Astrology: ಈ ತಿಂಗಳಿನಲ್ಲಿ ಈ 4 ರಾಶಿಗಳ ಭಾಗ್ಯವೇ ಬದಲಾಗಲಿದೆ, ಒಂದು ರಾಶಿಯ ಜನರಿಗೆ ಶನಿಪೀಡೆಯಿಂದ ಸಂಪೂರ್ಣ ಮುಕ್ತಿ
1. ಮಿಥುನ (Gemini) - ಏಪ್ರಿಲ್ 2022 ಮಿಥುನ ಜಾತಕದ ಜನರ ಪಾಲಿಗೆ ಅತ್ಯಂತ ವಿಶೇಷವಾಗಿರಲಿದೆ. ಕಾರಣ, ಗ್ರಹಗಳ ರಾಶಿ ಪರಿವರ್ತನೆ ಈ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗಲಿದೆ. ಇದರ ಜೊತೆಗೆ ಈ ಜನರ ಪಾಲಿಗೆ ದೊಡ್ಡ ದೊಡ್ಡ ಅವಕಾಶಗಳೇ ಪ್ರಾಪ್ತಿಯಾಗಲಿವೆ. ಇದಲ್ಲದೆ, ಈ ಜಾತಕದವರಿಗೆ ಸಹನೀಯ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿ ಸಿಗಲಿದೆ. ಈ ತಿಂಗಳು ಮಿಥುನ ರಾಶಿಯ ಜನರಿಗೆ ಹಲವು ಆರ್ಥಿಕ ಲಾಭಗಳು ಪ್ರಾಪ್ತಿಯಾಗಲಿವೆ. ನೌಕರಿ-ವ್ಯಾಪಾರದ ವಿಷಯದಲ್ಲಿಯೂ ಕೂಡ ಇವರಿಗೆ ಸಮಯ ಅನುಕೂಲಕರವಾಗಿರಲಿದೆ.
2. ಕನ್ಯಾ (Virgo) - ಕನ್ಯಾ ರಾಶಿಯ ಜಾತಕದವರ ಮೇಲೆ ಗೃಹಗಳ ರಾಶಿ ಪರಿವರ್ತನೆ ವಿಶೇಷ ಪ್ರಭಾವ ಬೀರಲಿದೆ. ನೌಕರಿಯಲ್ಲಿರುವ ಜನರ ಪಾಲಿಗೆ ವಿಶೇಷ ಲಾಭ ಕಾದಿದೆ. ಸರ್ಕಾರಿ ನೌಕರಿಯಲ್ಲಿರುವವರಿಗೆ ವಿಶೇಷ ಲಾಭ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಮಾನ-ಸನ್ಮಾನ ದ್ವಿಗುಣಗೊಳ್ಳಲಿದೆ. ಆದಾಯದ ಹೊಸ ಬಾಗಿಲುಗಳು ತೆರೆದುಕೊಳ್ಳಲಿವೆ. ಕೌಟುಂಬಿಕ ಜೀವನ ಖುಷಿಯಿಂದ ಕೂಡಿರಲಿದೆ.
3. ಮಕರ (Capricorn) - ಮಕರ ರಾಶಿಯ ಜಾತಕ ಹೊಂದಿದವರಿಗೆ ಏಪ್ರಿಲ್ ತಿಂಗಳು ಅತ್ಯಂತ ಶುಭವಾಗಿರಲಿದೆ. ಈ ತಿಂಗಳಿನಲ್ಲಿ ನಿಮ್ಮ ಎಲ್ಲಾ ನಿಂತು ಹೋದ ಕೆಲಸ ಕಾರ್ಯಗಳು ಫಲಿಸಲಿವೆ. ಶನಿದೇವ ನಿಮ್ಮ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲ್ಲಿದ್ದಾನೆ. ಇದರ ನೇರ ಲಾಭ ನಿಮಗೆ ಸಿಗಲಿದೆ. ಈ ತಿಂಗಳು ನಿಮ್ಮ ಆರ್ಥಿಕ ಸ್ಥಿತಿ ಬಲಿಷ್ಠಗೊಳ್ಳಲಿದೆ. ಆದರೆ, ಕೋಪದ ಮೇಲೆ ನಿಯಂತ್ರಣವಿರಲಿ.
4. ಮೀನ ರಾಶಿ - ಮೀನ ರಾಶಿಯ ಜನರಿಗೆ ಏಪ್ರಿಲ್ ತಿಂಗಳು ಅತ್ಯಂತ ಶುಭಕರವಾಗಿರಲಿದೆ. ದೇವಗುರು ಬೃಹಸ್ಪತಿಯ ರಾಶಿ ಪರಿವರ್ತನೆಯಿಂದ (Guru Gochar April 2022) ಮನೆ-ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ. ಬಿಸ್ನೆಸ್ ನಲ್ಲಿರುವವರಿಗೆ ದೊಡ್ಡ ಗುತ್ತಿಗೆ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬಿಸ್ನೆಸ್ ಅನ್ನು ಬದಲಾಯಿಸಲು ಬಯಸುತ್ತಿರುವವರಿಗೆ ಈ ಸಮಯ ಅತ್ಯುತ್ತಮ ಸಾಬೀತಾಗಲಿದೆ. ನೌಕರಿಯಲ್ಲಿರುವವರಿಗೂ ಕೂಡ ಹೊಸ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ.