ಅದ್ಭುತ ರಾಜಯೋಗಗಳಿಂದ ಹೊಸ ವರ್ಷಾರಂಭ, ಈ ರಾಶಿಗಳ ಜನರ ಮೇಲೆ ಮಹಾಲಕ್ಷ್ಮೀಯ ಭಾರಿ ಧನವೃಷ್ಟಿ!
ವರ್ಷ 2024 ರಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜಯೋಗಗಳು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಮೊದಲ ದಿನವೇ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ದೇವಗುರು ಬೃಹಸ್ಪತಿ ಮೇಷ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದು, ಚಂದ್ರ ಸಿಂಹ ರಾಶಿಯಲ್ಲಿ ವಿರಾಜನಾಗಿರಲಿದ್ದಾನೆ. ಸಿಂಹ ರಾಶಿಗೆ ಗುರು ಅಧಿಪತಿಯಾಗಿರುವ ಕಾರಣ ಆತನ ನೇರ ದೃಷ್ಟಿ ಚಂದ್ರನ ಮೇಲಿರಲಿದೆ ಮತ್ತು ಇದರಿಂದ ಗಜಕೇಸರಿ ರಾಜಯೋಗ ರಚನೆಯಾಗುತ್ತಿದೆ. ಇದಲ್ಲದೆ ಡಿಸೆಂಬರ್ 31, 2023 ರಂದು ಮೇಷ ರಾಶಿಯಲ್ಲಿ ಗುರು ತನ್ನ ನೆರನಡೆ ಅನುಸರಿಸಲಿದ್ದಾನೆ. ಇದರಿಂದ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತಿದೆ. ಇದಲ್ಲದೆ ಜನವರಿ 1, 2024 ರಂದು ಬೆಳಗಿನ ಜಾವ 3 ಗಂಟೆ 41 ನಿಮಿಷಕ್ಕೆ ಆಯುಷ್ಮಾನ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.
ಇತರ ಗ್ರಹಗಳ ಸ್ಥಿತಿಗತಿ ಕುರಿತು ಹೇಳುವುದಾದರೆ, ಸೂರ್ಯ ಹಾಗೂ ಮಂಗಳ ಧನು ರಾಶಿಯಲ್ಲಿ, ಶನಿ ತನ್ನ ಮೂಲ ತ್ರಿಕೋನ ಕುಂಭರಾಶಿಯಲ್ಲಿ, ರಾಹು ಮೀನ ರಾಶಿಯಲ್ಲಿ, ಕೇತು ಕನ್ಯಾ ರಾಶಿಯಲ್ಲಿ ಬುಧ ಹಾಗೂ ಶುಕ್ರರು ವೃಶ್ಚಿಕ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದಾರೆ. ಈ ಎಲ್ಲಾ ರಾಜಯೋಗಗಳು ಹಾಗೂ ಗ್ರಹಗಳ ಸ್ಥಿತಿಗತಿಗಳು ಕೆಲ ರಾಶಿಗಳ ಜನರಿಗೆ ವರ್ಷವಿಡೀ ಭಾರಿ ಧನಲಾಭ ಭಾಗ್ಯೋದಯ ಯೋಗವನ್ನು ರೂಪಿಸುತ್ತಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಮೇಷ ರಾಶಿ: ಮೇಷ ರಾಶಿಯಲ್ಲಿ ಗುರುವಿನ ನೆರನಡೆ ಆರಂಭವಾಗಲಿದೆ ಮತ್ತು ಇದರ ಜೊತೆಗೆ ಗಜಲಕ್ಷ್ಮಿ ರಾಜಯೋಗ ಕೂಡ ರೂಪುಗೊಳ್ಳುತ್ತಿದೆ. ಹೀಗಿರುವಾಗ ಮೇಷ ರಾಶಿಯ ಜಾತಕದವರಿಗೆ ಹೊಸವರ್ಷ ಸಾಕಷ್ಟು ಖುಷಿಗಳಿಂದ ಕೂಡರಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಹೊಸಬರಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ಇದಲ್ಲದೆ ನೌಕರಿಯ ಹುಡುಕಾಟದಲ್ಲಿ ನಿರತರಾದವರ ಹುಡುಕಾಟಕ್ಕೆ ತೆರೆ ಬೀಳಲಿದೆ. ಸಾಕಷ್ಟು ಪರಿಶ್ರಮವಹಿಸಿ ನೀವು ಮಾಡಿರುವ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ನೋಡಿ ನಿಮಗೆ ಪದೋನ್ನತಿ ಅಥವಾ ಹೊಸ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗದ ಕನಸು ನನಸಾಗಲಿದೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಸಾಲಬಾಧೆಯಿಂದ ನಿಮಗೆ ಮುಕ್ತಿ ಸಿಗುವುದರ ಜೊತೆಗೆ ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ವೈವಾಹಿಕ ಜೀವನದಲ್ಲಿ ಇದುವರೆಗೆ ಕಂಡುಬಂದಂತಹ ಅಡೆತಡೆಗಳು ನಿವಾರಣೆಯಾಗಲಿದೆ. ಲವ್ ಲೈಫ್ ಉತ್ತಮವಾಗಿರಲಿದೆ.
