Sankranti 2023 : ಮಕರ ಸಂಕ್ರಾಂತಿ ದಿನ ಈ ಕೆಲಸಗಳಿಂದ ದೂರ ಉಳಿಯಬೇಕು.!

Fri, 06 Jan 2023-12:48 pm,

ಮಕರ ಸಂಕ್ರಾಂತಿಯ ದಿನದಂದು ಮದ್ಯ ಸೇವಿಸಬಾರದು. ಈ ದಿನ ಮದ್ಯ ಸೇವಿಸಿದರೆ ಮನೆಯಲ್ಲಿ ಋಣಾತ್ಮಕ ಶಕ್ತಿಯು ಪರಿಚಲನೆಗೊಳ್ಳಲು ಪ್ರಾರಂಭಿಸುತ್ತದೆ. ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ಮಕರ ಸಂಕ್ರಾಂತಿಯ ದಿನದಂದು ತಾಮಸಿಕ ಆಹಾರ ಸೇವನೆಯಿಂದ ದೂರವಿರಬೇಕು. ಮಾಘ ಮಾಸದಲ್ಲಿ ತಾಮಸಿಕ, ಮಾಂಸಾಹಾರ ಸೇವಿಸುವುದನ್ನು ತಪ್ಪಿಸಬೇಕು. ಒಂದೊಮ್ಮೆ ಇವುಗಳನ್ನು ಸೇವಿಸಿದರೆ ದೇವರ ಕೃಪೆ ಸಿಗುವುದಿಲ್ಲ.   

ಮಕರ ಸಂಕ್ರಾಂತಿಯ ದಿನದಂದು ಶುದ್ಧ ಆಹಾರವನ್ನು ಸೇವಿಸುವುದು ಉತ್ತಮ. ಬೆಳಿಗ್ಗೆಯಿಂದ ಸಂಜೆಯವರೆಗೆ ಸಾತ್ವಿಕ ಆಹಾರವನ್ನೇ ಸೇವಿಸಿ. ಅಷ್ಟೇ ಅಲ್ಲ ಬೆಳ್ಳುಳ್ಳಿ, ಈರುಳ್ಳಿಯನ್ನು ಕೂಡ ಆಹಾರದಲ್ಲಿ ಬಳಸಬಾರದು.

ಈ ಶುಭದಿನದಂದು ನಿರ್ಗತಿಕರು ಅಥವಾ ಭಿಕ್ಷುಕರು ಮನೆಗೆ ಬಂದರೆ ಅವರನ್ನು ಬರಿಗೈಯಲ್ಲಿ ಹಿಂತಿರುಗಿಸಬೇಡಿ. ಅವರು ಬರಿಗೈಯ್ಯಲ್ಲಿ ಹಿಂತಿರುಗಿದರೆ ದೇವರು ನಿಮ್ಮ ಮೇಲೆ ಕೋಪಗೊಳ್ಳಬಹುದು.  ಹಾಗಾಗಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ  ದಾನ ಮಾಡಿ. 

ಮಕರ ಸಂಕ್ರಾಂತಿಯ ದಿನದಂದು ಬಡವರು ಮತ್ತು ಅಸಹಾಯಕರಿಗೆ  ತೊಂದರೆ ಕೊಡಬಾರದು. ಬಡವರಿಗೆ ತೊಂದರೆ ಕೊಡುವ ಮೂಲಕ ನೀವೇ ತೊಂದರೆಗೆ ಸಿಲುಕಿಕೊಳ್ಳಬಹುದು. 

( ಸೂಚನೆ : ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link