Astro Tips: ರಾತ್ರಿ ಮಲಗುವಾಗ ತಲೆಕೆಳಗೆ ಒಂದು ರೂಪಾಯಿ ನಾಣ್ಯ ಇಟ್ಟುಕೊಂಡರೆ ಏನಾಗುತ್ತೆ?
ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿ ಮನೆಯ ಮೇಲೆ ಪ್ರಭಾವ ಬೀರುತ್ತಿದ್ದರೆ, ಅದರಲ್ಲೂ ಹೆಚ್ಚಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದ್ದರೆ ಕೇವಲ ಒಂದೇ 1 ರೂ. ನಾಣ್ಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಒಂದು ವೇಳೆ ಬೇರೆಯವರ ಕೆಟ್ಟ ದೃಷ್ಟಿ, ದುಷ್ಟ ದೃಷ್ಟಿ, ಆರೋಗ್ಯ ದೃಷ್ಟಿ ನಿಮ್ಮನ್ನು ಕಾಡುತ್ತಿದ್ದರೆ ರಾತ್ರಿ ಮಲಗುವಾಗ 1 ರೂ. ನಾಣ್ಯ ತೆಗೆದುಕೊಂಡು ಕಾಲಿನಿಂದ ತಲೆಯ ತನಕ ಹಾಗೂ ತಲೆಯಿಂದ ಕಾಲಿನ ತನಕ 7 ಬಾರಿ ನಿವಾಳಿಸಿ ಯಾರೂ ನೋಡದ ಹಾಗೆ 1 ರೂ. ನಾಣ್ಯವನ್ನು ಬಚ್ಚಿಡಬೇಕು.
ಈ ಕೆಲಸವನ್ನು ಮಾಡಬೇಕಾದರೆ ಯಾರೂ ಸಹ ನಿಮ್ಮನ್ನು ನೋಡಬಾರದು. ರಾತ್ರಿ ಕಳೆದ ನಂತರ ಮರುದಿನ ಹರಿಯುವ ನದಿಯಲ್ಲಿ ಅಥವಾ ಹರಿಯುವ ನೀರಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಆ 1 ರೂ. ನಾಣ್ಯವನ್ನು ತೇಲಿ ಬಿಡಬೇಕು.
ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ದುಷ್ಟಶಕ್ತಿಗಳ ಪ್ರಭಾವ ನಿವಾರಣೆಯಾಗುತ್ತದೆ. ಒಂದು ವೇಳೆ ಹರಿಯುವ ನದಿಯಲ್ಲಿ ಬಿಡಲು ಸಾಧ್ಯವಾಗದಿದ್ದರೆ, ಆಗ 1 ರೂ. ನಾಣ್ಯವನ್ನು ಯಾರು ಓಡಾಡದಿರುವ ಜಾಗದಲ್ಲಿ ಒಂದು ಗುಂಡಿ ತೆಗೆದು ನಾಣ್ಯವನ್ನು ಅಲ್ಲಿ ಹಾಕಿ ನಂತರ ಮಣ್ಣಿನಿಂದ ಮುಚ್ಚಬೇಕು.
ಈ ಕೆಲಸ ಮಾಡಬೇಕಾದರೆ ಯಾರ ಹತ್ತಿರವೂ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಳ್ಳಬಾರದು. ಈ ಕೆಲಸ ಮಾಡಬೇಕಾದರೆ ಯಾರೂ ಕೂಡ ನೋಡಬಾರದು. ಈ ರೀತಿ ಮಾಡುವುದರಿಂದ ನಿಮಗಿರುವ ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ನೀವು ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ನಡೆಸಬಹುದು.