ಎಟಿಎಂನಿಂದ ಹಣ ವಿತ್ ಡ್ರಾ ಅಷ್ಟೇ ಅಲ್ಲ, ಈ ಕೆಲಸಗಳನ್ನೂ ಮಾಡಬಹುದು
ಎಟಿಎಂ ಎಂದೊಡನೆ ನೆನಪಾಗುವುದು ಹಣ ಹಿಂಪಡೆಯುವಿಕೆ. ಆದರೆ, ಎಟಿಎಂ ಕೇವಲ ಹಣ ವಿತ್ ಡ್ರಾ ಮಾಡಲಷ್ಟೇ ಅಲ್ಲ ಬ್ಯಾಂಕ್‌ಗೆ ಹೋಗದೆ ಬ್ಯಾಂಕಿಂಗ್ ಸಂಬಂಧಿತ ಹಲವು ಕೆಲಸಗಳನ್ನು ಇಲ್ಲಿಯೇ ಪೂರ್ಣಗೊಳಿಸಬಹುದು. ಹಾಗಿದ್ದರೆ, ಎಟಿಎಂನಿಂದ ಮಾಡಬಹುದಾದ ಆ 10 ಕೆಲಸಗಳು ಯಾವುವು ಎಂದು ತಿಳಿಯೋಣ..
ನಿಮಗೆಲ್ಲರಿಗೂ ತಿಳಿದಿರುವುವಂತೆ ಬ್ಯಾಂಕ್‌ಗೆ ಹೋಗದೆ ಎಟಿಎಂನಿಂದ ಹಣ ಸುಲಭವಾಗಿ ಹಣ ವಿತ್ ಡ್ರಾ ಮಾಡಬಹುದು. ಅದೂ ಕೂಡ ದಿನ 24ಗಂಟೆಗಳಲ್ಲೂ ಈ ಸೌಲಭ್ಯ ಲಭ್ಯವಿರುತ್ತದೆ.
ಮೊದಲೆಲ್ಲಾ ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ಪರಿಶೀಲಿಸಲು ಬ್ಯಾಂಕ್‌ಗೆ ಹೋಗಬೇಕಿತ್ತು. ಆದರೆ, ಈಗ ಎಟಿಎಂನಲ್ಲಿ ಮಿನಿ ಸ್ಟೇಟ್‌ಮೆಂಟ್ ಪಡೆಯುವ ಮೂಲಕ ನಿಮ್ಮ ಕೊನೆಯ 10 ವಹಿವಾಟುಗಳನ್ನು ಪರಿಶೀಲಿಸಬಹುದು.
ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್ ಪ್ರಕಾರ, ನೀವು ಎಸ್‌ಬಿಐ ಡೆಬಿಟ್ ಕಾರ್ಡ್‌ನಿಂದ ಬೇರೆ ಕಾರ್ಡ್‌ಗೆ ಹಣ ವರ್ಗಾಯಿಸಬಹುದು. ಇದಕ್ಕಾಗಿ, ಎಟಿಎಂ ಕಾರ್ಡ್, ಪಿನ್ ಜೊತೆಗೆ ನೀವು ಹಣ ವರ್ಗಾವಣೆ ಮಾಡಲು ಬಯಸುವ ಕಾರ್ ಸಂಖ್ಯೆಯೂ ನೆನಪಿರಬೇಕು.
ಎಟಿಎಂ ಮೂಲಕ ಯಾವುದೇ ವೀಸಾ ಕಾರ್ಡ್‌ನ ಬಾಕಿಯನ್ನು ಪಾವತಿಸಬಹುದು.
ಎಟಿಎಂ ಮೂಲಕ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಒಂದು ಎಟಿಎಂ ಕಾರ್ಡ್‌ಗೆ ಗರಿಷ್ಠ 16 ಖಾತೆಗಳನ್ನು ಲಿಂಕ್ ಮಾಡಬಹುದು ಎಂಬುದು ಗಮನಾರ್ಹ.
ನೀವು ಜೀವ ವಿಮಾ ಪ್ರೀಮಿಯಂ ಪಾವತಿ ಮಾಡಬೇಕಿದ್ದರೆ ಎಟಿಎಂನಿಂದ ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಇದಕ್ಕಾಗಿ, ಎಲ್‌ಐಸಿ, ಎಚ್‌ಡಿಎಫ್‌ಸಿ ಲೈಫ್ ಮತ್ತು ಎಸ್‌ಬಿಐ ಲೈಫ್‌ನಂತಹ ಅನೇಕ ವಿಮಾ ಸೇವೆಗಳನ್ನು ಒದಗಿಸುವ ಕಂಪನಿಗಳು ಬ್ಯಾಂಕ್‌ಗಳೊಂದಿಗೆ ಟೈ-ಅಪ್‌ಗಳನ್ನು ಹೊಂದಿವೆ.
ನಿಮ್ಮ ಚೆಕ್ ಲೀವ್ಸ್ ಖಾಲಿಯಾಗಿದ್ದರೆ ಹೊಸ ಚೆಕ್ ಬುಕ್ ಪಡೆಯಲು ನೀವು ಬ್ಯಾಂಕ್‌ಗೆ ಹೋಗಬೇಕೆಂದಿಲ್ಲ. ಬದಲಿಗೆ ಎಟಿಎಂನಲ್ಲಿ ಹೊಸ ಚೆಕ್ ಬುಕ್ ಗಾಗಿ ವಿನಂತಿಸಲ್ಲಿಸಬಹುದು.
ಎಟಿಎಂನಲ್ಲಿ ಯಾವುದೇ ಯುಟಿಲಿಟಿ ಬಿಲ್‌ಗಳನ್ನು ಕೂಡ ನೀವು ಸುಲಭವಾಗಿ ಪಾವತಿಸಬಹುದು. ಆದರೆ, ಇದಕ್ಕಾಗಿ ನೀವು ಬ್ಯಾಂಕಿನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳುವುದು ಅವಶ್ಯಕವಾಗಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಬ್ಯಾಂಕುಗಳು ಖಾತೆಯನ್ನು ತೆರೆದ ತಕ್ಷಣ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಸಹ ನೀಡುತ್ತವೆ. ಆದರೆ, ನೀವಿನ್ನೂ ಈ ಸೇವೆಗಳನ್ನು ಸಕ್ರಿಯಗೊಳಿಸಿಲ್ಲ ಎಂದಾದರೆ ಎಟಿಎಂನಲ್ಲಿ ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
ಸೈಬರ್ ವಂಚನೆಯನ್ನು ತಪ್ಪಿಸಲು ಆಗಾಗ್ಗೆ ಎಟಿಎಂ ಪಿನ್ ಬದಲಾಯಿಸುವುದು ಒಳ್ಳೆಯ ಅಭ್ಯಾಸ. ನಿಮ್ಮ ಎಟಿಎಂ ಕಾರ್ಡ್‌ನ ಪಿನ್ ಬದಲಾವಣೆಯನ್ನು ನೀವು ಬಯಸಿದರೆ ಎಟಿಎಂಗೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸಬಹುದು.