ಐವತ್ತು ವರ್ಷಗಳ ಬಳಿಕ ಯುವಾವಸ್ಥೆಯ ಗುರು ಹಾಗೂ ಮಂಗಳರಿಂದ ನವಪಂಚಮ ರಾಜಯೋಗ ನಿರ್ಮಾಣ, ಯಾರಿಗೆ ಲಾಭ?
ಮೇಷ ರಾಶಿ- ಗುರು-ಮಂಗಳರ ಕೃಪೆಯಿಂದ ನಿರ್ಮಾಣಗೊಂಡಿರುವ ಈ ನವಪಂಚಮ ರಾಜಯೋಗ ಮೇಷ ರಾಶಿಯ ಜಾತಕದವರ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ಹಾಗೆ ನೋಡಿದರೆ ಮಂಗಳ ನಿಮ್ಮ ರಾಶಿಯ ಅಧಿಪತಿ ಕೂಡ ಹೌದು ಮತ್ತು ನಿಮ್ಮ ಗೋಚರ ಜಾತಕದ ತ್ರಿಕೋನಭಾವದ ಸಿಂಹ ರಾಶಿಯಲ್ಲಿ ಆತ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ದೇವ ಗುರು ಬೃಹಸ್ಪತಿಯ ನೇರ ದೃಷ್ಟಿ ಅವನ ಮೇಲೆ ನೆಟ್ಟಿದೆ. ಈ ಅವಧಿಯಲ್ಲಿ ನಿಮ್ಮ ಸ್ಥಾನಮಾನ, ಘನತೆ ಗೌರವ ಹೆಚ್ಚಾಗಲಿದೆ. ಜೊತೆಗೆ ಆಕಸ್ಮಿಕ ಧನಲಾಭ ಕೂಡ ಆಗುವ ಸಾಧ್ಯತೆ ಇದೆ. ನೌಕರ ವರ್ಗದ ಜನರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಪ್ರಭಾವ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ಉನ್ನತಿಯ ಎಲ್ಲಾ ಅವಕಾಶಗಳು ಪ್ರಾಪ್ತಿಯಾಗಲಿವೆ. ನಿಂತುಹೋದ ಕೆಲಸ-ಕಾರ್ಯಗಳು ಪುನಾರಂಭಗೊಳ್ಳಲಿವೆ.
ಕರ್ಕ ರಾಶಿ- ನವ ಪಂಚಮ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಲ್ಲಿ ಮಂಗಳ ಗ್ರಹ ಕೇಂದ್ರ ತ್ರಿಕೋನ ರಾಜಯೋಗವನ್ನು ಕೂಡ ನಿರ್ಮಿಸುತ್ತಿದ್ದಾನೆ. ನಿಮ್ಮ ಜಾತಕದ ಬುದ್ಧಿ ಹಾಗೂ ವೃತ್ತಿಜೀವನ ಭಾವಕ್ಕೆ ಮಂಗಳ ಅಧಿಪತಿ. ಹೀಗಾಗಿ ನೀವು ಈ ಅವಧಿಯಲ್ಲಿ ನಿಮ್ಮ ಬುದ್ಧಿಯ ಸಹಾಯದಿಂದ ವೃತ್ತಿ ಜೀವನದಲ್ಲಿ ಮರಗು ತಂದುಕೊಳ್ಳುವಿರಿ. ಇಂದೊಂಡೆದೆ ಮಂಗಳ ಧನ ಭಾವದಲ್ಲಿ ವಿರಾಜಮಾನನಾಯಿರುವ ಕಾರಣ ನಿಮಗೆ ಧನಲಾಭವಾಗುವ ಅಪಾರ ಸಾಧ್ಯತೆಗಳಿವೆ. ನೌಕರ ವರ್ಗದ ಜನರಿಗೆ ಅವರ ಇಷ್ಟದ ಜಾಗಕ್ಕೆ ವರ್ಗಾವಣೆ ಭಾಗ್ಯ ಪ್ರಾಪ್ತಿಯಾಗಲಿದೆ. ಸೇನೆ, ಪೊಲೀಸ್ ಡಿಪಾರ್ಟ್ಮೆಂಟ್ ಗೆ ಸಂಬಂಧಿಸಿದ ಜನರ ಪಾಲಿಗೆ ಸಮಯ ಅದ್ಭುತವಾಗಿದೆ. ಇಂಜಿನೀಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಸಾಕಷ್ಟು ಯಶಸ್ಸು ಸಿಗಲಿದೆ.
