Worst Foods For Health:ದೇಹದ Immunity ಕಾಪಾಡಿಕೊಳ್ಳಬೇಕಾದರೆ ಈ ವಸ್ತುಗಳಿಂದ ದೂರವಿರಿ
ಕರೋನ ವೈರಸಿನಿಂದ ರಕ್ಷಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಹೆಚ್ಚಿನ ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನು ಸೇರಿಸಿ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಕರೋನದ ಹಿಡಿತಕ್ಕೆ ಒಳಗಾಗುತ್ತಾರೆ ಎನ್ನುವುನ್ನುಅಧ್ಯಯನ ವರದಿಗಳು ಹೇಳುತ್ತವೆ.
ಹಲವಾರು ಬಾರಿ ಅಡುಗೆ ಮಾಡಿ ಅಥವಾ ತಿಂಡಿಗಳನ್ನು ಕರಿದ ನಂತರ ಉಳಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸಿಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ.
ಕೆಲವರು ಕಾಫಿಯನ್ನು ಬಹಳವಾಗಿ ಇಷ್ಟಪಡುತ್ತಾರೆ. ಹಾಗಂತ ಸಿಕ್ಕ ಸಿಕ್ಕಿದ ಹಾಗೆ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಅತಿಯಾಗಿ ಕಾಫಿ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಾಫಿಯಲ್ಲಿ ಕಂಡುಬರುವ ಕೆಫೀನ್ ರೋಗ ನಿರೋಧಕ ಶಕ್ತಿಯನ್ನು ಬಹಳವಾಗಿ ದುರ್ಬಲಗೊಳಿಸುತ್ತದೆ. ದಿನಕ್ಕೊಮ್ಮೆ ಕಾಫಿ ಕುಡಿಯುವುದರಲ್ಲಿ ಯಾವುದೇ ತಪ್ಪಿಲ್ಲ.
ಸಂಸ್ಕರಿಸಿದ ಆಹಾರ ಸೇವನೆ ಕೂಡಾ, ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಸಂಸ್ಕರಿಸಿದ ಮಾಂಸ ಅಥವಾ ಪ್ಯಾಕ್ ಮಾಡಿದ ಆಹಾರದಿಂದ ಸಾಧ್ಯವಾದಷ್ಟು ದೂರವಿರಿ. ಈ ಸಮಯದಲ್ಲಿ ಮನೆಯಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಉತ್ತಮ.
ಬರ್ಗರ್, ಪಿಜ್ಜಾ ಮತ್ತು ಇತರ ಇನ್ಸ್ಟಂಟ್ ಫುಡ್ ಅನ್ನು ತಯಾರಿಸಲು ಸಕ್ಕರೆ ಮತ್ತು ಮೈದಾವನ್ನು ಬಳಸಲಾಗುತ್ತದೆ. ಅವುಗಳಲ್ಲಿ ನಾರಿನ ಪ್ರಮಾಣ ತುಂಬಾ ಕಡಿಮೆಯಿರುತ್ತದೆ. ಇನ್ಸ್ಟಂಟ್ ಫುಡ್ ಅನ್ನು ಅತಿಯಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.
ಆಲ್ಕೋಹಾಲ್ ಮತ್ತು ಸಿಗರೇಟ್ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಸಾಧ್ಯವಾದಷ್ಟು ಬೇಗ, ಅಂತಹ ವಿಷಯಗಳಿಂದ ನಿಮ್ಮನ್ನು ದೂರವಿಡಿ.