Attention! ಬರಲಿದೆ ಆದಾಯ ತೆರಿಗೆ ಇಲಾಖೆಯ ಹೊಸ ವೆಬ್ ಸೈಟ್, ಇಲ್ಲಿವೆ ಅದರ ವೈಶಿಷ್ಟ್ಯಗಳು
1. ರಿಫಂಡ್ ನಲ್ಲಿ ವೇಗ ಬರಲಿದೆ - ಹೊಸ ಇ-ಫೈಲಿಂಗ್ ಪೋರ್ಟಲ್ ಅನ್ನು ಆದಾಯ ತೆರಿಗೆ (Income Tax)ರಿಟರ್ನ್ ಪ್ರಕ್ರಿಯೆಯೊಂದಿಗೆ ಸಂಯೋಜಿಸಲಾಗಿದ್ದು, ತೆರಿಗೆದಾರರಿಗೆ ತಕ್ಷಣವೇ ತೆರಿಗೆ ಮರುಪಾವತಿ ಸಿಗಲಿದೆ.
2. ಸಿಂಗಲ್ ಡ್ಯಾಶ್ ಬೋರ್ಡ್ - ತೆರಿಗೆದಾರರು ತಮ್ಮ ಎಲ್ಲಾ ಸಂವಹನ, ಅಪ್‌ಲೋಡ್‌ಗಳು ಮತ್ತು ಬಾಕಿ ಇರುವ ಕಾರ್ಯಗಳನ್ನು ಒಂದೇ ಡ್ಯಾಶ್‌ಬೋರ್ಡ್ ಮೂಲಕ ನೋಡಲು ಸಾಧ್ಯವಾಗಲಿದೆ. ಇದರಿಂದ ಅವರು ತಮ್ಮ ಸ್ಟೇಟಸ್ ಅನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗಲಿದೆ.
3. ಉಚಿತ ITR ಸಾಫ್ಟ್ ವೆಯರ್ - ನೂತನ ವೆಬ್ ಸೈಟ್ ಮೂಲಕ ತೆರಿಗೆ ಪಾವತಿದಾರರು ತೆರಿಗೆಯ ಕುರಿತು ಯಾವುದೇ ರೀತಿಯ ಮಾಹಿತಿ ಇಲ್ಲದಿದ್ದರೂ ಕೂಡ ಸುಲಭವಾಗಿ ತಮ್ಮ ರಿಟರ್ನ್ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಅವರಿಗೆ ಐಟಿಆರ್ ತಯಾರಿಕೆಯೊಂದಿಗೆ ಉಚಿತ ಸಾಫ್ಟ್‌ವೇರ್ ಸಿಗಲಿದೆ. ಇದು ಆಫ್‌ಲೈನ್ ಮತ್ತು ಆನ್‌ಲೈನ್ ಎರಡೂ ಮೋಡ್ ನಲ್ಲಿ ಇರಲಿದೆ. ತೆರಿಗೆ ಪಾವತಿದಾರರಿಗೆ ಸಹಾಯ ಮಾಡಲು ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳೂ ಕೂಡ ಇದರಲ್ಲಿ ಇರಲಿವೆ. ವಿಶೇಷವೆಂದರೆ ಅದರಲ್ಲಿ ಆಂಟಿ-ಡಾಟಾ ಬಹಳ ಕಡಿಮೆ ಇರಲಿದೆ.
4. ನೂತನ ಕಾಲ್ ಸೆಂಟರ್ - ತೆರಿಗೆ ಪಾವತಿದಾರರ ಸಹಾಯಕ್ಕೆ ನೂತನ ಕಾಲ್ ಸೆಂಟರ್ ಕೂಡ ಇರಲಿದೆ. ಈ ಕಾಲ್ ಸೆಂಟರ್ ತಕ್ಷಣ FAQ ಮೂಲಕ ಉತ್ತರ ನೀಡಲಿದೆ. ಟುಟೋರಿಯಲ್, ವಿಡಿಯೋ ಹಾಗೂ ಚಾಟ್ ಬೋಟ್/ಲೈವ್ ಏಜೆಂಟ್ ಗಳು ತೆರಿಗೆ ಪಾವತಿದಾರರ ಪ್ರಶ್ನೆಗಳಿಗೆ ರಿಯಲ್ ಟೈಮ್ ನಲ್ಲಿ ಉತ್ತರ ನೀಡಲಿದ್ದಾರೆ.
5. ಮೊಬೈಲ್ ಆಪ್ ನಲ್ಲಿಯೇ ಎಲ್ಲ ಸೌಲಭ್ಯ - ತೆರಿಗೆ ಪಾವತಿದಾರರಿಗೆ ಇ-ಫೈಲಿಂಗ್ ಪೋರ್ಟಲ್ ಮೇಲೆ ಸಿಗುವ ಬಹುತೇಕ ಪ್ರಮುಖ ಫಂಕ್ಷನ್ಗಳು ಮೊಬೈಲ್ ಆಪ್ ನಲ್ಲಿಯೂ ಕೂಡ ಲಭ್ಯವಿರಲಿವೆ. ಇದರಿಂದ ತೆರಿಗೆ ಪಾವತಿದಾರರು ತಮ್ಮ ಮೊಬೈಲ್ ನೆಟ್ವರ್ಕ್ ಮೂಲಕ ತೆರಿಗೆಗೆ ಸಂಬಂಧಿಸಿದ ಸೇವೆಗಳನ್ನು ಪಡೆಯಬಹುದು.
6. ಸುಲಭ ಟ್ಯಾಕ್ಸ್ ಪೇಮೆಂಟ್ ಸಿಸ್ಟಂ - ಹೊಸ ಪೋರ್ಟಲ್ ಮೇಲೆ ಹೊಸ ಆನ್ಲೈನ್ ತೆರಿಗೆ ಪಾವತಿ ಸಿಸ್ಟಂ ಸಿಗಲಿದೆ. ತೆರಿಗೆ ಪಾವತಿದಾರರು ತಮ್ಮ ಯಾವುದೇ ಖಾತೆಯಿಂದ ತೆರಿಗೆಯನ್ನು ಪಾವತಿಸಬಹುದು. ಇದರಲ್ಲಿ ಪೇಮೆಂಟ್ ಗಾಗಿ ನೆಟ್ ಬ್ಯಾಂಕಿಂಗ್, UPI, ಕ್ರೆಡಿಟ್ ಕಾರ್ಡ್ ಹಾಗೂ RTGS/NEFT ಸೇರಿದಂತೆ ಅನ್ಯ ಆಯ್ಕೆಗಳು ಇರಲಿವೆ.