ರೈಲಿನಲ್ಲಿ ಪ್ರಯಾಣಿಸುವಾಗ ಈ 4 ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು: ಯಾವ್ಯಾವ ಸೌಲಭ್ಯ, ಹೇಗೆ ಪಡೆಯುವುದು ಇಲ್ಲಿದೆ ಮಾಹಿತಿ
ಸರ್ಕಾರದಿಂದ ನಮಗೆ ಅನೇಕ ಸೌಲಭ್ಯಗಳು ಸಿಗುತ್ತವೆ. ಆದರೆ ಬಹುತೇಕರಿಗೆ ಯಾವ್ಯಾವ ಸೌಲಭ್ಯಗಳು ಸಿಗುತ್ತವೆ? ಅವುಗಳನ್ನು ಪಡೆಯುವುದು ಹೇಗೆ ಎಂಬುದೇ ಗೊತ್ತಿರುವುದಿಲ್ಲ. ಇದೆ ರೀತಿ ರೈಲಿನಲ್ಲಿ ಪ್ರಯಾಣಿಸುವಾಗಲೂ ಕೆಲವು ಸೌಲಭ್ಯಗಳನ್ನು ಪಡೆಯಬಹುದು ಅವು ಯಾವುವು? ಮತ್ತು ಹೇಗೆ ಪಡೆಯಬಹುದು ಅಂತಾ ತಿಳಿಯಿರಿ.
ರೈಲ್ವೆ ಇಲಾಖೆ ವತಿಯಿಂದ AC 1, AC 2 ಹಾಗು AC 3 ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಮಲಗಲು ಉಚಿತವಾಗಿ ಬೆಡ್‌ರೋಲ್‌ಗಳನ್ನು ಕೊಡಲಾಗುತ್ತದೆ. ಜೊತೆಗೆ ಹೊದಿಕೆ, ದಿಂಬು, ಎರಡು ಬೆಡ್‌ಶೀಟ್ ಹಾಗು ಟವೆಲ್ ಅನ್ನು ಕೊಡಲಾಗುತ್ತದೆ. ಆದರೆ ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ ಬೆಡ್‌ರೋಲ್ ಪಡೆಯಲು 25 ರೂಪಾಯಿ ಪಾವತಿಸಬೇಕು. ಇನ್ನಿತರ ರೈಲುಗಳಲ್ಲಿ ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ ಸ್ಲೀಪರ್ ಕ್ಲಾಸ್‌ನಲ್ಲಿ ಬೆಡ್‌ರೋಲ್ ಪಡೆಯಬಹುದು.
ರೈಲಿನಲ್ಲಿ ಪ್ರಯಾಣಿಸುವಾಗ ನೀವು ಅನಾರೋಗ್ಯಕ್ಕೆ ತುತ್ತಾದರೆ ರೈಲ್ವೇ ಇಲಾಖೆ ನಿಮಗೆ ಉಚಿತವಾಗಿ ಪ್ರಥಮ ಚಿಕಿತ್ಸೆ ನೀಡುತ್ತದೆ ಮತ್ತು ಪರಿಸ್ಥಿತಿ ಗಂಭೀರವಾಗಿದ್ದರೆ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತದೆ. ವೈದ್ಯಕೀಯ ಸೌಲಭ್ಯಗಳಿಗಾಗಿ ಪ್ರಯಾಣಿಕರು ರೈಲ್ವೇ ನೌಕರರು, ಟಿಕೆಟ್ ಕಲೆಕ್ಟರ್, ಸ್ಟೇಷನ್ ಸೂಪರಿಂಟೆಂಡೆಂಟ್ ಅವರನ್ನು ಸಂಪರ್ಕಿಸಬಹುದು.
ನೀವು ರಾಜಧಾನಿ, ದುರಂತೋ ಮತ್ತು ಶತಾಬ್ದಿಯಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರೆ ಮತ್ತು ನಿಮ್ಮ ರೈಲು ಪ್ರಯಾಣ 2 ಗಂಟೆಗಳಿಗಿಂತ ಹೆಚ್ಚು ತಡವಾದರೆ IRCTC ನಿಮಗೆ ಉಚಿತ ಆಹಾರವನ್ನು ಒದಗಿಸುತ್ತದೆ.
ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಗಂಟೆಗಟ್ಟಲೆ ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಆದರೆ ನಿಲ್ದಾಣದಲ್ಲಿರುವ ಎಸಿ ಅಥವಾ ನಾನ್ ಎಸಿ ವೇಟಿಂಗ್ ಹಾಲ್‌ನಲ್ಲಿ ನೀವು ಆರಾಮವಾಗಿ ಕಾಯಬಹುದು. ಇದಕ್ಕಾಗಿ ನೀವು ನಿಮ್ಮ ರೈಲು ಟಿಕೆಟ್ ತೋರಿಸಬೇಕು. ಪ್ರಮುಖ ನಿಲ್ದಾಣಗಳಲ್ಲಿ ಕ್ಲೋಕ್‌ರೂಮ್‌ಗಳು ಮತ್ತು ಲಾಕರ್ ಕೊಠಡಿಗಳು ಸಹ ಲಭ್ಯವಿರುತ್ತವೆ. ಅಲ್ಲಿ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಇಟ್ಟು ಆರಾಮಾಗಿ ವಿರಮಿಬಹುದು. ಈ ಸೌಲಭ್ಯ ಪಡೆಯಲು ನಿಗದಿತ ಶುಲ್ಕ ಪಾವತಿಸಬೇಕು.