Astro Tips: ಈ 5 ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರಿಗೂ ದಾನ ಮಾಡಬಾರದು
ಹೆಣ್ಣು ಮಕ್ಕಳಿಗೆ ತಮ್ಮ ಆಭರಣಗಳನ್ನು ಹಂಚಿಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ತಾಳಿ ಸರ & ಕಾಲುಂಗುರವನ್ನು ಇನ್ನೊಬ್ಬರಿಗೆ ಹಾಕಿಕೊಳ್ಳಲು ಕೊಡಬಾರದು. ಇದರಿಂದ ನಿಮ್ಮ ಸೌಭಾಗ್ಯವನ್ನು ಇತರರಿಗೆ ನೀಡಿದಂತಾಗುತ್ತದೆ.
ಚಾಕು ಮತ್ತು ಚೂರಿಯಂತಹ ಹರಿತ ಆಯುಧಗಳನ್ನು ಇತರರಿಗೆ ದಾನ ಮಾಡಿದರೆ ಅದರಿಂದ ನಿಮ್ಮ ಸಂಬಂಧ ಕಡಿದುಕೊಂಡತಾಗಬಹುದು. ಈ ವಸ್ತುಗಳು ದಾನ ಮಾಡುವುದು ಅಶುಭ. ಹೀಗಾಗಿ ಇವುಗಳನ್ನು ಎಂದಿಗೂ ದಾನ ಮಾಡಬಾರದು.
ನೀವು ಬಳಸುವ ಕರ್ಚೀಫ್‌ಅನ್ನು ಸಹ ಯಾರಿಗೂ ದಾನ ಮಾಡಬಾರದು. ಇದರಿಂದ ನಿಮ್ಮ ಮುಖ & ಹಣೆಯನ್ನು ಒರೆಸಿಕೊಳ್ಳುತ್ತಿರುತ್ತೀರಿ. ಇದನ್ನು ದಾನ ಮಾಡುವುದರಿಂದ ನಿಮ್ಮ ಹಣೆಯಲ್ಲಿರುವ ಅದೃಷ್ಟ ರೇಖೆ ಇನ್ನೊಬ್ಬರ ಪಾಲಾಗಬಹುದು.
ಹೆಸರೇ ಹೇಳುವಂತೆ ಇದು ಬೆಂಕಿ ಹಚ್ಚಲು ನೆರವಾಗುವ ಸಾಧನ. ಹೀಗಾಗಿ ಇದನ್ನು ದಾನ ಮಾಡುವುದರಿಂದ ಇಬ್ಬರ ನಡುವಿನ ಸಂಬಂಧ ಹಾಳಾಗಬಹುದು ಎಂಬುದು ನಂಬಿಕೆ ಇದೆ.
ನೀವು ಪರಿಚಿತರ ಮನೆಗೆ ಹೋದಾಗ ಅಕ್ವೇರಿಯಂ ಇಷ್ಟವಾಯಿತೆಂದು ದಾನದ ರೂಪದಲ್ಲಿ ತರಬಾರದು. ನೀವು ಯಾರಿಗೂ ಅಪ್ಪಿತಪ್ಪಿಯೂ ಇದನ್ನು ಗಿಫ್ಟ್ ಆಗಿ ಕೊಡಬೇಡಿ. ಅಕ್ವೇರಿಯಂನನ್ನು ದಾನ ಮಾಡಿದರೆ ನಿಮ್ಮ ಬಳಿಯಿರುವ ಸಂಪತ್ತು ಮತ್ತು ಅದೃಷ್ಟ ಇತರರಿಗೆ ದಾನ ಮಾಡಿದಂತಾಗುತ್ತದೆ.