57 ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ !ಒಲಿದು ಬರುವುದು ಕುಬೇರನ ಖಜಾನೆ !ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು, ಕೈ ಇಟ್ಟಲೆಲ್ಲಾ ಧನ
2025 ರ ಮಾರ್ಚ್ 29 ರಂದು ಮೀನ ರಾಶಿಯಲ್ಲಿ 6 ಗ್ರಹಗಳು ಏಕಕಾಲದಲ್ಲಿ ಗೋಚರಿಸುತ್ತದೆ.ಬರೋಬ್ಬರಿ 57 ವರ್ಷಗಳ ನಂತರ ಇಂತಹ ಶುಭ ಯೋಗ ನಿರ್ಮಾಣವಾಗುತ್ತಿದೆ. ಹಿಂದೆ 1968 ರಲ್ಲಿ ಈ ಶುಭ ಯೋಗ ರೂಪುಗೊಂಡಿತ್ತು.
ವೈದಿಕ ಪಂಚಾಂಗದ ಪ್ರಕಾರ,ಮಾರ್ಚ್ ತಿಂಗಳಲ್ಲಿ ರಾಹು, ಶುಕ್ರ, ಶನಿ, ಬುಧ, ಸೂರ್ಯ, ಚಂದ್ರ ಮೀನ ರಾಶಿಯಲ್ಲಿ ಇರುತ್ತಾರೆ.ಹೀಗೆ ಒಂದೇ ರಾಶಿಯಲ್ಲಿ ಆರು ಗ್ರಹಗಳ ಕೂಟ ಏಕಕಾಲದಲ್ಲಿ ಗೋಚರಿಸಲಿದೆ.
ವೃಷಭ ರಾಶಿ : ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವಾಗುವುದು. ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಇರುವುದು. ದೀರ್ಘಕಾಲದ ಸಮಸ್ಯೆಗಳು ನಿವಾರಣೆಯಾಗುವುದು. ಸಾಲ ನೀಡಿ ಸಿಕ್ಕಿಬಿದ್ದ ಹಣ ಮತ್ತೆ ಕೈ ಸೇರುವುದು. ಹಣದ ಕೊರತೆ ನಿವಾರಣೆಯಾಗುವುದು.
ಮಿಥುನ ರಾಶಿ :ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಕಾಣಬಹುದು. ಜೀವನದಲ್ಲಿ ಅನೇಕ ಹೊಸ ಸವಾಲುಗಳು ಎದುರಾಗಬಹುದು. ಆದರೆ ಪ್ರತೀ ಸವಾಲುಗಳನ್ನು ನೀವು ಸುಲಭವಾಗಿ ಜಯಿಸಬಹುದು.ಹೊಸ ಉದ್ಯೋಗಾವಕಾಶಗಳು ಸಿಗಬಹುದು. ಜೀವನದಲ್ಲಿ ಸಂತೋಷ ಹೆಚ್ಚುವುದು.
ಕನ್ಯಾ ರಾಶಿ : ವೃತ್ತಿ ಮತ್ತು ವ್ಯವಹಾರದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು. ವೃತ್ತಿಯಲ್ಲಿ ಬಡ್ತಿ ಜತೆಗೆ ಸಂಬಳ ಹೆಚ್ಚಳವೂ ಹೆಚ್ಚಾಗುವುದು. ಒತ್ತಡ ಕಡಿಮೆಯಾಗುವುದು. ಆರೋಗ್ಯ ಚೆನ್ನಾಗಿರುತ್ತದೆ. ವಿದೇಶದಲ್ಲಿ ಉದ್ಯೋಗ ಮಾಡುವ ಕನಸು ನನಸಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