Auspicious Dreams: ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಖುಲಾಯಿಸಲಿದೆ ಅದೃಷ್ಟ

Mon, 27 Mar 2023-4:56 pm,

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಸ್ತ್ರೀ (ಹುಡುಗಿ, ಮಹಿಳೆ) ಅನ್ನು ಕಾಣುವುದು ತುಂಬಾ ಮಂಗಳಕರ. ಇದು ಶೀಘ್ರದಲ್ಲೇ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶವಾಗಲಿದೆ ಎಂಬುದರ ಸಂಕೇತ.

ಕನಸಿನಲ್ಲಿ ಬಿಳಿ ಆನೆ ಕಾಣಿಸಿಕೊಂಡರೆ ಅತಿ ಶೀಘ್ರದಲ್ಲಿ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ ಎಂದರ್ಥ.

ಕನಸಿನಲ್ಲಿ ಹಣವನ್ನು ಲೆಕ್ಕಹಾಕುವುದು, ಯಾರಿಗಾದರೂ ಹಣವನ್ನು ನೀಡುವುದು ಅಥವಾ ಯಾರಿಂದಲಾದರೂ ಹಣವನ್ನು ಪಡೆಯುವುದನ್ನು ಕಂಡರೆ ಶೀಘ್ರದಲ್ಲೇ ನೀವು ಅಪಾರ ಸಂಪತ್ತಿನ ಒಡೆಯರಾಗುತ್ತೀರಿ ಎಂಬುದರ ಸಂಕೇತ.

ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯ ಪ್ರಿಯ ಪುಷ್ಪವಾದ ಕಮಲದ ಹೂವನ್ನು ಕನಸಿನಲ್ಲಿ ಕಂಡರೆ ತಾಯಿ ಲಕ್ಷ್ಮಿ ನಿಮ್ಮನ್ನು ಆಶೀರ್ವದಿಸಲಿದ್ದಾರೆ. ಹಠಾತ್ ಧನಲಾಭವಾಗಲಿದೆ ಎಂದರ್ಥ.

ಧಾರ್ಮಿಕ ಸ್ಥಳವಾದ ದೇವಾಲಯವನ್ನು ಕನಸಿನಲ್ಲಿ ಕಂಡರೆ ಉದ್ಯೋಗ,  ವ್ಯವಹಾರದಲ್ಲಿ ಪ್ರಗತಿ ಉಂಟಾಗಲಿದೆ ಎಂದು ಹೇಳಲಾಗುತ್ತದೆ. 

ಕನಸಿನಲ್ಲಿ ಚಿನ್ನ/ಬೆಳ್ಳಿಯ ಉಂಗುರವನ್ನು ಕಂಡರೆ ಶೀಘ್ರದಲ್ಲೇ ನೀವು ಸಂಗಾತಿಯನ್ನು ಪಡೆಯುವಿರಿ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಭವಿಷ್ಯದಲ್ಲಿ ಒಳ್ಳೆಯದಾಗಲಿದೆ ಎಂದು ಬಣ್ಣಿಸಲಾಗುತ್ತದೆ. 

ಕನಸಿನಲ್ಲಿ ಹರಿಯುವ ನೀರಿನಲ್ಲಿ ಈಜುವುದನ್ನು ಕಂಡರೆ ಮುಂದಿನ ದಿನಗಳಲ್ಲಿ ನಿಮ್ಮ ಬಾಳಿನಲ್ಲಿ ಶುಭ ಘಟನೆಗಳು ನಡೆಯಲಿವೆ ಎಂಬುದನ್ನೂ ಸೂಚಿಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link