Astro Tips: ಕನ್ಯಾ ರಾಶಿಯಲ್ಲಿ ಸೂರ್ಯ ಸಂಕ್ರಮಣ; ಈ ರಾಶಿಗಳಿಗೆ ಭರ್ಜರಿ ಲಾಭ ಸಿಗಲಿದೆ!
ಸೂರ್ಯನು ಸೆಪ್ಟೆಂಬರ್ 16ರಂದು 7.29ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ಮತ್ತು ಬುಧ ಸ್ನೇಹಿ ಗ್ರಹಗಳಾಗಿದ್ದರೂ, ಕನ್ಯಾ ರಾಶಿಯಲ್ಲಿ ಸೂರ್ಯನು ಅವಳಿಯಾಗಿರುವುದರಿಂದ ಸೂರ್ಯನಿಗೆ ಇದು ಅತ್ಯುತ್ತಮ ಸ್ಥಾನವಲ್ಲ. ಆದರೆ ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಕೆಲವು ಸ್ಥಳೀಯರು ಅದೃಷ್ಟ ಪಡೆಯಲಿದ್ದಾರೆ. ಕನ್ಯಾ ರಾಶಿಯಲ್ಲಿ ಸೂರ್ಯ ಸಂಕ್ರಮಣದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಅನ್ನೋದರ ಬಗ್ಗೆ ತಿಳಿಯಿರಿ.
ಮೇಷ ರಾಶಿಯವರಿಗೆ ಸೂರ್ಯ ಗ್ರಹವು 5ನೇ ಮನೆಗೆ ಅಧಿಪತಿ. ಇದೀಗ ಅದು ಮೇಷ ರಾಶಿಯವರ ಸ್ಪರ್ಧೆ, ಸಾಲ & ಶತ್ರುಗಳ 6ನೇ ಮನೆಗೆ ಹೋಗುತ್ತದೆ. ಅಧ್ಯಯನ ಮಾಡುವ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವವರಿಗೆ ಕನ್ಯಾ ರಾಶಿಯಲ್ಲಿ ಸೂರ್ಯ ಸಂಕ್ರಮಣದಿಂದ ಲಾಭವಾಗಲಿದೆ. ಸೃಜನಶೀಲತೆ, ನಾಟಕ, ಮನರಂಜನೆ, ಸಂಗೀತ ಇತ್ಯಾದಿಗಳಲ್ಲಿ ತೊಡಗಿರುವ ಮೇಷ ರಾಶಿಯವರಿಗೆ ಉತ್ತಮ ಸಮಯವಾಗಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಸರಿಯಾದ ಮನ್ನಣೆ ಪಡೆಯುತ್ತೀರಿ. ಹೂಡಿಕೆಯಲ್ಲಿ ನೀವು ಬಹಳ ಜಾಗರೂಕರಾಗಿರಿ. ಒಟ್ಟಾರೆ ಮೇಷ ರಾಶಿಯವರಿಗೆ ಇದು ಉತ್ತಮ ಸಮಯವಾಗಿರುತ್ತದೆ.
ಸೂರ್ಯ ಗ್ರಹವು ಕರ್ಕ ರಾಶಿಯವರ 2ನೇ ಮನೆಯನ್ನು ಆಳುತ್ತದೆ. ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರದ ಸಮಯದಲ್ಲಿ ಸೂರ್ಯ ಗ್ರಹವು ಕರ್ಕ ರಾಶಿಯ 3ನೇ ಮನೆಗೆ ಸಾಗಲಿದೆ. ಕರ್ಕಾಟಕ ರಾಶಿಯವರು ಈ ಅವಧಿಯಲ್ಲಿ ಸಂತೋಷವಾಗಿರುತ್ತಾರೆ. ಈ ರಾಶಿಯವರ ಎಲ್ಲಾ ಆರೋಗ್ಯ ಸಮಸ್ಯೆಗಳು ದೂರವಾಗಲಿವೆ. ವೃತ್ತಿಪರವಾಗಿ ಬೆಳೆಯಲು ಉತ್ತಮ ಅವಕಾಶಗಳಿವೆ. ಕೆಲಸದಲ್ಲಿ ನಿಮ್ಮ ಶ್ರದ್ಧೆಯನ್ನು ಗುರುತಿಸಲಾಗುತ್ತದೆ. ನಿಮ್ಮ ಗುರಿಯತ್ತ ಕೆಲಸ ಮಾಡಿದರೆ ಯಶಸ್ವಿಯಾಗುತ್ತೀರಿ. ಶೀಘ್ರವೇ ನೀವು ಒಳ್ಳೆಯ ಅವಕಾಶಗಳನ್ನು ಪಡೆಯುತ್ತೀರಿ.
ಸೂರ್ಯ ಗ್ರಹವು ಪ್ರಸ್ತುತ ವೃಶ್ಚಿಕ ರಾಶಿಯ 11ನೇ ಮನೆಯಲ್ಲಿ ಸಂಚರಿಸುತ್ತಿದೆ. ವೃಶ್ಚಿಕ ರಾಶಿಯ 10ನೇ ಮನೆಗೆ ಸೂರ್ಯನ ಅಧಿಪತಿಯಾಗಿದೆ. ಈ ಸೂರ್ಯನ ಸಂಚಾರದಿಂದ ವೃಶ್ಚಿಕ ರಾಶಿಯವರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ನಿಮ್ಮ ಆದಾಯ ಹೆಚ್ಚಾಗಲಿದ್ದು, ಹಣ ಗಳಿಸುವ ಸಾಮರ್ಥ್ಯ ಹೆಚ್ಚಾಗಲಿದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಸಂಪತ್ತಿನಿಂದಲೇ ನೀವು ಅಧಿಕ ಹಣ ಸಂಪಾದಿಸಬಹುದು. ನೀವು ಮನೆಯಲ್ಲಿ ಶಾಂತಿಯುತ ವಾತಾವರಣ ಹೊಂದಿದ್ದರೆ, ಕೌಟುಂಬಿಕ ಜೀವನವು ನಿಮಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ಈ ಸಂಚಾರದಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ಸಿಗಲಿದೆ.
ಧನು ರಾಶಿಯ 9ನೇ ಮನೆಯ ಅಧಿಪತಿಯಾದ ಸೂರ್ಯನು ಈ ಸಂಕ್ರಮಣದಲ್ಲಿ ಧನು ರಾಶಿಯ 10ನೇ ಮನೆಗೆ ಸಾಗಲಿದೆ. ಸೂರ್ಯನು ಕನ್ಯಾ ರಾಶಿಯನ್ನು ಸಂಕ್ರಮಿಸುವಾಗ ಧನು ರಾಶಿಯ ೧೦ನೇ ಮನೆಯ ಮೂಲಕ ಸಾಗಲಿದೆ. ಇದು ನಿಮಗೆ ಹೆಚ್ಚುವರಿ ಶಕ್ತಿ ನೀಡುತ್ತದೆ. ವಿಶೇಷವಾಗಿ ವೃತ್ತಿಪರ ಕ್ಷೇತ್ರದಲ್ಲಿ ಅನುಕೂಲಕರ ಫಲಿತಾಂಶ ಲಭಿಸಲಿವೆ. ಉದ್ಯೋಗದಲ್ಲಿ ಮುನ್ನಡೆಯಲು ಉತ್ತಮ ಮಾರ್ಗಗಳನ್ನು ಕಂಡುಕೊಳ್ಳುತ್ತೀರಿ. ನೀವು ಇದೀಗ ಮಾಡುತ್ತಿರುವ ಎಲ್ಲಾ ಕೆಲಸಗಳಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿವೆ.