ಈ ಹಣ್ಣು ಮಧುಮೇಹಿಗಳಿಗೆ ರಾಮಬಾಣವಿದ್ದಂತೆ: ಊಟಕ್ಕೆ ಮುನ್ನ ಒಂದು ಪೀಸ್ ತಿಂದರೂ ಸಾಕು 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಇರುತ್ತೆ!

Tue, 08 Oct 2024-3:09 pm,
Avocado For Diabetes Patients

ಮಧುಮೇಹವು ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ನಿಯಂತ್ರಿಸಬಹುದಾದ ಕಾಯಿಲೆಯಾಗಿದೆ. ಇನ್ನು ಮಧುಮೇಹಿಗಳು ಕೆಲವೊಂದು ಆಹಾರಗಳನ್ನಷ್ಟೇ ತಿನ್ನಬಹುದು. ಬದಲಾಗಿ ಮಿತಿಮೀರಿ ತಿನ್ನುವಂತಿಲ್ಲ. ಇದರ ಹೊರತಾಗಿ, ಕೆಲವೊಂದು ಹಣ್ಣುಗಳನ್ನು ಸೇವಿಸಬಹುದಾಗಿದೆ. ಅದರಲ್ಲಿ ಒಂದು ಅವಕಾಡೊ. ಇದನ್ನು ಬಟರ್‌ ಫ್ರೂಟ್‌ ಅಥವಾ ಬೆಣ್ಣೆ ಹಣ್ಣು ಎಂದೂ ಕರೆಯಲಾಗುತ್ತದೆ.

Avocado For Diabetes Patients

ಆವಕಾಡೊ ಸೇವನೆಯು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಇದನ್ನು ಸರಿಯಾದ ಸಮಯ ಮತ್ತು ಸರಿಯಾದ ರೀತಿಯಲ್ಲಿ ತಿನ್ನಬೇಕು. ಬೆಳಗಿನ ಉಪಾಹಾರದಲ್ಲಿ ಆವಕಾಡೊವನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಅಥವಾ ಯಾವುದೇ ಹೊತ್ತಿನ ಆಹಾರ ಸೇವನೆಗೂ ಮುನ್ನ ಅವಕಾಡೊ ಹಣ್ಣನ್ನು ಸೇವಿಸಬೇಕು.

 

Avocado For Diabetes Patients

ಆವಕಾಡೊದ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆಯಿರುವ ಕಾರಣ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಒಂದು ಹೊತ್ತಿನ ಊಟಕ್ಕೂ ಮುನ್ನ ಸೇವಿಸಿದರೆ ಬಹಳಷ್ಟು ಒಳ್ಳೆಯದು.

 

ಆವಕಾಡೊ ಸೇವನೆಯು ಬ್ಲಡ್‌ ಶುಗರ್ ರೋಗಿಗಳಿಗೆ ಸಹ ಪ್ರಯೋಜನಕಾರಿ. ಸಾಮಾನ್ಯವಾಗಿ ಆವಕಾಡೊ ಕಡಿಮೆ ಕಾರ್ಬ್ ಆಹಾರವಾಗಿದೆ. ಆವಕಾಡೊದಲ್ಲಿ ಹೆಚ್ಚಿನ ಕೊಬ್ಬು ಕಂಡುಬರುವುದು ಮಾತ್ರವಲ್ಲದೆ, ಕಡಿಮೆ ಕಾರ್ಬೋಹೈಡ್ರೇಟ್ ಅಂಶದಿಂದಾಗಿ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

 

ಆವಕಾಡೊವನ್ನು ಪ್ರತಿದಿನ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅಪಾಯವನ್ನು ಸಹ ಕಡಿಮೆ ಮಾಡಬಹುದು. ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಜೊತೆಗೆ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಿಗಳಿಗೂ ಇದು ಪ್ರಯೋಜನಕಾರಿಯಾಗಿದೆ.

 

ತೂಕ ಇಳಿಸಿಕೊಳ್ಳಲು ಬಯಸಿದರೆ, ಆಹಾರದಲ್ಲಿ ಆವಕಾಡೊವನ್ನು ಸೇರಿಸಿಕೊಳ್ಳಬಹುದು. ಏಕೆಂದರೆ ಆವಕಾಡೊ ಕಡಿಮೆ ಕಾರ್ಬೋಹೈಡ್ರೇಟ್ ಆಹಾರವಾಗಿದೆ, ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

 

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್‌ ಹೇಳಿಕೊಳ್ಳುವುದಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link