ವಿಮಾನ ಟಿಕೆಟ್ ಕಾಯ್ದಿರಿಸುವಾಗ ಆಗುವ ಒಂದೇ ಒಂದು ತಪ್ಪು ಸಮಸ್ಯೆ ಉಂಟುಮಾಡಬಹುದು.!
ಲಭ್ಯವಿರುವ ವಿಮಾನಗಳನ್ನು ತೋರಿಸುವಾಗ ಕೆಲವು ಏರ್‌ಲೈನ್‌ಗಳು 24-ಗಂಟೆಗಳ ಅವಧಿಯ ಆಧಾರದ ಮೇಲೆ ಸಮಯವನ್ನು ತೋರಿಸುತ್ತದೆ. ಹೀಗಿರುವಾಗ 04:31AM ಬದಲಿಗೆ 04:31PM ವಿಮಾನವನ್ನು ಬುಕ್ ಮಾಡಿದರೆ, ವಿಮಾನವು ತಪ್ಪಿಹೋಗಬಹುದು. ಆದ್ದರಿಂದ ಈ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ನೀವು ಆನ್‌ಲೈನ್‌ನಲ್ಲಿ ಫ್ಲೈಟ್ ಟಿಕೆಟ್‌ಗಳನ್ನು ಬುಕ್ ಮಾಡುವಾಗಲೆಲ್ಲಾ, ಪಾಸ್‌ಪೋರ್ಟ್ ಅಥವಾ ಐಡಿ ಕಾರ್ಡ್‌ನಲ್ಲಿ ಹೆಸರು ವಿಮಾನ ನಿರ್ಗಮನ ಸಮಯ ಇವುಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ,
ಬುಕಿಂಗ್ ವೇಳೆ ಹೆಸರಿನ ಕಾಗುಣಿತಕ್ಕೆ ವಿಶೇಷ ಗಮನ ಕೊಡಿ. ನಿಮ್ಮ ಹೆಸರಿನ ಕಾಗುಣಿತ ಸರಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ . ಅಂದರೆ ನಿಮ್ಮ ಪಾಸ್‌ಪೋರ್ಟ್ ಮತ್ತು ಐಡಿ ಕಾರ್ಡ್‌ನಲ್ಲಿರುವ ಹೆಸರು ಒಂದೇ ಆಗಿರಬೇಕು. ಹೊಂದಾಣಿಕೆಯಾಗದಿದ್ದರೆ ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಸಮಸ್ಯೆಯಾಗಬಹುದು. ಚೆಕ್-ಇನ್ ಸಮಯದಲ್ಲಿ ವಿಮಾನಯಾನ ಸಂಸ್ಥೆಯು ಬೋರ್ಡಿಂಗ್ ಅನ್ನು ನಿರಾಕರಿಸಬಹುದು.
ಫ್ಲೈಟ್ ಬುಕಿಂಗ್‌ನಲ್ಲಿ ತಪ್ಪು ಕಾಗುಣಿತವನ್ನು ಹಾಕಿದರೆ, ಟಿಕೆಟ್‌ನಲ್ಲಿ ಬದಲಾವಣೆಗಾಗಿ ಏರ್‌ಲೈನ್ ನಿಮಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು.
ಫ್ಲೈಟ್ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ, ಟಿಕೆಟ್‌ನೊಂದಿಗೆ,ಪ್ರಯಾಣದ ಸಮಯದಲ್ಲಿ ತೆಗೆದುಕೊಳ್ಳಲು ಬಯಸುವ ಸೇವೆಯನ್ನು ನೆನಪಿನಲ್ಲಿಡಿ. ಇಲ್ಲದಿದ್ದರೆ, ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗಬಹುದು
ವಿಮಾನ ಟಿಕೆಟ್ ಕಾಯ್ದಿರಿಸುವಾಗ, ಏರ್‌ಲೈನ್‌ನ ನಿಯಮಗಳು ಮತ್ತು ಷರತ್ತುಗಳನ್ನು ಓದುವುದನ್ನು ಖಚಿತಪಡಿಸಿಕೊಳ್ಳಿ. ಇದರಲ್ಲಿ ವಿಮಾನಯಾನ ಶುಲ್ಕ ಮರುಪಾವತಿ ನೀತಿ, ಕ್ಯಾರೇಜ್, ಉಚಿತ ಬ್ಯಾಗ್ ಮಿತಿ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ. ಇದನ್ನು ಏರ್‌ಲೈನ್‌ನ ವೆಬ್‌ಸೈಟ್‌ನಲ್ಲಿ ಓದಬಹುದು.