ಕೆಮಿಕಲ್ ಮಿಶ್ರಿತ ಹೇರ್ ಡೈ ಬೇಡ..! ಹೆನ್ನಾ ಪುಡಿಯನ್ನು ಹೀಗೆ ಬಳಸಿ ಬಿಳಿ ಕೂದಲನ್ನು ಗಾಢ ಕಪ್ಪಾಗಿಸಿ ಕಾಂತಿಯುತ ಮೊಣಕಾಲುದ್ದ ಕೂದಲನ್ನು ನಿಮ್ಮದಾಗಿಸಿ..!
ಇತ್ತೀಚಿನ ದಿನಗಳಲ್ಲಿ ಕೂದಲು ಬಲು ಬೇಗ ಬೂದು ಬಣ್ಣಕ್ಕೆ ತಿರುಗುತ್ತದೆ. ಈ ಬೂದು ಬಣ್ಣದ ಕೂದಲು ಅಥವಾ ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಕೆ ಸಾಮಾನ್ಯವಾಗಿದೆ.
ಆದರೆ, ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ ಕೆಮಿಕಲ್ ಮಿಶ್ರಿತವಾಗಿರುವುದರಿಂದ ಇದರ ಬಳಕೆಯಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೆಹಂದಿ ಅತ್ಯುತ್ತಮ ಪರಿಹಾರವಾಗಿದೆ. ಆದರೆ, ಇದಕ್ಕಾಗಿ ಮೆಹಂದಿ ಹಚ್ಚುವ ಸರಿಯಾದ ವಿಧಾನ ತಿಳಿದಿರಬೇಕು.
ಬಿಳಿ ಕೂದಲಿಗೆ ಮೆಹಂದಿ ಪ್ಯಾಕ್ ಅನ್ವಯಿಸಲು ಇದರೊಂದಿಗೆ ಇಂಡಿಗೊ ಪುಡಿ, ಆಮ್ಲಾ ಪುಡಿ, ನಿಂಬೆ ರಸ, ಡಿಕಾಕ್ಷನ್ ಬಳಕೆಯೂ ತುಂಬಾ ಲಾಭದಾಯಕವಾಗಿದೆ.
ಮೊದಲಿಗೆ ಒಂದು ಲೋಟ ನೀರಿನಲ್ಲಿ 1 ಸ್ಪೂನ್ ಫಿಲ್ಟರ್ ಕಾಫಿ ಪುಡಿ, 1 ಸ್ಪೂನ್ ಟೀ ಸೊಪ್ಪು ಹಾಕಿ ನೀರು ಅರ್ಧ ಆಗುವವರೆಗೂ ಚೆನ್ನಾಗಿ ಕುದಿಸಿ. ಬಳಿಕ ಡಿಕಾಕ್ಷನ್ ಅನ್ನು ಶೋಧಿಸಿಕೊಳ್ಳಿ...
ಒಂದು ಬಟ್ಟಲಿನಲ್ಲಿ ಅರ್ಧ ಕಪ್ ಮೆಹಂದಿ ಪುಡಿ, ಅರ್ಧ ಕಪ್ ಇಂಡಿಗೊ ಪುಡಿ, 2 ಸ್ಪೂನ್ ಆಮ್ಲಾ ಪುಡಿ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ. ಇದರಲ್ಲಿ ನಿಂಬೆ ರಸ ಹಾಕಿ ಬಳಿಕ ತಯಾರಿಸಿಟ್ಟ ಡಿಕಾಕ್ಷನ್ ಬೆರೆಸಿ ಹೇರ್ ಪ್ಯಾಕ್ ಹದಕ್ಕೆ ಮಿಶ್ರಣ ಮಾಡಿ.
ಮೆಹಂದಿ ಪ್ಯಾಕ್ ನಲ್ಲಿ ಬಳಸಲ್ಪಡುವ ವಸ್ತುಗಳ ಬಳಕೆಯಿಂದ ಬಿಳಿ ಕೂದಲಿಗೆ ಸಿಗುವ ಪ್ರಯೋಜನಗಳೆಂದರೆ... * ಮೆಹಂದಿ ಪುಡಿ- ಕಂದು ಬಣ್ಣ * ಇಂಡಿಗೊ ಪುಡಿ- ಕೂದಲನ್ನು ಗಾಢ ಕಪ್ಪಾಗಿಸಲು ಸಹಕಾರಿ * ನೆಲ್ಲಿಕಾಯಿ ಪುಡಿ- ಕೂದಲಿಗೆ ನೈಸರ್ಗಿಕ ಬಣ್ಣ ನೀಡಿ ಕೂದಲ ಬೆಳವಣಿಗೆಗೆ ಸಹಕಾರಿ * ನಿಂಬೆ ರಸ- ಕೂದಲನ್ನು ಬುಡದಿಂದ ಗಟ್ಟಿಯಾಗಿ ಕೂದಲು ಕಪ್ಪಾಗಲು ಸಹಕಾರಿ ಆಗಿದೆ. * ಟೀ-ಕಾಫಿ ಪುಡಿ ಡಿಕಾಕ್ಷನ್- ಬಿಳಿ ಕೂದಲನ್ನು ಗಾಢ ಕಪ್ಪಾಗಿಸುತ್ತದೆ.
ಮನೆಯಲ್ಲಿ ತಯಾರಿಸಿದ ಹೆನ್ನಾ ಹೇರ್ ಪ್ಯಾಕ್ ಅನ್ನು ಕೂದಲಿಗೆ ಅಪ್ಪ್ಲೈ ಮಾಡಿ. ಪ್ಯಾಕ್ ಒಣಗಿದ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ಮೆಹಂದಿ ಮತ್ತು ಇಂಡಿಗೊ ಪುಡಿ ಕೂದಲನ್ನು ಡ್ರೈ ಮಾಡುವ ಸಾಧ್ಯತೆ ಇರುವುದರಿಂದ ಹೇರ್ ವಾಶ್ ಮಾಡಿದ ಬಳಿಕ ಕಂಡೀಷನರ್ ಹಾಕುವುದನ್ನು ಮರೆಯಬೇಡಿ.
ಈ ಹೇರ್ ಪ್ಯಾಕ್ ಬಳಸುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಡು ಕಪ್ಪಾಗಿ ಮಾರುದ್ದ ಬೆಳೆಯುತ್ತದೆ. ಜೊತೆಗೆ ಆಕರ್ಷಕ ಕಾಂತಿಯುತ ಕೂದಲು ನಿಮ್ಮದಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.