ATM Safety Tips: ಎಟಿಎಂನಿಂದ ಹಣ ಡ್ರಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿರುವುದರಿಂದ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನು ಬಳಸುವಾಗ ಕೆಲವು ಸುರಕ್ಷತೆ ಸಲಹೆಗಳನ್ನು ಅನುಸರಿಸುವುದು ತುಂಬಾ ಅಗತ್ಯ. ಎಟಿಎಂಗಳಲ್ಲಿ ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂಪಡೆಯುವಾಗ ಈ ವಿಷಯಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೆ ನೀವು ವಂಚನೆಗೆ ಬಲಿಯಾಗಬಹುದು.
ನೀವು ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಸಮಯದಲ್ಲಿ ಪಾಸ್‌ವರ್ಡ್ ನಮೂದಿಸುವಾಗ ತುಂಬಾ ಎಚ್ಚರಿಕೆಯಿಂದ ಇರಿ. ಈ ವೇಳೆ ಎಟಿಎಂ ಒಳಗೆ ನಿಮ್ಮ ಅಕ್ಕ-ಪಕ್ಕದಲ್ಲಿ ಯಾರೂ ಇಲ್ಲ ಎಂಬುದನ್ನೂ ಖಚಿತಪಡಿಸಿಕೊಳ್ಳಿ. ಇಲ್ಲವೇ, ನಿಮಗೇ ಗೊತ್ತಿಲ್ಲದೆ ನಿಮ್ಮ ಪಾಸ್‌ವರ್ಡ್ ಅನ್ನು ಬೇರೆಯವರು ಕದಿಯಬಹುದು.
ಯಾರೊಂದಿಗೂ ಕೂಡ ನಿಮ್ಮ ಎಟಿಎಂ ಆಗಲಿ ಅಥವಾ ಎಟಿಎಂ ಪಿನ್ ಆಗಲಿ ಹಂಚಿಕೊಳ್ಳಬೇಡಿ. ಮಾತ್ರವಲ್ಲ, ಎಟಿಎಂ ನಲ್ಲಿ ಹಣ ವಿತ್ ಡ್ರಾ ಮಾಡುವಾಗ ಬೇರೆಯವರ ಸಹಾಯ ತೆಗೆದುಕೊಳ್ಳಬೇಡಿ. ಈ ರೀತಿ ಮಾಡುವುದರಿಂದ ನೀವು ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು.
ಕೆಲವರು ಪಾಸ್‌ವರ್ಡ್ ನೆನಪಿರುವುದಿಲ್ಲ ಎಂದು ತಮ್ಮ ಡೆಬಿಟ್ ಕಾರ್ಡ್‌ನ ಕವರ್ ಮೇಲೆಯೇ ಪಾಸ್‌ವರ್ಡ್ ಬರೆದಿಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ನಿಮ್ಮ ಈ ತಪ್ಪು ನಿಮ್ಮ ಖಾತೆಯನ್ನು ಖಾಲಿ ಮಾಡಬಹುದು.
ನೀವು ಎಟಿಎಂ ಸ್ಲಾಟ್‌ನಲ್ಲಿ ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಹಾಕುವಾಗ ತುಂಬಾ ಜಾಗರೂಕರಾಗಿರಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಎಟಿಎಂ ಸ್ಲಾಟ್‌ನಲ್ಲಿ ನಕಲಿ ಕ್ಯಾಪ್ ಹಾಕುವ, ಇಲ್ಲವೇ ಚಿಪ್ ಗಳನ್ನು ಅಳವಡಿಸಿ ವಂಚಕರು ವಂಚಿಸುತ್ತಿದ್ದಾರೆ. ಹಾಗಾಗಿ, ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡುವಾಗ ಇದರ ಬಗ್ಗೆ ನಿಗಾವಹಿಸಿ.