ಐವತ್ತು ವರ್ಷಗಳ ಬಳಿಕ ವರ್ಷಾಂತ್ಯದಲ್ಲಿ ಮೂರು ರಾಜಯೋಗಗಳ ರಚನೆ, ಹೊಸವರ್ಷ ಆರಂಭಕ್ಕೂ ಮುನ್ನವೇ ಈ ಜನರ ಮನೆ ಪ್ರವೇಶಿಸಲಿದ್ದಾಳೆ ಧನಲಕ್ಷ್ಮಿ!
Auspicious Yogas December 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯದಲ್ಲಿ ಮೂರು ರಾಜಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಇದರಿಂದ ಹೊಸ ವರ್ಷ ಆರಂಭವಾಗುವ ಮುನ್ನವೇ ಕೆಲ ರಾಶಿಗಳ ಜನರ ಮನೆಗೆ ಧನ ಪ್ರವೇಶಿಸಿ, ಖುದ್ದಾಗಿ ಬೀಗದ ಕೈ ಅವರಿಗೆ ಹಸ್ತಾಂತರಿಸಲಿದ್ದಾಳೆ. (Spiritual News In Kannada)
ತುಲಾ ರಾಶಿ: ತುಲಾ ರಾಶಿಗೆ ಶುಕ್ರ ಅಧಿಪತಿ ಮತ್ತು ಆತ ಮಾಲವ್ಯ ರಾಜಯೋಗ ರೂಪಿಸಿದ್ದಾನೆ. ಶನಿ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಕೇಂದ್ರ ತ್ರಿಕೋನ ರಾಜಯೋಗ ರೂಪಿಸಿದ್ದಾನೆ. ಇದಲ್ಲದೆ ಶನಿ-ಶುಕ್ರರ ಯುತಿಯಿಂದ ನವಪಂಚಮ ರಾಜಯೋಗ ಕೂಡ ರೂಪುಗೊಂಡಿದೆ ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ಸಿಲುಕಿಹಾಕಿಕೊಂಡ ದುಡ್ಡು ನಿಮ್ಮತ್ತ ಮರಳಲಿದೆ. ಈ ಅವಧಿಯಲ್ಲಿ ನಿಮ್ಮ ಅದೃಷ್ಟ ಬಲವಾಗಿರಲಿದ್ದು, ಲಾಭ ನಿಮ್ಮದಾಗಲಿದೆ. ಅದರಲ್ಲಿಯೂ ವಿಶೇಷವಾಗಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಇಚ್ಛೆಗಳು ಪೂರ್ಣಗೊಳ್ಳಲಿವೆ. ಹೊಸ ಕೆಲಸ ಆರಂಭಿಸಲು ಇದು ಸಕಾಲ.
ಮಕರ ರಾಶಿ: ನಿಮ್ಮ ಗೋಚರ ಜಾತಕದಲ್ಲಿಯೂ ಕೂಡ ಮಾಲವ್ಯ ಹಾಗೂ ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಂಡಿದೆ. ಆದಾಯ ಭಾವದಲ್ಲಿ ಶನಿ ಕುಳಿತುಕೊಂಡಿದ್ದಾನೆ, ಕರ್ಮ ಭಾವದ್ಲ್ಲಿ ಶುಕ್ರ ವಿರಾಜಮಾನನಾಗಿದ್ದಾನೆ. ಹೀಗಾಗಿ ವೃತ್ತಿ ಜೀವನದಲ್ಲಿ ಹಲವು ಸಾಧನೆಗಳನ್ನು ನೀವು ಮಾಡುವಿರಿ. ಇದರಿಂದ ನಿಮಗೆ ಅಪಾರ ಲಾಭ ಸಿಗಲಿದೆ. ಯೋಜನೆಗಳು ಪೂರ್ಣಗೊಳ್ಳಲಿವೆ. ಕೆಲಸ ಕಾರ್ಯಗಳಿಗೆ ಹೊಸ ಗತಿ ಸಿಗಲಿದ್ದು, ಕುಟುಂಬದ ಬೆಂಬಲ ನಿಮಗೆ ಸಿಗಲಿದೆ. ಜೀವನದಲ್ಲಿ ಹಣಗಳಿಕೆಯ ಹಲವು ಅವಕಾಶಗಳು ಒದಗಿ ಬರಲಿದ್ದು ನಿಮಗೆ ಶುಭ ಲಾಭವಾಗಲಿದೆ. ಈ ಅವಧಿಯಲ್ಲಿ ನೀವು ಮೊದಲಿಗಿಂತ ಹೆಚ್ಚು ಹಣ ಉಳಿತಾಯ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ.
ಕುಂಭ ರಾಶಿ: ನಿಮ್ಮ ಗೋಚರ ಜಾತಕದಲ್ಲಿ ಮಾಲವ್ಯ ರಾಜಯೋಗ ಹಾಗೂ ಕೇಂದ್ರ ತ್ರಿಕೋನ ರಾಜಯೋಗದ ಜೊತೆಗೆ ಗುರು ಹಾಗೋ ಶುಕ್ರರ ಸಮಸಪ್ತಕ ದೃಷ್ಟಿ ಕೂಡ ಬೀಳುತ್ತಿದೆ. ಇನ್ನೊಂದೆಡೆ ಅದೃಷ್ಟ ಭಾವದಲಿ ಶುಕ್ರ, ಲಗ್ನ ಭಾವದಲಿ ಶನಿ ಕುಳಿತುಕೊಂಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಆಸೆ ಆಕಾಂಕ್ಷೆಗಳು ಈಡೇರಲಿವೆ. ನೀವು ಮಾಡುವ ಕೆಲಸದಲ್ಲಿ ನಿಮಗೆ ಉತ್ತಮ ಲಾಭ ಸಿಗಲಿದೆ. ಜೀವನದಲ್ಲಿ ಸಕಾರಾತ್ಮಕ ಪ್ರಭಾವ ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭ ಉಂಟಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)