ಸೌಂದರ್ಯ ಕಾಪಾಡಿಕೊಳ್ಳಬೇಕಾದರೆ ಈ ಆಹಾರಗಳಿಂದ ದೂರವಿರಿ

Mon, 28 Mar 2022-6:39 pm,

ದೇಹದಲ್ಲಿನ ಕೆಫೀನ್ ಪ್ರಮಾಣವು ನಿಮ್ಮ ಚರ್ಮವನ್ನು ಒಣಗಿಸುತ್ತದೆ. ಹಾಗಾಗಿ ಚಿಕ್ಕವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣುತ್ತದೆ. ಇದನ್ನು ತಪ್ಪಿಸಲು, ಇಂದೇ ಕೆಫೀನ್ ಸೇವನೆಯನ್ನು ಮಿತಗೊಳಿಸಿ.

ಹೆಚ್ಚುವರಿ ಉಪ್ಪು ಸೇವನೆಯಿಂದ ಚರ್ಮದ ಕಾಂತಿಯೂ ಕಡಿಮೆಯಾಗುತ್ತದೆ. ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಹೆಚ್ಚು ಉಪ್ಪನ್ನು ತಿನ್ನುವುದನ್ನು ತಪ್ಪಿಸಿ. 

ಯಾವುದೇ ಸಂದರ್ಭದಲ್ಲಿಯೂ ಆಲ್ಕೊಹಾಲ್ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲ. ಇದನ್ನು ಸೇವಿಸುವುದರಿಂದ ಉಂಟಾಗುವ ನಿರ್ಜಲೀಕರಣವು ಚರ್ಮದ ಮೇಲೆ ಪರಿಣಾಮ ಬೀರುತ್ತದೆ.

ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಉತ್ಪನ್ನಗಳು ನಿಮ್ಮ ದೇಹಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ. ಅಂತಹ ಉತ್ಪನ್ನಗಳನ್ನು ತಿನ್ನುವುದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಸಮತೋಲನವನ್ನು ಹಾಳುಮಾಡುತ್ತದೆ. ಮೊಡವೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಹೆಚ್ಚು ಸಕ್ಕರೆ, ಜೇನುತುಪ್ಪ ಅಥವಾ ಬೆಲ್ಲವನ್ನು ತಿನ್ನಲು  ಹೋಗಬೇಡಿ. 

ಮೈದಾದಿಂದ ಮಾಡಿದ ಪದಾರ್ಥಗಳು ಉತ್ತಮ ರುಚಿಯನ್ನು ಹೊಂದಿರುತ್ತದೆ. ಆದರೆ ಈ ಆಹಾರಗಳನ್ನು ತಿನ್ನುವುದರಿಂದ ಚರ್ಮಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ.  ಬದಲಿಗೆ ಇದು ಹಾನಿಕಾರಕ. ಮೈದಾ ತಿನ್ನುವುದು ಚರ್ಮಕ್ಕೆ ಮಾತ್ರವಲ್ಲದೆ ನಿಮ್ಮ ಆರೋಗ್ಯಕ್ಕೂ ಹಾನಿಕಾರಕ.  ( ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು  ಆಧರಿಸಿದೆ. ಇವುಗಳನ್ನು ಅಳವಡಿಸುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ .  Zee ಮೀಡಿಯಾ ಇದನ್ನು ದೃಢಪಡಿಸುವುದಿಲ್ಲ  )

ZEENEWS TRENDING STORIES

By continuing to use the site, you agree to the use of cookies. You can find out more by Tapping this link