ಕೊಲೆಸ್ಟ್ರಾಲ್ ಹೆಚ್ಚುತ್ತಿದೆ ಎಂದಾದರೆ ಈ ನಾಲ್ಕು ವಸ್ತುಗಳಿಂದ ತಕ್ಷಣದಿಂದಲೇ ದೂರವಿರಿ .!
ಆಲ್ಕೋಹಾಲ್ ಅತಿಯಾಗಿ ಸೇವಿಸಿದಾಗ ಅದು ದೇಹದ ಅಂಗಕ್ಕೆ ಹಾನಿಯನ್ನುಂಟುಮಾಡುತ್ತದೆ. ವಿಶೇಷವಾಗಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ, ಆಲ್ಕೋಹಾಲ್ ಅನ್ನು ಕುಡಿಯಬಾರದು. ಏಕೆಂದರೆ ಅದು ನಿಮ್ಮ ಕೊಲೆಸ್ಟ್ರಾಲ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಇತರ ಕಾಯಿಲೆಗಳ ಸಾಧ್ಯತೆಯೂ ಹೆಚ್ಚಾಗುತ್ತದೆ.
ದೈನಂದಿನ ಆಹಾರದಲ್ಲಿ ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸುತ್ತಿದ್ದರೆ, ಅದು ಹಾನಿಕಾರಕವಾಗಿ ಪರಿಣಮಿಸಬಹುದು. ಅದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕುಕೀಗಳು, ಪೇಸ್ಟ್ರಿಗಳು, ಕೇಕ್ ಗಳಂಥಹ ಅನಾರೋಗ್ಯಕರ ವಸ್ತುಗಳನ್ನು ಸೇವಿಸಬಾರದು.
ಕೊಲೆಸ್ಟ್ರಾಲ್ ಮಟ್ಟವು ಅಧಿಕವಾಗಿದ್ದರೆ, ನಾನ್ ವೆಜ್ ಸೇವನ್ಯನ್ನು ನಿಲ್ಲಿಸಬೇಕು. ಅದರಲ್ಲೂ ರೇಡ್ ಮೀಟ್ ಅನ್ನು ಮುಟ್ಟಿಯೂ ನೋಡಿವಂತಿಲ್ಲ. ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.
ಕರಿದ ಆಹಾರವನ್ನು ಇಷ್ಟಪಡುತ್ತಿದ್ದರೆ, ಇದು ನಿಮಗೆ ಅಪಾಯಕಾರಿ ಸಂಕೇತವಾಗಿದೆ. ವಿಶೇಷವಾಗಿ ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಜನರು ಎಣ್ಣೆಯಲ್ಲಿ ಕರಿದ ಆಹಾರವನ್ನು ಸೇವಿಸಬಾರದು. ಇದು ಕೊಲೆಸ್ಟ್ರಾಲ್ ಮಟ್ಟ ಇದ್ದಕ್ಕಿದ್ದಂತೆ ಏರಲು ಕಾರಣವಾಗಬಹುದು.