Money Plant ನೆಡುವಾಗ ಮಾಡುವ ಈ ತಪ್ಪುಗಳಿಂದ ಆರ್ಥಿಕ ನಷ್ಟ, ಸಾಲದ ಸುಳಿಯಲ್ಲಿ ಸಿಲುಕುವಿರಿ!
ವಾಸ್ತು ಪ್ರಕಾರ, ಮನೆಯಲ್ಲಿ ಅಥವಾ ಕಚೇರಿಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.
ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ನೆಡುವಾಗ ಮಾಡುವ ಕೆಲವು ತಪ್ಪುಗಳಿಂದ ಮನೆಯಲ್ಲಿ/ಕಚೇರಿಯಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ ವ್ಯಕ್ತಿ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.
ಮನಿ ಪ್ಲಾಂಟ್‌ಗಳನ್ನು ಯಾವುದೇ ಕಾರಣಕ್ಕೂ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಲೇಬಾರದು. ಇದರಿಂದ ಹಣಕಾಸಿನ ನಷ್ಟದ ಜೊತೆಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕುವಿರಿ.
ಮನಿ ಪ್ಲಾಂಟ್ ಭೂಮಿ ಸ್ಪರ್ಶಿಸದಂತೆ ನಿಗಾವಹಿಸಿ. ಇದು ಎಂದಿಗೂ ಮೇಲ್ಮುಖವಾಗಿರಬೇಕು. ಇಲ್ಲದಿದ್ದರೆ, ಮನೆಯಲ್ಲಿ ಪ್ರಗತಿ ಕುಂಠಿತಗೊಳ್ಳುತ್ತದೆ.
ಎಂದಿಗೂ ಮನೆಯಲ್ಲಿ ಮನಿ ಪ್ಲಾಂಟ್ ಒಣಗಳು ಬಿಡಬೇಡಿ. ಇದು ಮನೆಯಲ್ಲಿ ದಾರಿದ್ರ್ಯವನ್ನು ತರುತ್ತದೆ.
ಮನಿ ಪ್ಲಾಂಟ್ ಅನ್ನು ಯಾವಾಗಲೂ ಮನೆಯ ಒಳಗೆ ಇಡಬೇಕು. ಮನೆಯಿಂದ ಹೊರಗೆ ಈ ಸಸ್ಯ ನೆಡುವುದರಿಂದ ದುಷ್ಟ ಕಣ್ಣುಗಳು ಮನೆಯ ಮೇಲೆ ಬೀಳುತ್ತದೆ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ.
ಪ್ರಮುಖವಾಗಿ ಯಾರಿಗೂ ಮನಿ ಪ್ಲಾಂಟ್ ಅನ್ನು ಉಡುಗೊರೆಯಾಗಿ ನೀಡಬೇಡಿ. ಬೇರೆಯವರಿಂದ ಇದನ್ನು ಗಿಫ್ಟ್ ಆಗಿ ಪಡೆಯಲೂ ಬೇಡಿ. ಇದರಿಂದ ಆರ್ಥಿಕ ಮುಗ್ಗಟ್ಟು ಹೆಚ್ಚಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.