ಮಲಗುವ ಮುನ್ನ ತಪ್ಪಿಯೂ ಬೇಡ ಈ ವಸ್ತುಗಳ ಸೇವನೆ
ದಿನವಿಡೀ ಸಾಕಷ್ಟು ಆಯಾಸದ ಹೊರತಾಗಿಯೂ, ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ನಿದ್ರೆ ಮಾಡಲು ಪ್ರಯತ್ನಿಸುತ್ತಾರಾದರೂ ಏನೂ ಪ್ರಯೋಜನವಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಸೇವಿಸುವ ಆಹಾರ. ಹೌದು ರಾತ್ರಿ ನಾವು ಸೇವಿಸುವ ಆಹಾರ ನಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ.
ಚಾಕೊಲೇಟ್ ಕೆಫೀನ್ ಮತ್ತು ಸಕ್ಕರೆಯನ್ನು ಹೊಂದಿರುತ್ತದೆ. ಚಾಕೊಲೇಟ್ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ. ರಾತ್ರಿ ಚಾಕಲೇಟ್ ತಿನ್ನುವುದರಿಂದ ರಾತ್ರಿಯಿಡೀ ನಿದ್ದೆ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ, ಮಲಗುವ ಮೊದಲು ಚಾಕೊಲೇಟ್‌ನಿಂದ ದೂರವಿರುವುದು ಒಳ್ಳೆಯದು
ರಾತ್ರಿ ಕಾರ್ನ್ ಫ್ಲೆಕ್ಸ್ ಸೇವಿಸಬಾರದು. ಮಾರುಕಟ್ಟೆಯಲ್ಲಿ ಸಿಗುವ ಇಂತಹ ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ತ್ವರಿತ ಏರಿಕೆಗೆ ಸಹಾಯ ಮಾಡುತ್ತದೆ. ಆದ್ದರಿಂದ, ತಪ್ಪಿಯೂ ಮಲಗುವ ಮುನ್ನ ಇದನ್ನು ತಿನ್ನಬೇಡಿ. ಇದನ್ನು ಬೆಳಿಗ್ಗೆ ಉಪಾಹಾರದಲ್ಲಿ ಸೇವಿಸಬಹುದು.
ಹೆಚ್ಚಿನ ಜನರು ಬೆಳ್ಳುಳ್ಳಿ ಇಲ್ಲದೆ ಆಹಾರವನ್ನು ತಿನ್ನುವುದಿಲ್ಲ. ಇದನ್ನು ಆಹಾರದಲ್ಲಿ ಸೇವಿಸುವುದು ಪ್ರಯೋಜನಕಾರಿಯಾಗಿರುತ್ತದೆ. , ಆದರೆ ಬೆಳ್ಳುಳ್ಳಿಯನ್ನು ರಾತ್ರಿ ಸೇವಿಸಿದರೆ ಅದು ನಿಮ್ಮ ನಿದ್ರೆಯನ್ನು ದೂರ ಮಾಡುತ್ತದೆ. ರಾತ್ರಿ ಉತ್ತಮ ನಿದ್ರೆ ಬಯಸಿದರೆ, ಊಟದಲ್ಲಿ ಬೆಳ್ಳುಳ್ಳಿಯ ಪ್ರಮಾಣವನ್ನು ಕಡಿಮೆ ಮಾಡಿ.
ಪಾಸ್ಟಾ, ಮೊಮೊಸ್, ನೂಡಲ್ಸ್ ಮುಂತಾದ ವಸ್ತುಗಳನ್ನು ರಾತ್ರಿಯಲ್ಲಿ ಸೇವಿಸಬಾರದು. ರಾತ್ರಿಯಲ್ಲಿ ಇವುಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ತಿನ್ನುವ ಶೈಲಿಯನ್ನು ಬದಲಾಯಿಸಿಕೊಂಡರೆ ರಾತ್ರಿ ಉತ್ತಮ ನಿದ್ರೆ ಬರುತ್ತದೆ.