Astro Tips: ಹೆಣ್ಣು ಮಾಡುವ ಈ ತಪ್ಪುಗಳಿಂದ ಗಂಡ ಮತ್ತು ಮನೆಯವರಿಗೆ ಧನಹಾನಿ!

Wed, 22 May 2024-7:47 am,

ಹೆಣ್ಣು ಮಕ್ಕಳು ತಿಳಿಯದೆ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಈ ಪೈಕಿ ಮೊದಲನೆಯದಾಗಿ ಹೆಣ್ಣು ಮಕ್ಕಳು ಬೆಳಗ್ಗೆ ತಡವಾಗಿ ಏಳುವುದು. ಹೆಣ್ಣು ಮಕ್ಕಳಿಗೆ ಬೆಳಗ್ಗೆ ತಡವಾಗಿ ಏಳುವುದು ಒಳ್ಳೆಯದು ಅಲ್ಲ, ಇದು ದರಿದ್ರವನ್ನು ತರುತ್ತದೆ. ಮನೆಯ ಹೆಣ್ಣು ಮಕ್ಕಳು ಬೆಳಗ್ಗೆ ಬೇಗ ಏಳುವುದರಿಂದ ದೊಡ್ಡ ಬದಲಾವಣೆ ಕಾಣಬಹುದು.

ಎರಡನೇಯದಾಗಿ ಹೆಣ್ಣುಮಕ್ಕಳು ಮನೆಯಲ್ಲಿ ಕೆಟ್ಟ ಮಾತುಗಳನ್ನು ಆಡಬಾರದು. ಯಾಕೆಂದರೆ ಆ ಮನೆ ಏಳಿಗೆ ಆಗುವುದಿಲ್ಲವೆಂದು ಪುರಾಣಗಳು ಹೇಳುತ್ತವೆ. ಜಗಳ ಮಾಡುವ ಹೆಣ್ಣುಮಕ್ಕಳಿದ್ದರೆ ಆ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ಇರುವುದಿಲ್ಲ. ಹೆಣ್ಣುಮಕ್ಕಳು ಲಕ್ಷ್ಮಿದೇವಿಯ ರೂಪ, ಅದರಿಂದ ಖುಷಿಯಿಂದ ಇರುವುದು ಮನೆಗೆ ಒಳಿತಾಗುತ್ತದೆ. ಹೆಣ್ಣಿನ ಕಣ್ಣೀರು ಆ ಮನೆಗೆ ಒಳ್ಳೆಯದಲ್ಲವೆಂದು ಹೇಳಲಾಗಿದೆ.

ಮೂರನೇಯದಾಗಿ ಹೆಣ್ಣುಮಕ್ಕಳು ಬಳಸುವ ಬಳೆ ಹಾಗೂ ಗೆಜ್ಜೆಗಳ್ಳನ್ನು ಬೇರೆಯವರಿಗೆ ಕೊಡಬಾರದು. ಯಾಕೆಂದರೆ ತಾಯಿ ಲಕ್ಷ್ಮಿದೇವಿಯನ್ನು ಬೇರೆಯವರಿಗೆ ಕೊಟ್ಟ ಹಾಗೇ ಆಗುತ್ತದೆ.

ನಾಲ್ಕನೇಯದಾಗಿ ಹೆಣ್ಣು ಮಕ್ಕಳು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಯಾರ ಮನೆ ಸ್ವಚ್ಛವಾಗಿ ಇರುತ್ತದೆಯೋ ಆ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸುತ್ತಾಳೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link