Atum 1.0 : ಕೇವಲ 7 ರೂಪಾಯಿಯಲ್ಲಿ 100 ಕಿಲೋಮೀಟರ್ ಪ್ರಯಾಣ..!

Sun, 07 Mar 2021-10:58 am,

ಹೈದರಾಬಾದ್ ಮೂಲದ ವೆಹಿಕಲ್ ಸ್ಟಾರ್ಟ್ ಅಪ್ Atumobile ಪ್ರೈವೇಟ್ ಲಿಮಿಟೆಡ್ Atum 1.0 ಅನ್ನುತಯಾರಿಸಿದೆ. ಹೆಚ್ಚುತ್ತಿರುವ ಮಾಲಿನ್ಯ ಮತ್ತು ಪೆಟ್ರೋಲ್ ಬೆಲೆ ಎರಡೂ ಸಮಸ್ಯೆಗೂ Atum1.0 ಪರಿಹಾರ ನೀಡುತ್ತದೆ ಎಂದು ಕಂಪನಿ ಹೇಳಿದೆ. 

Atumobile ಪ್ರೈವೇಟ್ ಲಿಮಿಟೆಡ್ ಪ್ರಕಾರ, Atum1.0 ಬ್ಯಾಟರಿ ಕೇವಲ 4 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಆದರೆ 100 ಕಿಲೋಮೀಟರ್ ವರೆಗೆ ಚಲಿಸಬಹುದು. ಅಲ್ಲದೆ ಸಂಪೂರ್ಣವಾಗಿ ಚಾರ್ಜ್ ಮಾಡಲು ತಗಲುವ ವೆಚ್ಚ ಕೇವಲ 7-8 ರೂಪಾಯಿಗಳು ಮಾತ್ರ.  ಕಂಪನಿಯು   ಈ ಬೈಕ್ ನ ಬ್ಯಾಟರಿಗೆ  2 ವರ್ಷಗಳ ಗ್ಯಾರಂಟಿ ಸಹ ನೀಡುತ್ತಿದೆ.

Atum1.0 ಅನ್ನು ಕಂಪನಿಯ ಅಧಿಕೃತ ಪೋರ್ಟಲ್ atumobile.co ಮೂಲಕ ಬುಕ್ ಮಾಡಬಹುದು. ಬುಕ್ಕಿಂಗ್ ಆರಂಭವಾದಾಗಿನಿಂದ  ಇದುವರೆಗೆ 400 ಕ್ಕೂ ಹೆಚ್ಚು ಬುಕಿಂಗ್ ಆಗಿದ್ದು, ಈಗ ವಿತರಣೆಯ ಕೆಲಸವೂ ಪ್ರಾರಂಭವಾಗಿದೆ ಎಂದು ಕಂಪನಿ ಹೇಳಿದೆ.   

ಎಲೆಕ್ಟ್ರಿಕ್ ಬೈಕ್  Atum1.0 ನ ಬೇಸ್ ಪ್ರೈಸ್ 50,000 ರೂ. ಇದನ್ನು ಸಂಪೂರ್ಣವಾಗಿ ಭಾರತದಲ್ಲೆ ತಯಾರಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಈ ಬೈಕ್‌ನ ವೇಗವನ್ನು ತುಂಬಾ ಕಡಿಮೆ ಇಡಲಾಗಿದೆ.  Atum1.0 ಆರಾಮದಾಯಕ ಆಸನ, ಡಿಜಿಟಲ್ ಡಿಸ್ಪ್ಲೇ, ಎಲ್ಇಡಿ ಹೆಡ್ಲೈಟ್, ಇಂಡಿಕೆಟರ್, ಟೆಲ್ ಲೈಟ್ ಗಳನ್ನು ಹೊಂದಿದೆ.   

Atum1.0, Revoltನ RV400 ಬೈಕ್ ನೊಂದಿಗೆ  ಸ್ಪರ್ಧಿಸುತ್ತದೆ ಎನ್ನಲಾಗಿದೆ.  RV400 ಸಂಪೂರ್ಣವಾಗಿ ಸ್ಮಾರ್ಟ್ ಬೈಕ್ ಮತ್ತು ನಿಮ್ಮ ಫೋನ್‌ಗೆ ಸಂಪರ್ಕದಲ್ಲಿರುತ್ತದೆ. ಹತ್ತಿರದ ಸ್ವಾಪ್ ಸ್ಟೇಷನ್‌ನ ವಿಳಾಸವನ್ನೂ  ಈ ಬೈಕ್‌ ತೋರಿಸುತ್ತದೆ. ಸ್ವಾಪ್ ಸ್ಟೇಷನ್‌ ನಲ್ಲಿ ಬೈಕ್ ನ ಬ್ಯಾಟರಿಯನ್ನು ಬದಲಾಯಿಸಬಹುದು.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link