ಕಿರಿಯ ವಯಸ್ಸಿನಲ್ಲಿಯೇ ತ್ವಚೆ ವಯಸ್ಸಾದವರಂತೆ ಕಾಣಲು ಈ ಅಭ್ಯಾಸಗಳೇ ಕಾರಣ
ತಮ್ಮ ಬ್ಯುಸಿ ಜೀವನ ಶೈಲಿಯ ಕಾರಣದಿಂದಾಗಿ ಅನೇಕ ಜನರು ಕಡಿಮೆ ನಿದ್ರೆ ಮಾಡುತ್ತಾರೆ. ಆದರೆ ಹಾಗೆ ಮಾಡುವುದರಿಂದ ನಮ್ಮ ದೈಹಿಕ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಿರಿಯ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ಕಾಣುತ್ತಾರೆ.
ಹೆಚ್ಚು ಆಲ್ಕೋಹಾಲ್ ಸೇವಿಸುವವರ ತ್ವಚೆಯು ಬೇಗನೆ ಹಾನಿಗೊಳಗಾಗುತ್ತದೆ. ಆದ್ದರಿಂದ, ಮದ್ಯದ ಅತಿಯಾದ ಸೇವನೆ ಒಳ್ಳೆಯದಲ್ಲ.
ಕೆಲವರಿಗೆ 2-3 ಗಂಟೆಗೊಮ್ಮೆ ಧೂಮಪಾನ ಮಾಡುವ ಅಭ್ಯಾಸವಿರುತ್ತದೆ. ನಿಮಗೂ ಅಂತಹ ಅಭ್ಯಾಸವಿದ್ದರೆ, ಈ ಅಭ್ಯಾಸವನ್ನು ಬದಲಿಸಿಕೊಳ್ಳಿ ಏಕೆಂದರೆ ಧೂಮಪಾನದ ಅಭ್ಯಾಸವು ಚರ್ಮವನ್ನು ಹಾಳು ಮಾಡುತ್ತದೆ.
ಅನಾರೋಗ್ಯಕರ ಆಹಾರಗಳಾದ ಪಿಜ್ಜಾ, ಬರ್ಗರ್, ಚಿಪ್ಸ್ ಇತ್ಯಾದಿಗಳ ಸೇವನೆಯಿಂದ ಬೊಜ್ಜು ಹೆಚ್ಚುತ್ತದೆ. ಬೊಜ್ಜು ಹೆಚ್ಚಾದರೆ ಅದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಯಾವ ಕೆಲಸವನ್ನೂ ಮಾಡದೆ ಯಾವಾಗಲೂ ಮಲಗಿಕೊಂಡಿರುವುದು ಅಥವಾ ಕುಳಿತುಕೊಳ್ಳುತ್ತಿರುವುದು ಮಾಡಿದರೆ ಕಿರಿಯ ವಯಸ್ಸಿನಲ್ಲಿಯೇ ತ್ವಚೆಗೆ ವಯಸ್ಸಾಗುತ್ತದೆ.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)