ಸಿಸಿಂಹ ರಾಶಿ- ನಿಮ್ಮ ವೃತ್ತಿ ಜೀವನ ಹಾಗೂ ವ್ಯಾಪಾರ ಜೀವನದ ದೃಷ್ಟಿಯಿಂದ ಈ ನವಪಂಚಮ ರಾಜಯೋಗ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಎಕ್ನ್ದರೆ ಮಂಗಳ ನಿಮ್ಮ ಗೋಚರ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಿಸಿದ್ದಾನೆ. ಇದರಿಂದ ನಿಮ್ಮ ವೈವಾಹಿಕ ಜೀವನ ತುಂಬಾ ಅದ್ಭುತವಾಗಿರಲಿದೆ. ಬಾಳಸಂಗಾತಿಯ ಜೊತೆಗೆ ನೀವು ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಆದರೆ, ಮೂರನೇ ವ್ಯಕ್ತಿಯ ಎಂಟ್ರಿ ನಿಮ್ಮ ಒತ್ತಡ ಹೆಚ್ಚಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ನಿಮ್ಮ ರಾಶಿಯ ಭಾಗ್ಯಸ್ಥಾನದಲ್ಲಿ ದೇವಗುರು ಬೃಹಸ್ಪತಿ ವಿರಾಜಮಾನನಾಗಿದ್ದಾನೆ. ಇದರಿಂದ ನಿಮ್ಮ ಸಾಹಸ, ಪರಾಕ್ರಮ ಹೆಚ್ಚಾಗಲಿದೆ. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನಿಂತುಹೋದ ಕೆಲಸಗಳಿಗೆ ಮತ್ತೊಮ್ಮೆ ಗತಿ ಸಿಗಲಿದೆ.
ಧನು ರಾಶಿ- ನಿಮ್ಮ ಜೀವನದಲ್ಲಿ ನವಪಂಚಮ ರಾಜಯೋಗ ಭಾರಿ ಅನಕೂಲತೆಗಳನ್ನು ತರಲಿದೆ. ಕಾರಣ, ನಿಮ್ಮ ಜಾತಕದ ಪಂಚಮ ಭಾವದಲ್ಲಿ ದೇವಗುರು ಹಾಗೂ ಅದೃಷ್ಟದ ಸ್ಥಾನದಲ್ಲಿ ಮಂಗಳನಿದ್ದಾನೆ. ಹೀಗಾಗಿ ನಿಮ್ಮ ಭಾಗ್ಯೋದಯ ಪಕ್ಕಾ ಎನ್ನಲಾಗಿದೆ. ಸಂತಾನ ಪಕ್ಷದ ಉನ್ನತಿಯಾಗಲಿದ್ದು, ಯಾತ್ರೆ ಕೂಡ ಸಂಭವಿಸುವ ಸಾಧ್ಯತೆ ಇದೆ . ನಿಮಗೆ ಬರೆಬೇಕಾದ ಹಣ ನಿಮ್ಮತ್ತ ಮರಳಲಿದೆ. ಲವ್ ಲೈಫ್ ಕುರಿತು ಹೇಳುವುದಾದರೆ, ಸಂಬಂಧಗಳು ಉತ್ತಮವಾಗಿರಲಿವೆ-ಸಾಮಂಜಸ್ಯ ಇರಲಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಬಹುದು ಸಮಯ ಉತ್ತಮವಾಗಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)