Dhan Shakti Yog: 5 ವರ್ಷಗಳ ನಂತರ ಶುಭಕರ ಧನಶಕ್ತಿ ಯೋಗ ನಿರ್ಮಾಣ, ಈ ರಾಶಿಯವರಿಗೆ ಹಣದ ಸುರಿಮಳೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತದೆ. ಈ ಬದಲಾವಣೆಯು ಶುಭ-ಅಶುಭ ಯೋಗಗಳನ್ನು ನಿರ್ಮಿಸುತ್ತದೆ.
ಇದೀಗ ಶನಿಯ ರಾಶಿಚಕ್ರ ಚಿಹ್ನೆಯಾದ ಮಕರ ರಾಶಿಯಲ್ಲಿ ಕಮಾಂಡರ್ ಗ್ರಹ ಮಂಗಳ ಮತ್ತು ಐಷಾರಾಮಿ ಜೀವನದ ಅಂಶವಾದ ಶುಕ್ರ ಗ್ರಹ ಒಟ್ಟಿಗೆ ಸೇರಿದ್ದಾರೆ.
ಮಕರ ರಾಶಿಯಲ್ಲಿ ಮಂಗಳ-ಶುಕ್ರ ಸಂಯೋಗದೊಂದಿಗೆ ಐದು ವರ್ಷಗಳ ನಂತರ ಈ ರಾಶಿಯಲ್ಲಿ ಶುಭಕರ ಧನ ಶಕ್ತಿ ಯೋಗ ನಿರ್ಮಾಣವಾಗುತ್ತಿದೆ.
ಧನಶಕ್ತಿ ಯೋಗದ ಪರಿಣಾಮ ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟದ ಸಮಯ. ಈ ಸಮಯದಲ್ಲಿ ಅವರಿಗೆ ಸಂಪತ್ತಿನ ಸುರಿಮಳೆಯೇ ಆಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ...
ಮೇಷ ರಾಶಿ: ಧನಶಕ್ತಿ ಯೋಗಾದ ಪರಿಣಾಮವಾಗಿ ಮೇಷ ರಾಶಿಯ ವಿವಾಹಿತ ಜನರಿಗೆ ಅದ್ಭುತವಾದ ಕೌಟುಂಬಿಕ ಸುಖ ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಈ ಸಮಯದಲ್ಲಿ ಮೇಷ ರಾಶಿಯ ಜನರು ನಿಮ್ಮ ಒಳ್ಳೆಯ ಕೆಲಸಗಳಿಗೆ ಪ್ರಚಾರವನ್ನು ಪಡೆಯಲಿದ್ದೀರಿ. ಆದಾಯವೂ ಹೆಚ್ಚಾಗಲಿದೆ.
ಕನ್ಯಾ ರಾಶಿ: ಮಂಗಳ-ಶುಕ್ರ ಸಂಯೋಗದಿಂದ ಕನ್ಯಾ ರಾಶಿಯವರಿಗೆ ಬಂಪರ್ ಧನಲಾಭದ ಯೋಗವಿದೆ. ಈ ಸಮಯದಲ್ಲಿ ವಿವಾಹಿತರು ತಮ್ಮ ಮಕ್ಕಳಿಂದ ಶುಭ ಸುದ್ದಿಗಳನ್ನು ನಿರೀಕ್ಷಿಸಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ಹಣಕಾಸಿನ ವಿಷಯದಲ್ಲಿ ಭಾರೀ ಪ್ರಯೋಜನವನ್ನು ಪಡೆಯಲಿದ್ದೀರಿ.
ಮಕರ ರಾಶಿ: ಸ್ವ ರಾಶಿಯಲ್ಲಿ ನಿರ್ಮಾಣವಾಗಿರುವ ಧನ ಶಕ್ತಿ ಯೋಗವು ಮಕರ ರಾಶಿಯಯ್ವರಿಗೆ ಸಂತೋಷದ ಸಮಯವನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ನಿಮ್ಮ ಬಹುದಿನಗಳ ಕೆಲಸಗಳು ಈಗ ಪೂರ್ಣಗೊಳ್ಳಲಿವೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.