ಡಬಲ್ ಚಿನ್ ಸಮಸ್ಯೆಯಿಂದ ಪರಿಹಾರ ಪಡೆಯಲು ಇಂದೇ ಆಹಾರಗಳನ್ನು ಬಿಡಿ

Fri, 27 Jan 2023-12:18 pm,

ಒಬ್ಬೊಬ್ಬರೇ ಇದ್ದಾಗ ಅಡುಗೆ ಮಾಡುವುದೇ ಬೇಸರದ ಕೆಲಸ. ಹಾಗಾಗಿ,ಕೆಲವರು ಬೆಳಿಗ್ಗೆ ಉಪಹಾರದಲ್ಲಿ, ರಾತ್ರಿ ಊಟದ ಸಮಯದಲ್ಲಿ ಒಂದೆರಡು ಬ್ರೆಡ್ ತಿಂದರೆ ಸಾಕು ಎಂದು ದಿನ ತಳ್ಳುತ್ತಾರೆ. ಆದರೆ, ಇದರಿಂದ ಮುಖದಲ್ಲಿ ಕೊಬ್ಬು ಶೇಖರವಾಗುತ್ತದೆ ಎನ್ನುತ್ತಾರೆ ತಜ್ಞರು.

ಜಂಕ್ ಫುಡ್ಸ್, ಚಾಟ್ಸ್ ಎಂದರೆ ಎಂತಹವರ ಬಾಯಲ್ಲೂ ನೀರು ಬರುತ್ತದೆ. ಆದರೆ, ಇವು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರಮೇಣ ಈ ಆಹಾರಗಳು ನಿಮ್ಮ ಡಬಲ್ ಚಿನ್ ಸಮಸ್ಯೆಗೂ ಕಾರಣವಾಗಬಹುದು.

ಆಲ್ಕೋಹಾಲ್ ಸೇವನೆಯಿಂದ ಕಿರಿಯ ವಯಸ್ಸಿನಲ್ಲಿಯೇ ಮುಖದಲ್ಲಿ ಡಬಲ್ ಚಿನ್ ಕಾಣಿಸಿಕೊಳ್ಳಬಹುದು.

ಪ್ರೋಟೀನ್‌ನ ಪ್ರಮುಖ ಮೂಲವಾಗಿರುವ ರೆಡ್ ಮೀಟ್ ಆರೋಗ್ಯಕ್ಕೆ ಉತ್ತಮ ಆಹಾರ ಎಂಬುದರಲ್ಲಿ ಅನುಮಾನವಿಲ್ಲ. ಹಾಗಂತ, ಇದರ ಅತಿಯಾದ ಸೇವನೆಯು ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ. ಇದರ ಪರಿಣಾಮ ನಿಮ್ಮ ಮುಖದ ಮೇಲೂ ಗೋಚರಿಸುತ್ತದೆ.

ಕೆಲವು ಆಹಾರಗಳಲ್ಲಿ ರುಚಿ ಹೆಚ್ಚಿಸಲು ಸೋಯಾಸಾಸ್ ಅನ್ನು ಬಳಸಲಾಗುತ್ತದೆ. ಆದರೆ, ಇದು ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಮುಖದಲ್ಲಿ ಡಬಲ್ ಚಿನ್ ಸಮಸ್ಯೆಗೂ ಕಾರಣವಾಗಬಹುದು. ಹಾಗಾಗಿ, ನೀವೂ ಈ ಆಹಾರಗಳನ್ನು ಅತಿಯಾಗಿ ಸೇವಿಸುವ ಅಭ್ಯಾಸ ಹೊಂದಿದ್ದರೆ, ಡಬಲ್ ಚಿನ್ ಸಮಸ್ಯೆಯನ್ನು ತಪ್ಪಿಸಲು ಇಂದಿನಿಂದಲೇ ಈ ಆಹಾರಗಳಿಂದ ದೂರ ಉಳಿಯಿರಿ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link