗೆ ಪೂಜಿಸಬೇಕು. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ.