ಒಂದು ಲೋಟ ನೀರಿನಿಂದ, ನಿಮ್ಮ ಸಕಲ ಸಂಪತ್ತಿನ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ..!
)
Astrological Water Remedies: ದೇವರಿಗೆ ನೀರನ್ನು ಅರ್ಪಿಸುವುದು ಹಿಂದೂ ಧರ್ಮದಲ್ಲಿ ಒಂದು ಸಂಪ್ರದಾಯವಾಗಿದೆ. ಇದನ್ನು ಅಭಿಷೇಕ ಎಂದೂ ಕರೆಯುತ್ತಾರೆ. ವಾರದ ಪ್ರತಿ ದಿನ ವಿವಿಧ ದೇವತೆಗಳಿಗೆ ನೀರನ್ನು ಅರ್ಪಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ.
)
ಯಾವುದೇ ದೇವತೆಯನ್ನು ಪೂಜಿಸುವಾಗ ಅಭಿಷೇಕ ಮಾಡುವುದು ಅವಶ್ಯಕ, ಅಂದರೆ ದೇವರ ವಿಗ್ರಹದ ಮೇಲೆ ನೀರು ಹಾಕುವುದರಿಂದ ನಿಮಗೆ ನೀವು ಬೇಡಿದ ವರ ಪ್ರಾಪ್ತಿಯಾಗುತ್ತದೆ. ಸಾಮಾನ್ಯವಾಗಿ ಸೂರ್ಯ ಮತ್ತು ಶಿವನಿಗೆ ಮಾತ್ರ ನೀರು ಹಾಕಿ ಅಭಿಷೇಕ ಮಾಡಬೇಕು ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಅದು ತಪ್ಪು.
)
ಧಾರ್ಮಿಕ ಗ್ರಂಥಗಳ ಪ್ರಕಾರ, ಸೂರ್ಯ ದೇವರು ಭಾನುವಾರದ ಅಧಿಪತಿ. ಭಾನುವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕುಂಕುಮ ಮತ್ತು ಕೆಂಪು ಹೂವನ್ನು ಸೇರಿಸಿ ಸೂರ್ಯ ದೇವನಿಗೆ ಪೂಜೆ ಸಲ್ಲಿಸುವುದರಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ಸೋಮವಾರದ ದಿನ ಶಿವನಿಗೆ ನೀರು ಹಾಕಿ ಅಬಿಷೇಕ ಮಾಡುವುದು ತುಂಬಾ ಒಳ್ಳೆಯದು, ಈ ನೀರಿಗೆ ಒಂದಿಷ್ಟು ಅಕ್ಕಿ ಬೆರಸುವುದನ್ನು ಮೆಯಬೇಡಿ. ಶಿವ ಪುರಾಣದ ಪ್ರಕಾರ, ಶಿವನಿಗೆ ಅನ್ನವನ್ನು ಅರ್ಪಿಸುವವರ ಮೇಲೆ ಲಕ್ಷ್ಮಿ ದೇವಿಯ ಕೃಪೆ ಯಾವಾಗಲೂ ಇರುತ್ತದೆ.
ಮಂಗಳವಾರ ಹನುಮಂತನ ನೆಚ್ಚಿನ ದಿನ, ಈ ದಿನದಂದು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಿಂಧೂರ ಸೇರಿಸಿ ಹನುಮನಿಗೆ ಅಭಿಷೇಕ ಮಾಡಿ. ಕಾರಣಾಂತರಗಳಿಂದ ಹನುಮಂತನಿಗೆ ನೀರು ಹಾಕಲು ಸಾಧ್ಯವಾಗದಿದ್ದರೆ ಆಲದ ಮರ ಅಥವಾ ಕತೀರ ಮರಕ್ಕೂ ಈ ನೀರನ್ನು ಹಾಕಬಹುದು.
ಧರ್ಮಗ್ರಂಥಗಳ ಪ್ರಕಾರ, ಬುಧವಾರದ ಅಧಿಪತಿ ಗಣೇಶ. ಈ ದಿನದಂದು ಪ್ರಮುಖ ಪೂಜಕನಾದ ಗಣಪತಿಗೆ ನೀರನ್ನು ಸುರಿಯುವುದರಿಂದ ನಿಮ್ಮ ಎಲ್ಲಾ ಕೆಟ್ಟ ಸಮಸಯವೂ ದೂರವಾಗುತ್ತದೆ. ಈ ನೀರಿಗೆ ಸ್ವಲ್ಪ ಗರಿಕೆ ಸೇರಿಸಿ ಅಬಿಷೇಕ ಮಾಡಿದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.
ಗುರುವಾರವು ವಿಷ್ಣು ಮತ್ತು ಗುರುವಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ಈ ದೇವತೆಗಳಿಗೆ ಜಲಾಭಿಷೇಕ ಮಾಡಬೇಕು. ಕೆಲವು ಕಾರಣಗಳಿಂದ ಇದನ್ನು ಮಾಡಲು ಸಾಧ್ಯವಾಗದಿದ್ದರೆ, ನೀವು ರಾಜ ಮರಕ್ಕೆ ನೀರನ್ನು ಸುರಿಯಬಹುದು ಮತ್ತು ಅದಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಬಹುದು.
ಶುಕ್ರವಾರ ಲಕ್ಷ್ಮಿ ದೇವಿಯ ದಿನ. ನಿಮ್ಮ ಹತ್ತಿರ ಲಕ್ಷ್ಮಿ ವಿಗ್ರವಿಲ್ಲದಿದ್ದರೆ, ನೀವು ಮನೆಯಲ್ಲಿ ತುಳಸಿ ಗಿಡಕ್ಕೆ ನೀರು ಹಾಕಬಹುದು. ಈ ನೀರಿಗೆ ಸ್ವಲ್ಪ ಗುಲಾಬಿ ಹೂಗಳನ್ನು ಸೇರಿಸಿ. ಇದರಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ.
ಶನಿವಾರ ಶನಿದೇವನ ದಿನ. ಈ ದಿನ ಶನಿ ದೇವರಿಗೆ ನೀರಿನಿಂದ ಅಭಿಷೇಕ ಮಾಡಿ ಮತ್ತು ಅದಕ್ಕೆ ಸ್ವಲ್ಪ ಕಪ್ಪು ಎಳ್ಳನ್ನು ಸೇರಿಸಿ. ಹತ್ತಿರದಲ್ಲಿ ಶನಿದೇವನ ದೇವಾಲಯವಿಲ್ಲದಿದ್ದರೆ, ಈ ನೀರನ್ನು ಬನ್ನಿ ಮರಕ್ಕೂ ಸುರಿಯಬಹುದು.