ಟೊಮೇಟೊಗಿಂತ ಅಗ್ಗವಾಯಿತು ಬಾದಾಮಿ !ಟೊಮೇಟೊ ಬೆಲೆ ಕೆ.ಜಿಗೆ 85 ಆದರೆ ಬಾದಾಮಿ ಬೆಲೆ 45ರಿಂದ 50ರೂಪಾಯಿ ಅಷ್ಟೇ !

Thu, 01 Aug 2024-9:36 am,

ಇಂದಿನ ಬಿಡುವಿಲ್ಲದ ಜೀವನದಲ್ಲಿ,ಜನರು ಪೌಷ್ಟಿಕಾಂಶದ ಬಗ್ಗೆ ಬಹಳ ಕಡಿಮೆ ಗಮನ ನೀಡುತ್ತಾರೆ.ಆದ್ದರಿಂದ ಜನರು ದೃಷ್ಟಿ ಮತ್ತು ಜ್ಞಾಪಕಶಕ್ತಿಯ ನಷ್ಟದ ಸಮಸ್ಯೆಯನ್ನು ಎದುರಿಸುತ್ತಾರೆ.ಬಾದಾಮಿ ಮೆದುಳು ಮತ್ತು ಕಣ್ಣಿನ ರಕ್ತನಾಳಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. 

ಭಾರತದಲ್ಲಿ ಬಾದಾಮಿ ಬೆಲೆ ಸಾಮಾನ್ಯವಾಗಿ ಪ್ರತಿ ಕೆಜಿಗೆ 800 ರಿಂದ 1000 ರೂಪಾಯಿಗಳಷ್ಟಿರುತ್ತದೆ.ಹಾಗಾಗಿ ಎಲ್ಲರಿಗೂ ಇದನ್ನು ಖರೀದಿಸುವುದು ಸಾಧ್ಯವಾಗುವುದಿಲ್ಲ.   

ಆದರೆ ಟೊಮ್ಯಾಟೋಗಿಂತ ಕಡಿಮೆ ಬೆಲೆಗೆ ಬಾದಾಮಿ ಸಿಗುತ್ತದೆ ಎಂದರೆ ನಂಬುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಇದು ಸತ್ಯ. ದೇಶದಲ್ಲಿ ಟೊಮೆಟೊ ಬೆಲೆ ಕೆಜಿಗೆ 80-100 ರೂಪಾಯಿಗೆ ತಲುಪಿದೆ.ಆದ್ರೆ ಬಾದಾಮಿ ಇದಕ್ಕಿಂತ ಅಗ್ಗ. 

ದೇಶದಲ್ಲಿ ಅತ್ಯಂತ ಅಗ್ಗದ ಒಣ ಹಣ್ಣುಗಳು ಜಾರ್ಖಂಡ್ ರಾಜ್ಯದಲ್ಲಿ ಕಂಡುಬರುತ್ತವೆ. ಜಮ್ತಾಡಾ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಬಾದಾಮಿ ಮರಗಳಿವೆ. ಪ್ರತಿ ವರ್ಷ ಸಾವಿರಾರು ಟನ್ ಬಾದಾಮಿಗಳನ್ನು ಉತ್ಪಾದಿಸುತ್ತದೆ.ಇಲ್ಲಿ ಅಗ್ಗದ ದರದಲ್ಲಿ ಬಾದಾಮಿ ದೊರೆಯುತ್ತದೆ.

 ಜಮ್ಟಾಡಾದಲ್ಲಿ ಬಾದಾಮಿ ಬೆಳೆಸಲಾಗುತ್ತದೆ. ಆದರೆ ಸೂಕ್ತವಾದ ಸಂಸ್ಕರಣಾ ಘಟಕಗಳಿಲ್ಲ.   ಹಾಗಾಗಿ ಇಲ್ಲಿ ಬೆಳೆದ ಬಾದಾಮಿಗಳನ್ನು ಹಾಗೆಯೇ ಮಾರಾಟ ಮಾಡಲಾಗುತ್ತದೆ.   

ಇತರ ನಗರಗಳಲ್ಲಿ ರಸ್ತೆಯಲ್ಲಿ ತರಕಾರಿ ಮಾರುವ ರೀತಿಯಲ್ಲಿ ಜಮ್ತಾಡಾದಲ್ಲಿ ಬಾದಾಮಿಯನ್ನು  ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಹಲವೆಡೆ ರಸ್ತೆಯಲ್ಲೇ ಕುಳಿತು ಬಾದಾಮಿ, ಗೋಡಂಬಿ ಮಾರುತ್ತಾರೆ.ಇದರ ಬೆಲೆ ಸುಮಾರು 45-50 ರೂ.ಯಷ್ಟೇ ಆಗಿರುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link