Attention!: ಇದೇ ನೋಡಿ ವಿಶ್ವದ ಅತ್ಯಂತ ಅಪಾಯಕಾರಿ ಜೇಡ, 15 ನಿಮಿಷದಲ್ಲೇ ಜೀವ ತೆಗೆಯುತ್ತೆ..!

Sun, 21 Nov 2021-1:26 pm,

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ ನಲ್ಲಿ ಅತ್ಯಂತ ದೈತ್ಯ ಫನಲ್ ವೆಬ್ ಸ್ಪೈಡರ್(Giant Funnel Web Spider) ಪತ್ತೆಯಾಗಿದೆ. ಇದನ್ನು ಮೆಗಾ ಸ್ಪೈಡರ್ ಎಂದು ಕರೆಯಲಾಗುತ್ತದೆ. ಈ ಜೇಡವನ್ನು ಪತ್ತೆ ಮಾಡಿದ ವ್ಯಕ್ತಿ ಅದನ್ನು ಹಿಡಿದು ನ್ಯೂ ಸೌತ್ ವೇಲ್ಸ್‌ ನ ಆಸ್ಟ್ರೇಲಿಯನ್ ರೆಪ್ಟೈಲ್ ಪಾರ್ಕ್‌ಗೆ ನೀಡಿದ್ದಾರೆ.

ಈ ಜೇಡವನ್ನು ನೋಡಿದ ತಜ್ಞರು ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಈ ಜೇಡವು 5 ಇಂಚುಗಳಷ್ಟು ದೊಡ್ಡದಾಗಿದೆ. ಈ ಜೇಡದ ಕೋರೆಹಲ್ಲುಗಳು 0.8 ಇಂಚುಗಳಷ್ಟು ಉದ್ದವಾಗಿದ್ದು, ಇದು ಮನುಷ್ಯನ ಉಗುರುಗಳಂತೆ ಚುಚ್ಚುತ್ತದೆ ಎಂದು ಆಸ್ಟ್ರೇಲಿಯನ್ ರೆಪ್ಟೈಲ್ ಪಾರ್ಕ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಜೇಡಕ್ಕೆ ಮೆಗಾ ಸ್ಪೈಡರ್ ಎಂದು ಹೆಸರಿಡಲಾಗಿದೆ. ಈ ಜೇಡವು ತನ್ನ ವಿಷವನ್ನು ಮಾನವನ ದೇಹದಲ್ಲಿ ಬಿಟ್ಟರೆ ಆ ವ್ಯಕ್ತಿ 15 ನಿಮಿಷಗಳಲ್ಲಿ ಸಾಯಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಸ್ತುತ ಈ ಜೇಡವನ್ನು ಅದರ ವಿಷವನ್ನು ಸಂಗ್ರಹಿಸಲು ಬಳಸಲಾಗುತ್ತಿದೆ. ಇದರಿಂದ ಔಷಧವನ್ನು ತಯಾರಿಸಬಹುದು. ಈ ಜೇಡದ ವಿಷಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೆಲೆಯಿದೆಯಂತೆ.

ವರದಿಗಳ ಪ್ರಕಾರ ಈ ಜೇಡದ ಎಲ್ಲಿಂದ ಬಂತು? ಇದರ ಮೂಲ ಯಾವುದು?  ಎಂದು ವಿಜ್ಞಾನಿಗಳು ಅಧ್ಯಯನದಲ್ಲಿ ತೊಡಗಿದ್ದಾರೆ. ‘ಈ ಜೇಡದ ಮೂಲದ ಬಗ್ಗೆ ನಾವು ಕುತೂಹಲ ಹೊಂದಿದ್ದೇವೆ. ಒಂದು ವೇಳೆ ಇದರ ಮೂಲವೇನಾದರೂ ಪತ್ತೆಯಾದರೆ ಇನ್ನೂ ಹೆಚ್ಚಿನ ದೈತ್ಯ ಜೇಡಗಳನ್ನು ಕಂಡುಹಿಡಿಯಲು ನಮಗೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದೇವೆ’ ಎಂದು ಆಸ್ಟ್ರೇಲಿಯನ್ ರೆಪ್ಟೈಲ್ ಪಾರ್ಕ್ ನ  ಶಿಕ್ಷಣ ಅಧಿಕಾರಿ ಮೈಕೆಲ್ ಟೇಟ್ ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link