Astrology:ನಿಮಗೂ ಎಲ್ಲಾದರು ಈ ಬೀಜ ಸಿಕ್ಕರೆ, ನಿಮ್ಮ ಅದೃಷ್ಟ ಖುಲಾಯಿಸಲಿದೆ, ಹಣಕಾಸಿನ ಮುಗ್ಗಟ್ಟು ಎದುರಾಗಲ್ಲ
1. ಕಮಾಲ್ ಮಾಡಲಿದೆ ನಾಗಕೆಷರ ಬೀಜ - ಹಣಕಾಸಿನ ಮುಗ್ಗಟ್ಟನ್ನು ದೂರಗೊಳಿಸುವ ಈ ಬೀಜದ ಹೆಸರು ನಾಗಕೆಸರ. ಇದು ನಿಮ್ಮ ಮನೆಯ ಹಣಕಾಸಿನ ಮುಗ್ಗಟ್ಟಿನಿಂದ ಹಿಡಿದು ಇತರ ಎಲ್ಲಾ ಸಮಸ್ಯೆಗಳ ನಿವಾರಣೆ ಮಾಡುವ ಕ್ಷಮತೆ ಹೊಂದಿದೆ. ಸಾಮಾನ್ಯವಾಗಿ ಈ ಬೀಜ ಅಷ್ಟೊಂದು ಸುಲಭವಾಗಿ ಸಿಗುವುದಿಲ್ಲ. ಆದರೆ, ಅದೃಷ್ಟದಿಂದ ಒಂದು ವೇಳೆ ನಿಮಗೆ ಈ ಬೀಜ ದೊರೆತರೆ ನಿಮ್ಮ ಭಾಗ್ಯದ (Fortune) ಬಾಗಿಲು ತೆರೆದುಕೊಳ್ಳಲಿದೆ.
2. ಪೂಜೆ-ಪುನಸ್ಕಾರದಲ್ಲಿ ಬಳಕೆಯಾಗುತ್ತದೆ ನಾಗಕೆಷರ - ನಾಗಕೆಷರ ಒಂದು ಸಾಮಾನ್ಯ ವನಸ್ಪತಿಯಾಗಿದೆ. ನೋಡಲು ಇದು ಕರಿ ಮೆಣಸಿನ ರೀತಿಯೇ ಇರುತ್ತದೆ. ಈ ಬೀಜವನ್ನು ಹೆಚ್ಚಾಗಿ ಪೂಜೆ-ಪುನಸ್ಕಾರಗಳಲ್ಲಿ ಬಳಸುತ್ತಾರೆ.
3. ಬೀಜದ ತಿಲಕ ಮಾಡಿ ಹಣೆಗೆ ಹಚ್ಚಿಕೊಳ್ಳಿ - ಮನೆಯಲ್ಲಿ ಯಾವುದೇ ರೀತಿಯ ಕಲಹವಿರಲಿ ಅಥವಾ ದಿನನಿತ್ಯ ಜಗಳಗಳೇ ನಡೆಯುತ್ತಿರಲಿ, ಈ ಬೀಜದ ಲೇಪ ತಯಾರಿಸಿ ಅದರ ತಿಲಕವನ್ನು ಹಣೆಗೆ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿನ ಎಲ್ಲಾ ರೀತಿಯ ವ್ಯಾಜ್ಯಗಳು ಕೆಲವೇ ದಿನಗಳಲ್ಲಿ ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ.
4. ಬಟ್ಟೆಯಲ್ಲಿ ಸುದ್ದಿ ತಿಜೋರಿಯಲ್ಲಿಡಿ - ಒಂದು ವೇಳೆ ಸಾಕಷ್ಟು ಕಷ್ಟಪಟ್ಟರೂ ಕೂಡ ಆರ್ಥಿಕ ಸಮಸ್ಯೆಗಳು ನಿಮ್ಮ ಬೆನ್ನು ಬಿಡುತ್ತಿಲ್ಲ ಎಂದಾದರೆ, ಮನೆಯಲ್ಲಿ ಹಣಕಾಸಿನ ಹರಿವು ಹೆಚ್ಚಿಸಲು ಈ ಬೀಜ ತುಂಬಾ ಶುಭಕರ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಯಾವುದಾದರೊಂದು ಶುಭ ಮುಹೂರ್ತ ನೋಡಿ, ನಾಗಕೆಷರ ಹಾಗೂ ಐದು ನಾಣ್ಯಗಳನ್ನು ಸೇರಿಸಿ ಅವುಗಳಿಗೆ ಪೂಜೆ ಸಲ್ಲಿಸಬೇಕು. ನಂತರ ಅವುಗಳನ್ನು ಬಟ್ಟೆಯೊಂದರಲ್ಲಿ ಸುತ್ತಿ ನಿಮ್ಮ ಅಂಗಡಿಯ ಗಲ್ಲಾ ಪೆಟ್ಟಿಗೆ ಅಥವಾ ಆಫಿಸ್ ನ ಕ್ಯಾಶ್ ಬಾಕ್ಸ್ ನಲ್ಲಿಡಿ.
5. ಕೆಲವೇ ದಿನಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳಲಿದೆ - ಇದಲ್ಲದೆ ಒಂದು ಹೊಸ ಹಳದಿ ಬಣ್ಣದ ಬತ್ತಿಯಲ್ಲಿ ನಾಗಕೆಷರ, ಅರಿಶಿನ, ಅಡಿಕೆ , ತಾಮ್ರದ ಲೋಹದ ತುಣುಕು ಅಥವಾ ನಾಣ್ಯ, ಅಕ್ಷತೆ ಹಾಗೂ ಒಂದು ನಾಣ್ಯವನ್ನು ಇರಿಸಿ, ಅದಕ್ಕೆ ಧೂಪ-ದೀಪದಿಂದ ಪೂಜೆ ಸಲ್ಲಿಸಿ ಸಿದ್ಧಿ ಪ್ರಾಪ್ತಿ ಮಾಡಿ. ಬಳಿಕ ಅದನ್ನು ನಿಮ್ಮ ಮನೆಯ ಬೀರುವಿನಲ್ಲಿ ಅಥವಾ ತಿಜೋರಿಯಲ್ಲಿರಿಸಿ. ಹೀಗೆ ಮಾಡುವುದರಿಂದ ಬದಲಾವಣೆ ಖಂಡಿತ ನಿಮ್ಮ ಗಮನಕ್ಕೆ ಬರಲಿದೆ.