ಡಯಾಬಿಟಿಸ್ ರೋಗಿಗಳೇ ಗಮನಿಸಿ! ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಸೇವಿಸಬೇಡಿ
ಹಣ್ಣುಗಳ ರಾಜ ಮಾವಿನ ಹಣ್ಣಿನ ಹೆಸರೇ ಬಾಯಿಯಲ್ಲಿ ನೀರೂರುವಂತೆ ಮಾಡುತ್ತದೆ. ಆದರೆ, ಡಯಾಬಿಟಿಸ್ ರೋಗಿಗಳಿಗೆ ಮಾವಿನ ಹಣ್ಣನ್ನು ಸೇವಿಸದಂತೆ ವೈದ್ಯರು ಸಲಹೆ ನೀಡುತ್ತಾರೆ.
ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಬಾಳೆಹಣ್ಣನ್ನು ಡಯಾಬಿಟಿಸ್ ರೋಗಿಗಳಿಗೆ ಅಪಾಯಕಾರಿ ಎಂದು ಹೇಳಲಾಗುತ್ತದೆ.
ದ್ರಾಕ್ಷಿ ಸೇವನೆಯಿಂದ ಡಯಾಬಿಟಿಸ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಬಹುದು. ಹಾಗಾಗಿ, ಮಧುಮೇಹಿಗಳಿಗೆ ದ್ರಾಕ್ಷಿ ಹಣ್ಣನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ.
ಲಿಚ್ಚಿ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಮಾತ್ರವಲ್ಲ, ಇದು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತದೆ. ಹಾಗಾಗ, ಮಧುಮೇಹಿಗಳು ಈ ಹಣ್ಣಿನಿಂದ ದೂರ ಉಳಿಯುವುದು ಒಳಿತು.
ಅನಾನಸ್ ಅಧಿಕ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿರುವ ಹಣ್ಣು. ಇದರಲ್ಲಿ ನೈಸರ್ಗಿಕ ಸಕ್ಕರೆಯೂ ಹೆಚ್ಚಾಗಿರುವುದರಿಂದ ಮಧುಮೇಹಿಗಳು ಯಾವುದೇ ಕಾರಣಕ್ಕೂ ಅನಾನಸ್ ಹಣ್ಣನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.