Astro Tips: ಬೇರೆಯವರು ಬಳಸಿದ ಈ ವಸ್ತುಗಳ ಬಳಕೆಯಿಂದ ದರಿದ್ರ ಹೆಗಲೇರಬಹುದು, ಎಚ್ಚರ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೇರೆಯವರು ಬಳಸಿದ ವಸ್ತುಗಳನ್ನು ಬಳಸುವುದರಿಂದ ಅದು ವ್ಯಕ್ತಿಯ ಅದೃಷ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿ ವೃತ್ತಿ ಬದುಕಿನಲ್ಲಿ ಪ್ರಗತಿ ಕುಂಠಿತಗೊಳ್ಳಬಹುದು, ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಎನ್ನಲಾಗುತ್ತದೆ. ಹಾಗಿದ್ದರೆ, ಬೇರೆಯವರ ಯಾವ ವಸ್ತುಗಳನ್ನು ಬಳಸಬಾರದು ಎಂದು ತಿಳಿಯೋಣ...
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಬೇರೆಯವರ ಕೈ ಗೈದ್ಯಾರವನ್ನು ಎಂದಿಗೂ ಧರಿಸಬಾರದು. ಇದರಿಂದ ಜೀವನದಲ್ಲಿ ಕೆಟ್ಟ ಸಮಯ ಆರಂಭವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎನ್ನಲಾಗುತ್ತದೆ.
ನಮ್ಮ ಮನೆಯವರೇ ಆದರೂ ಇತರರ ಆಭರಣಗಳನ್ನು ಧರಿಸುವುದರಿಂದ ಇದು ನಮ್ಮ ಅದೃಷ್ಟದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು ಎಂದು ಹೇಳಲಾಗುತ್ತದೆ.
ಬೇರೆಯವರ ಬಟ್ಟೆಯನ್ನು ಧರಿಸುವುದು ಕೂಡ ಒಳ್ಳೆಯದಲ್ಲ. ಅನಿವಾರ್ಯವಾಗಿ ಧರಿಸಬೇಕಾದ ಸಂದರ್ಭ ಬಂದರೆ ಮೊದಲು ಆ ಬಟ್ಟೆಯನ್ನು ವಾಶ್ ಮಾಡಿ ಬಳಿಕ ಧರಿಸಿ. ಇಲ್ಲದಿದ್ದರೆ, ದುರಾದೃಷ್ಟ ಹೆಗಲೇರುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಪಾದರಕ್ಷೆಯಲ್ಲಿ ಶನಿ ನೆಲೆಸಿರುತ್ತಾನೆ ಎನ್ನಲಾಗುತ್ತದೆ. ಇತರರ ಪಾದರಕ್ಷೆಗಳನ್ನು ಧರಿಸುವುದರಿಂದ ಶನಿಯ ಕೋಪಕ್ಕೆ ತುತ್ತಾಗಬಹುದು. ಮಾತ್ರವಲ್ಲ, ಇದರಿಂದ ಧನ ನಷ್ಟ ಸಂಭವವೂ ಇದೆ ಎನ್ನಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.