Astro Tips: ಜುಲೈನಲ್ಲಿ ರೂಪುಗೊಂಡಿರುವ 2 ರಾಜಯೋಗಗಳಿಂದ ಈ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ!
ಜುಲೈ ತಿಂಗಳಿನಲ್ಲಿ ಬುಧಾದಿತ್ಯ & ಸುಕ್ರಾದಿತ್ಯ ಯೋಗದಿಂದ ಕೆಲವು ರಾಶಿಗಳು ಸಾಕಷ್ಟು ಅನಿರೀಕ್ಷಿತ ಪ್ರಯೋಜನ ಪಡೆಯಲಿವೆ. ಈ ಎರಡು ಯೋಗಗಳ ಕಾರಣದಿಂದ ಕೆಲವು ಸ್ಥಳೀಯರು ರಾಜನಂತೆ ಜೀವನ ನಡೆಸಬಹುದು. ಸಂಪತ್ತು ಮತ್ತು ಸಮೃದ್ಧಿಯನ್ನು ಹೊಂದಲು ತಮ್ಮ ಜೀವನದಲ್ಲಿ ಅದೃಷ್ಟ ಪಡೆಯುತ್ತಾರೆ. ಈ ಎರಡು ರಾಜಯೋಗಗಳಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.
ಜುಲೈ ತಿಂಗಳಿನಲ್ಲಿ ರೂಪುಗೊಂಡಿರುವ ಬುಧಾದಿತ್ಯ ಮತ್ತು ಸುಕ್ರಾದಿತ್ಯ ಯೋಗವು ಕರ್ಕ ರಾಶಿಯವರಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಇದು ಈ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮನೆ ಬಾಗಿಲಿಗೆ ಅದೃಷ್ಟವು ಬರಲಿದ್ದು, ಈ ಅವಧಿಯಲ್ಲಿ ನೀವು ಸಮಾಜದಲ್ಲಿ ಜನಪ್ರಿಯ & ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದುತ್ತೀರಿ. ಇದರಿಂದ ಭವಿಷ್ಯದಲ್ಲಿ ಕರ್ಕಾಟಕ ರಾಶಿಯವರಿಗೆ ಲಾಭವಾಗಲಿದೆ. ಈ ಅವಧಿಯಲ್ಲಿ ಬುದ್ಧಿವಂತಿಕೆಯು ಹೆಚ್ಚಾಗುತ್ತದೆ. ಕರ್ಕ ರಾಶಿಯವರು ತಮ್ಮ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಈ ಯೋಗಗಳಿಂದ ಕೆಲವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಬುಧಾದಿತ್ಯ ಮತ್ತು ಸುಕ್ರಾದಿತ್ಯ ಯೋಗಗಳು ತುಲಾ ರಾಶಿಯವರ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ತರುತ್ತವೆ. ತುಲಾ ರಾಶಿಯವರು ಬಾಕಿ ಉಳಿದಿರುವ ಕೆಲಸಗಳನ್ನು ಈ ಅವಧಿಯಲ್ಲಿ ಪೂರ್ಣಗೊಳಿಸಬಹುದು. ಉದ್ಯಮಿಗಳು ಅಪಾರ ಲಾಭವನ್ನು ಗಳಿಸಬಹುದು. ಇವರ ಆದಾಯ ಈ ಸಮಯದಲ್ಲಿ ಹೆಚ್ಚಾಗುತ್ತದೆ. ಇದರಿಂದ ತುಲಾ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವ್ಯಾಪಾರಸ್ಥರು ಸಾಕಷ್ಟು ಹಣ ಗಳಿಸುವ ಅವಕಾಶವನ್ನು ಪಡೆಯುತ್ತಾರೆ. ಉದ್ಯಮಿಗಳಿಗೆ ಇದು ಯಶಸ್ವಿ ಅವಧಿಯಾಗಿದ್ದು, ಕುಟುಂಬದ ಸಂಬಂಧಗಳು ಬಲಗೊಳ್ಳುತ್ತವೆ. ನಿಮ್ಮ ಮಗುವಿನ ಪ್ರಗತಿಯಲ್ಲಿ ಮನಸ್ಸು ಸಂತೋಷದಿಂದ ತುಂಬಿರುತ್ತದೆ. ಈ ಅವಧಿಯಲ್ಲಿ ಅವರ ಆರೋಗ್ಯ ಉತ್ತಮವಾಗಿರುತ್ತದೆ.
ಈ ಎರಡೂ ರಾಜಯೋಗಗಳು ಕನ್ಯಾ ರಾಶಿಯವರಿಗೆ ಲಾಭದಾಯಕವಾಗಿದ್ದು, ಇವರ ಆದಾಯ ಹೆಚ್ಚಾಗುತ್ತದೆ. ಬುಧಾದಿತ್ಯ ಮತ್ತು ಸುಕ್ರಾದಿತ್ಯ ಯೋಗದಿಂದ ಸಮಾಜದಲ್ಲಿ ಆದಾಯ & ಗೌರವ ಹೆಚ್ಚಾಗುತ್ತದೆ. ಉದ್ಯೋಗಿ ಮತ್ತು ವ್ಯಾಪಾರಸ್ಥರಿಗೆ ತಮ್ಮ ಕ್ಷೇತ್ರಗಳಲ್ಲಿ ಧನಾತ್ಮಕ ಫಲಿತಾಂಶ ಪಡೆಯಲು ಇದು ಮಂಗಳಕರ ಸಮಯ. ಇದರಿಂದ ಅವರ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿಯು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಸಮಯದಲ್ಲಿ ಆಸ್ತಿ ಅಥವಾ ವಾಹನ ಖರೀದಿಸಲು ಸಾಧ್ಯವಾಗುತ್ತದೆ. ಹೂಡಿಕೆಗೆ ಇದು ಅನುಕೂಲಕರ ಸಮಯ ಮತ್ತು ದೀರ್ಘಕಾಲದವರೆಗೆ ಖರೀದಿಸಿದ ಹಣವನ್ನು ನೀವು ಮರಳಿ ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಪತಿ-ಪತ್ನಿಯರ ನಡುವೆ ಸಂತೋಷ, ಪ್ರೀತಿ, ಆಕರ್ಷಣೆ ಹೆಚ್ಚಾಗುತ್ತದೆ.