ಸೂರ್ಯಾಸ್ತದ ವೇಳೆ ಮಾಡುವ ಈ ತಪ್ಪುಗಳು ಸೌಭಾಗ್ಯವನ್ನು ದೌರ್ಭಾಗ್ಯವಾಗಿ ಬದಲಿಸಿಬಿಡುತ್ತದೆ
ಸೂರ್ಯಾಸ್ತದ ಸಮಯದಲ್ಲಿ ಮಲಗಬೇಡಿ: ಸಾಮಾನ್ಯವಾಗಿ ಸಂಜೆಯ ಹೊತ್ತು ಮಲಗಬಾರದು ಎಂದು ಹಿರಿಯರೂ ಹೇಳುತ್ತಿರುತ್ತಾರೆ. ಲಕ್ಷ್ಮೀ ದೇವಿಯು ಸಂಜೆ ಮನೆಗೆ ಪ್ರವೇಶಿಸುತ್ತಾಳೆ ಎನ್ನುವುದು ನಂಬಿಕೆ. ಆದ್ದರಿಂದ, ಈ ಸಮಯದಲ್ಲಿ ಮಲಗುವ ತಪ್ಪನ್ನು ಎಂದಿಗೂ ಮಾಡಬೇಡಿ.
ಮರಗಳು ಮತ್ತು ಸಸ್ಯಗಳನ್ನು ಮುಟ್ಟಬೇಡಿ: ಸೂರ್ಯಾಸ್ತದ ನಂತರ ಮರಗಳು ಮತ್ತು ಸಸ್ಯಗಳನ್ನು ಮುಟ್ಟಬಾರದು ಅಥವಾ ಹಣ್ಣುಗಳು ಮತ್ತು ಎಲೆಗಳನ್ನು ಕೀಳಬಾರದು. ಸೂರ್ಯಾಸ್ತದ ನಂತರ, ಮರಗಳು ಮತ್ತು ಸಸ್ಯಗಳು ನಿದ್ರೆಗೆ ಜಾರುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಅವುಗಳನ್ನು ಸ್ಪರ್ಶಿಸುವುದು ಅಪರಾಧ ಎನ್ನಲಾಗಿದೆ.
ಸೂರ್ಯಾಸ್ತದ ನಂತರ ಗುಡಿಸಿ ಮತ್ತು ಒರೆಸಬೇಡಿ: ಸೂರ್ಯಾಸ್ತದ ನಂತರ ಮನೆಯನ್ನು ಸ್ವಚ್ಛಗೊಳಿಸಬೇಡಿ. ಸೂರ್ಯಾಸ್ತದ ನಂತರ ಗುಡಿಸುವುದು, ಬಲೆ ತೆಗೆಯುವುದು ಇತ್ಯಾದಿ ಕೆಲಸಗಳನ್ನು ಮಾಡುವುದು ಸರಿಯಲ್ಲ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.
ಮೊಸರು ದಾನ ಮಾಡಬೇಡಿ: ದಾನ ಮಾಡುವುದು ಒಳ್ಳೆಯದು ಆದರೆ ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ನಂತರ ತಪ್ಪಾಗಿಯೂ ಮೊಸರು, ಉಪ್ಪಿನಕಾಯಿ ಮತ್ತು ಉಪ್ಪಿನಂತಹ ಪದಾರ್ಥಗಳನ್ನು ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಲಕ್ಷ್ಮೀ ಬೇರೆಯವರ ಪಾಲಾಗುತ್ತದೆ.
ಉಗುರುಗಳು ಮತ್ತು ಕೂದಲನ್ನು ಕತ್ತರಿಸಬೇಡಿ: ಸೂರ್ಯಾಸ್ತದ ಸಮಯದಲ್ಲಿ ಮತ್ತು ಸೂರ್ಯಾಸ್ತದ ನಂತರ ಉಗುರುಗಳು ಮತ್ತು ಕೂದಲನ್ನು ಎಂದಿಗೂ ಕತ್ತರಿಸಬೇಡಿ. ಶೇವಿಂಗ್ ಮಾಡುವುಡು ಕೂಡಾ ಸರಿಯಲ್ಲ. ಹೀಗೆ ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ಅದರೊಂದಿಗೆ ಬಡತನವೂ ಬರುತ್ತದೆ.