Astro Tips: ಯಾವ ದೇವರಿಗೆ ಯಾವ ಹೂವಿನಿಂದ ಪೂಜಿಸಬೇಕು

Mon, 19 Aug 2024-4:56 pm,

ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾವಿಷ್ಣುವಿಗೆ ತುಳಸಿ, ಕಿಸ್ಕಾರ ಹೂಗಳಿಂದ ಪೂಜೆ ಮಾಡಿದರೆ ಅತ್ಯಂತ ಶ್ರೇಯಸ್ಕರವಾದುದು. ತುಳಸಿ ತಾಯಿ ಲಕ್ಷ್ಮೀದೇವಿಯನ್ನು ಪ್ರತಿನಿಧಿಸುತ್ತದೆ.

ಮಹಾವಿಷ್ಣುವಿನ ಅಂಶವಾದ ಕೃಷ್ಣನನ್ನು ಪೂಜೆ ಮಾಡುವಾಗ ತುಳಸಿ, ಪಾರಿಜಾತ ಪುಷ್ಪ ಇರಲೇಬೇಕು.

ವಿಘ್ನ ನಿವಾರಕ ಗಣೇಶನಿಗೆ ಎಕ್ಕದ ಹೂವಿನ ಮಾಲೆ ಅತ್ಯಂತ ಶ್ರೇಷ್ಠ. ಗಣೇಶ ಹಬ್ಬಗಳಂದು ಗಣಪನ ಮೂರ್ತಿಗೆ ಎಕ್ಕದ ಹಾರ ಹಾಕುವುದನ್ನು ನೋಡಿರಬಹುದು. ಇದು ವಾಸ್ತು ದೋಷವನ್ನೂ ಸರಿಪಡಿಸುತ್ತದೆ.

ವಾನರ ರೂಪಿ ಆಂಜನೇಯನಿಗೆ ಮಲ್ಲಿಗೆ ಹೂವೆಂದರೆ ಬಲು ಇಷ್ಟ. ಆಂಜನೇಯನಿಗೆ ಮಲ್ಲಿಗೆ ಹೂವಿನಿಂದ ಪೂಜೆ ಮಾಡಿದರೆ ಆತ ಪ್ರಸನನ್ನಾಗುತ್ತಾನೆ.

ದುರ್ಗಾಮಾತೆ, ಕಾಳಿ & ಚಾಮುಂಡಿ ದೇವಿ ಸೇರಿದಂತೆ ಅಮ್ಮನವರ ಪೂಜೆಯಲ್ಲಿ ಕೆಂಪು ಬಣ್ಣದ ದಾಸವಾಳವಿದ್ದರೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ತಾಯಿ ಲಕ್ಷ್ಮೀದೇವಿ ಎಂದರೆ ತಕ್ಷಣ ನೆನಪಾಗುವುದು ಕಮಲದ ಹೂವುಗಳು. ಲಕ್ಷ್ಮೀದೇವಿಯನ್ನು ಕಮಲದ ಹೂವುಗಳಿಂದ ಪೂಜಿಸಿದರೆ ವಿಶೇಷವಾಗಿರುತ್ತದೆ.

ವಿದ್ಯಾದೇವತೆ ಸರಸ್ವತಿ ದೇವಿಯನ್ನು ಪೂಜೆ ಮಾಡುವಾಗ ಪಾಲಾಶ ಹೂವನ್ನು ಇಡುವುದು ವಾಡಿಕೆ. ಈ ಹೂವುಗಳನ್ನು ಜ್ಞಾನದ ಸಂಕೇತ ಎನ್ನಲಾಗುತ್ತದೆ.

ಭಗವಾನ್ ಶಿವನಿಗೆ ಬಿಲ್ವಪತ್ರೆ ಮೆಚ್ಚಿನ ಹೂವು. ಶಿವನನ್ನು ಆರಾಧಿಸುವಾಗ ಬಿಲ್ವ ಪತ್ರೆಯನ್ನು ಅರ್ಪಿಸಿದರೆ ನಮ್ಮ ಅನೇಕ ದೋಷಗಳು ನಿವಾರಣೆಯಾಗುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link