Reheat Foods: ಈ 4 ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಲೇಬಾರದು!
ಇದೆಲ್ಲದರ ಹೊರತಾಗಿ ಪ್ರತಿ ಮನೆಯಲ್ಲೂ ಪ್ರತಿದಿನ ಒಂದೊಂದು ಕೆಲಸ ನಡೆಯುತ್ತದೆ. ಆಹಾರ ತಯಾರಿಸುವಾಗ ಎಷ್ಟೇ ಜಾಗರೂಕತೆ ವಹಿಸಿದರೂ ಕೆಲವೊಮ್ಮೆ ಮಿಕ್ಕಿರುತ್ತದೆ. ಅವುಗಳನ್ನು ಮತ್ತೆ ಮತ್ತೆ ಬಿಸಿಮಾಡಿ ತಿನ್ನುತ್ತೇವೆ.
ಆದರೆ ಕೆಲ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಬಾರದು. ಹಾಗೆ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯನ್ನುಂಟಾಗುತ್ತದೆ. ಕೆಲವೊಮ್ಮೆ ನಾವು ಉದ್ದೇಶಪೂರ್ವಕವಾಗಿ ಹೆಚ್ಚಿನ ಆಹಾರಗಳನ್ನು ತಯಾರಿಸುತ್ತೇವೆ. ಸಮಯದ ಅಭಾವದಿಂದ ಮತ್ತೆ ಬಿಸಿ ಮಾಡಿದ ನಂತರ ತಿನ್ನುತ್ತೇವೆ.
ಆದರೆ ಆಹಾರವನ್ನು ಮತ್ತೆ ಬಿಸಿ ಮಾಡುವುದರಿಂದ ಅದರ ಪೋಷಕಾಂಶಗಳನ್ನು ನಾಶಪಡಿಸುವುದು ಮಾತ್ರವಲ್ಲದೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಹಾಗಾದರೆ ಅಂತಹ ಕೆಲವು ಆಹಾರಗಳು ಯಾವುವು ಎಂದು ತಿಳಿಯೋಣ.
ಬೀಟ್ರೂಟ್ ಅನ್ನು ಎಂದಿಗೂ ಮತ್ತೆ ಬಿಸಿ ಮಾಡಿ ತಿನ್ನಬಾರದು. ಅದನ್ನು ಮತ್ತೆ ಬಿಸಿ ಮಾಡುವುದರಿಂದ, ಅದರಲ್ಲಿರುವ ನೈಟ್ರೇಟ್ ನಾಶವಾಗುತ್ತದೆ, ಇದರಿಂದಾಗಿ ಅದು ಪ್ರಯೋಜನಕ್ಕೆ ಬದಲಾಗಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ನಾವು ಸಾಮಾನ್ಯವಾಗಿ ಪೂರಿ, ಪಕೋಡ ಅಥವಾ ಡೀಪ್ ಫ್ರೈ ಮಾಡಿದ ವಸ್ತುಗಳಿಗೆ ಬಾಣಲೆಯಲ್ಲಿ ಹೆಚ್ಚು ಎಣ್ಣೆಯನ್ನು ಸೇರಿಸುತ್ತೇವೆ. ತದನಂತರ ಉಳಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡಿ ಬಳಸುತ್ತೇವೆ, ಅದು ಆರೋಗ್ಯಕ್ಕೆ ಅಪಾಯಕಾರಿ.
ಪಾಲಕ್ ಸೊಪ್ಪನ್ನು ಮತ್ತೆ ಬಿಸಿ ಮಾಡಿ ತಿನ್ನಬಾರದು. ಪಾಲಕ್ ಅನ್ನು ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿರುವ ನೈಟ್ರೇಟ್ ಅಂಶಗಳು ಹಾನಿಕಾರಕ ಅಂಶಗಳಾಗಿ ಪರಿವರ್ತನೆಗೊಳ್ಳುತ್ತದೆ, ಇದು ದೇಹಕ್ಕೆ ಸಾಕಷ್ಟು ಅಪಾಯಕಾರಿ.
ಮೊಟ್ಟೆಗಳನ್ನು ಪ್ರೋಟೀನ್’ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಅನೇಕ ಜನರು ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ, ಆದರೆ ಮೊಟ್ಟೆಗಳನ್ನು ಮತ್ತೆ ಬಿಸಿ ಮಾಡಿ ತಿನ್ನಬಾರದು. ಅದು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)