ಕರ್ಕ ರಾಶಿ: ಹೊಸ ವರ್ಷ ಕರ್ಕ ರಾಶಿಯ ಜಾತಕದವರಿಗೆ ಅತ್ಯಂತ ಉತ್ತಮ ಸಾಬೀತಾಗಲಿದೆ. ಆಯುಷ್ಮಾನ, ಗಜಲಕ್ಷ್ಮಿ ಹಾಗೂ ಗಜಕೇಸರಿ ಯೋಗಗಳು ನಿಮ್ಮ ಭಾಗ್ಯವನ್ನೇ ಬದಲಾಯಿಸಲಿವೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲವನ್ನು ಕಳೆಯಿವಿರಿ. ವಿವಾಹ ಯೋಗ್ಯ ಜಾತಕದವರಿಗೆ ಉತ್ತಮ ಬಾಳಸಂಗಾತಿ ಸಿಗಲಿದ್ದಾರೆ. ಜೀವನದಲ್ಲಿ ಸಾಕಷ್ಟು ಖುಷಿಗಳ ಆಗಮನವಾಗಲಿದೆ. ಹೊಸ ನೌಕರಿಯ ಹುಡುಕಾಟ ಅಂತ್ಯವಾಗಲಿದೆ. ಆರ್ಥಿಕ ಸ್ಥಿತಿ ಸಾಕಷ್ಟು ಬಲಿಷ್ಠವಾಗಲಿದೆ. ದೀರ್ಘಾಧಿಯಿಂದ ನಿಂತುಹೋದ ಕೆಲಸಗಳಿಗೆ ಮತ್ತೆ ಗತಿ ಸಿಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹಣ ಉಳಿತಾಯ ಮಾಡುವಲ್ಲಿಯೂ ಕೂಡ ನೀವು ಯಶಸ್ಸನ್ನು ಕಾಣುವಿರಿ. ಮನೆ ಸದಸ್ಯರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ನಿವಾರಣೆಯಾಗಲಿವೆ. ಹಿರಿಯರ ಆಶೀರ್ವಾದದಿಂದ ವೃತ್ತಿ ಪರ ಜೀವನದಲ್ಲಿ ಮುಂದಕ್ಕೆ ಹೋಗುವ ಅವಕಾಶ ಸಿಗಲಿದೆ. ಆರೋಗ್ಯ ಸಂಬಂಧಿದ ಸಮಸ್ಯೆಗಳು ದೂರಾಗಲಿವೆ. ತಂದೆ-ತಾಯಿಯರ ಆರೋಗ್ಯ ಉತ್ತಮವಾಗಿರಲಿದೆ.
ಸಿಂಹ ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತಿದೆ. ಇದರಿಂದ ದೂರದ ಪ್ರಯಾಣ ಜರಗುವ ಸಾಧ್ಯತೆ ಇದ್ದು, ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಇರಲಿದೆ. ಇದಲ್ಲದೆ ಆಯುಷ್ಮಾನ ಹಾಗೂ ಗಜಕೇಸರಿ ರಾಜಯೋಗಗಳು ಕೂಡ ನಿಮ್ಮ ಜೀವನದಲ್ಲಿ ಸಾಕಷ್ಟು ಖುಷಿಗಳನ್ನು ಹೊತ್ತು ತರಲಿವೆ. ದೀರ್ಘಕಾಲದಿಂದ ನಡೆದುಕೊಂಡು ಬಂದ ಸಮಸ್ಯೆಗಳು ನಿವಾರಣೆಯಾಗಲಿವೆ. ಕೌಟುಂಬಿಕ ಭಿನ್ನಮತಗಳು ಕೂಡ ನಿವಾರಣೆಯಾಗಲಿವೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಸಹೋದರ-ಸಹೋದರಿಯರ ಜೊತೆಗೆ ಸಂಬಂಧಗಳು ಸುಮಧುರವಾಗಲಿವೆ. ಆತ್ಮವಿಶ್ವಾಸ-ಸಾಹಸ ಹೆಚ್ಚಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)