ನಿತ್ಯ ಮಾಡುವ ಈ ಸಣ್ಣ ತಪ್ಪುಗಳನ್ನು ತಿದ್ದಿಕೊಂಡರೆ ಬ್ಲಡ್ ಶುಗರ್ ಸದಾ ನಿಯಂತ್ರಣದಲ್ಲಿಯೇ ಇರುತ್ತದೆ !
ನಿದ್ರೆಯ ಕೊರತೆಯಿಂದಾಗಿ, ದೇಹದಲ್ಲಿನ ಹಾರ್ಮೋನುಗಳ ಮಟ್ಟದಲ್ಲಿ ಏರುಪೇರಾಗುತ್ತದೆ. ಇದರಿಂದಾಗಿ ಇನ್ಸುಲಿನ್ ಪ್ರತಿರೋಧ ಮತ್ತು ಬ್ಲಡ್ ಶುಗರ್ ಹೆಚ್ಚಾಗುವ ಅಪಾಯ ಕಂಡು ಬರುತ್ತದೆ. ಕಡಿಮೆ ನಿದ್ದೆ ಮಾಡುವುದರಿಂದಲೂ ಸಕ್ಕರೆಯ ಮಟ್ಟವನ್ನು ಹೆಚ್ಚಾಗುತ್ತದೆ.
ಪ್ರೋಟೀನ್ ಕೊರತೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಪ್ರೋಟೀನ್ ದೇಹದಿಂದ ಕಾರ್ಬೋಹೈಡ್ರೇಟ್‌ಗಳನ್ನು ಹೀರಿಕೊಳ್ಳುವ ವೇಗವನ್ನು ಕಡಿಮೆ ಮಾಡುತ್ತದೆ. ಆದರೆ ಕಡಿಮೆ ಪ್ರೋಟೀನ್‌ನಿಂದಾಗಿ, ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ.
ಡಯೆಟರಿ ಫೈಬರ್ ದೇಹದ ಸಕ್ಕರೆಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಸಕ್ಕರೆಯ ಹಾನಿಯನ್ನು ತಪ್ಪಿಸಬಹುದು. ಆದರೆ, ಕಡಿಮೆ ಪ್ರಮಾಣದ ಫೈಬರ್ ಅನ್ನು ಸೇವಿಸಿದಾಗ, ಅದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚು ಮಾಡುತ್ತದೆ.
ಒತ್ತಡ, ಭಯ ಮತ್ತು ಆತಂಕದಿಂದಲೂ ಶುಗರ್ ಲೆವೆಲ್ ಹೆಚ್ಚಾಗಬಹುದು. ಮಾನಸಿಕ ಅಥವಾ ದೈಹಿಕ ಮಟ್ಟದಲ್ಲಿ ಯಾವುದೇ ರೀತಿಯ ಒತ್ತಡವನ್ನು ಅನುಭವಿಸಿದಾಗ, ಅದು ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮಗಳಾಗುತ್ತವೆ. ಈ ಕಾರಣದಿಂದಾಗಿ, ರಕ್ತನಾಳಗಳಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗಬಹುದು.
ಸಕ್ಕರೆಯ ಹಾನಿಯನ್ನು ತಪ್ಪಿಸಲು, ಜನರು ಚಹಾ, ಕಾಫಿ ಮತ್ತು ಪುಡಿಂಗ್‌ನಂತಹ ವಸ್ತುಗಳಲ್ಲಿ ಕೃತಕ ಸಕ್ಕರೆ ಅಥವಾ ಶುಗರ್ ಫ್ರೀ ಮಾತ್ರೆಗಳನ್ನು ಸೇರಿಸುತ್ತಾರೆ. ಆದರೆ ಈ ವಸ್ತುಗಳ ಸೇವನೆಯು ಹಾನಿಯನ್ನು ಉಂಟುಮಾಡುತ್ತದೆ. ಈ ಕೃತಕ ಸಿಹಿಕಾರಕಗಳು ಮಧುಮೇಹ ರೋಗಿಗಳಿಗೆ ಹಾನಿ ಮಾಡುವುದಲ್ಲದೆ, ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಎನ್ನುವುದು ಅನೇಕ ಅಧ್ಯಯನಗಳಲ್ಲಿ ಕಂಡುಬಂದಿದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)