Astro Tips: ಬೆಳಗ್ಗೆ ಈ ಕೆಲಸ ಮಾಡಿದ್ರೆ ಲಕ್ಷ್ಮಿದೇವಿ ಆಶೀರ್ವಾದದ ಜೊತೆಗೆ ಧನಲಾಭವಾಗಲಿದೆ!
ಬೆಳಗಿನ ಸಮಯವು ಶಕ್ತಿಯಿಂದ ತುಂಬಿರುತ್ತದೆ ಮತ್ತು ಧನಾತ್ಮಕತೆಯನ್ನು ತರುತ್ತದೆ. ಬೆಳಗ್ಗೆ ಎದ್ದು ಕೆಲವು ಕೆಲಸಗಳನ್ನು ಮಾಡುವುದರಿಂದ ಯಶಸ್ಸು, ಪ್ರಗತಿ, ಸಂಪತ್ತು, ಕೀರ್ತಿ ಮತ್ತು ಸಮೃದ್ಧಿ ದೊರೆಯುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯನ್ನು ಅಂಗೈಯಲ್ಲಿ ನೆಲೆಸಿದ್ದಾಳೆಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಎದ್ದ ನಂತರ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಎರಡೂ ಅಂಗೈಗಳನ್ನು ನೋಡುವುದು.
ಬೆಳಗ್ಗೆ ಸ್ನಾನ ಮಾಡಿದ ನಂತರ ಗಂಗಾಜಲ ಅಥವಾ ಅರಿಶಿನವನ್ನು ಇಡೀ ಮನೆಗೆ ಸಿಂಪಡಿಸಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದ ನಂತರ ಸ್ನಾನ ಮಾಡಿ, ನಿಮ್ಮ ನೆಚ್ಚಿನ ದೇವರನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಸುಖ, ಸಮೃದ್ಧಿ, ಐಶ್ವರ್ಯ ಮತ್ತು ಸಮೃದ್ಧಿ ಲಭಿಸುತ್ತದೆ.
ಬೆಳಗ್ಗೆ ಸ್ನಾನ ಮಾಡಿದ ನಂತರ ಹಸುವಿಗೆ ಪೂಜೆ ಸಲ್ಲಿಸಬೇಕು ಮತ್ತು ಅದಕ್ಕೆ ರೊಟ್ಟಿ ತಿನ್ನಿಸಬೇಕು. ದೇವ-ದೇವತೆಗಳು ಇದರಿಂದ ಸಂತುಷ್ಟರಾಗಿ ತಮ್ಮ ಆಶೀರ್ವಾದವನ್ನು ನೀಡುತ್ತವೆಂದು ನಂಬಲಾಗಿದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)