ಚಿನ್ನ ಅಲ್ಲ, ಬೆಳ್ಳಿ ಉಂಗುರ ಧರಿಸುವುದರಿಂದ ಸಿಗುವ ಪ್ರಯೋಜನಗಳಿವು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನದ ಬದಲಿಗೆ ಬೆಳ್ಳಿ ಉಂಗುರ ಧರಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಬೆಳ್ಳಿ ಉಂಗುರ ಧಾರಣೆಯಿಂದ ಆರೋಗ್ಯಕ್ಕೆ ಸಿಗುವ ಪ್ರಮುಖ ಪ್ರಯೋಜನಗಳೆಂದರೆ...
ಬೆಳ್ಳಿ ಉಂಗುರವು ಮನಸ್ಸನ್ನು ಶಾಂತಗೊಳಿಸಿ, ಖಿನ್ನತೆಯಿಂದ ಪರಿಹಾರವನ್ನು ನೀಡುತ್ತದೆ.
ಮಕ್ಕಳು ಸಿಲ್ವರ್ ರಿಂಗ್ ಧರಿಸುವುದರಿಂದ ಮಕ್ಕಳಲ್ಲಿ ಮೆಮೋರಿ ಪವರ್ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ಜಾತಕದ ಪ್ರಕಾರ ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ಯಶಸ್ಸು, ಸಂಪತ್ತು, ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಬೆಳ್ಳಿ ಉಂಗುರ ಧರಿಸುವುದರಿಂದ ಕೆಲಸದಲ್ಲಿ ಕಾರ್ಯಕ್ಷಮತೆ ಹೆಚ್ಚಾಗಿ ವೃತ್ತಿ ಬದುಕಿನಲ್ಲಿ ಎದುರಾಗಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಬೆಳ್ಳಿ ಉಂಗುರ ಧರಿಸುವುದರಿಂದ ಕೋಪ ನಿಯಂತ್ರಿಸಲು ಹಾಗೂ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯಕ.
ಬೆಳ್ಳಿ ಉಂಗುರ ಧಾರಣೆಯಿಂದ ಕೇವಲ ಮಾನಸಿಕ ಆರೋಗ್ಯ ಮಾತ್ರವಲ್ಲ, ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ಅದರಲ್ಲೂ ಮುಖ್ಯವಾಗಿ ಸಂಧಿವಾತ, ಕೀಳು ನೋವಿನಂತಹ ಸಮಸ್ಯೆಗಳಿಗೆ ಇದು ತುಂಬಾ ಲಾಭದಾಯಕ ಎನ್ನಲಾಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.