ಭಾರತವನ್ನು ಸೋಲಿಸಲು ಇದೊಂದೇ ದಾರಿ.. ಎದುರಾಳಿಗಳಿಗೆ ಗಿಲ್ ಕ್ರಿಸ್ಟ್ ಕೊಟ್ಟ ಐಡಿಯಾ ಏನು ಗೊತ್ತಾ?

Sat, 11 Nov 2023-1:07 pm,

Indian Cricket Team: ಐಸಿಸಿ ವಿಶ್ವಕಪ್ 2023 ರಲ್ಲಿ ಭಾರತ ತಂಡವು ಆಡಿದ 8 ಪಂದ್ಯಗಳಲ್ಲೂ ಗೆದ್ದು ಪಾಯಿಂಟ್ಸ್‌ ಟೇಬಲ್‌ ನಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೇ, ಸೆಮಿಫೈನಲ್‌ಗೆ ಈಗಾಗಲೇ ಎಂಟ್ರಿ ಪಡೆದಿದೆ. ನವೆಂಬರ್ 11 ರಂದು ನಡೆಯಲಿರುವ ಪಾಕಿಸ್ತಾನ-ಇಂಗ್ಲೆಂಡ್ ಪಂದ್ಯದ ಬಳಿಕ ಭಾರತವನ್ನು ಸೆಮಿಫೈನಲ್‌ನಲ್ಲಿ ಯಾರು ಎದುರಿಸುತ್ತಾರೆ ಎಂಬುದು ನಿರ್ಧಾರವಾಗಲಿದೆ. 

ನವೆಂಬರ್ 12 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಅನ್ನು ಎದುರಿಸಲಿದೆ. ಭಾರತ ಇಲ್ಲಿಯವರೆಗೂ ಒಂದೂ ಪಂದ್ಯವನ್ನು ಸೋಲದೆ ಬಲಿಷ್ಠ ತಂಡವಾಗಿ ಹೊರ ಹೊಮ್ಮಿದೆ. 

ಟೀಮ್‌ ಇಂಡಿಯಾ ಎಲ್ಲಾ ಎಂಟೂ ಪಂದ್ಯಗಳಲ್ಲಿಯೂ ಎದುರಾಳಿ ತಂಡವನ್ನು ಆಲ್ ಔಟ್ ಮಾಡಿದೆ. ಆದರೆ ಯಾರಿಗೂ ಸಹ ಟೀಂ ಇಂಡಿಯಾವನ್ನು ಆಲ್ ಔಟ್ ಮಾಡಲು ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಎಲ್ಲಾ ಬಲಿಷ್ಠ ತಂಡಗಳನ್ನು ಭಾರತ ಸುಲಭವಾಗಿ ಸೋಲಿಸಿದೆ. ಹೀಗಾಗಿ ಈ ಬಾರಿ ತವರು ನೆಲದಲ್ಲಿ ಟೀಮ್‌ ಇಂಡಿಯಾ ಟ್ರೋಫಿ ಗೆಲ್ಲುವ ಭರವಸೆ ಅಭಿಮಾನಿಗಳಲ್ಲಿದೆ.

ಆಸ್ಟ್ರೇಲಿಯದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್ ಕ್ರಿಸ್ಟ್ ಭಾರತ ತಂಡವನ್ನು ಸೋಲಿಸುವ ಹಾದಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ವಿರುದ್ಧ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಬೇಕು. ಆಗ ಭಾರತದ ವಿರುದ್ಧ ಗೆಲಲ್ಲು ಇದು ಸಹಾಯಕವಾಗಬಹುದು ಎಂದಿದ್ದಾರೆ. 

ಆದರೆ ಇದರ ಅರ್ಥ ಭಾರತ ಚೇಸಿಂಗ್‌ನಲ್ಲಿ ದುರ್ಬಲವಾಗಿದೆ ಎಂದಲ್ಲ. ಕೊಹ್ಲಿ ರನ್‌ ಚೇಸಿಂಗ್‌ ಮಾಡಲು ನಿಂತರೆ ಹಿಡಿಯುವುದು ಕಷ್ಟಕರ. ಅಲ್ಲದೇ ರಾತ್ರಿ ಹೊತ್ತು ದೀಪದ ಬೆಳಕು ಸಿರಾಜ್, ಶಮಿ ಮತ್ತು ಬುಮ್ರಾ ಬೌಲಿಂಗ್‌ ಗೆ ಅಡ್ಡಲಾಗಬಹುದು. ಹೀಗಾಗಿ ಬ್ಯಾಟಿಂಗ್ ಮಾಡುವುದು ತುಂಬಾ ಅನುಕೂಲಕರವಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಭಾರತದ ಬೌಲಿಂಗ್ ಲೈನ್-ಅಪ್ ಚೆನ್ನಾಗಿದೆ. ನುರಿತ ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳು ಟೀಮ್‌ ಇಂಡಿಯಾ ಬೌಲಿಂಗ್‌ ಅನ್ನು ಬಲ ಪಡಿಸಿದ್ದಾರೆ. ಬೌಲಿಂಗ್‌ನ ಪರಾಕ್ರಮವೇ ಭಾರತದ ಈ ಯಶಸ್ಸಿಗೆ ಕಾರಣ ಎಂದು ಹೇಳಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link