New Year ಸಂದರ್ಭದಂದು ಗೂಗಲ್ ನಲ್ಲಿ ಅಪ್ಪಿತಪ್ಪಿಯೂ ಕೂಡ 5 ವಿಷಯಗಳ ಹುಡುಕಾಟ ನಡೆಸಬೇಡಿ, ಕಂಬಿ ಎಣಿಸಬೇಕಾಗುತ್ತದೆ

Fri, 30 Dec 2022-9:43 pm,

1. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಹ್ಯಾಕಿಂಗ್ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದ್ದಾರೆ, ಅಂತಹ ಪರಿಸ್ಥಿತಿಯಲ್ಲಿ, ಅವರು Google ಹುಡುಕಾಟದಲ್ಲಿ ಹ್ಯಾಕಿಂಗ್ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ, ಆದರೆ ನೀವು ಇದನ್ನು ಮತ್ತೆ ಮತ್ತೆ ಸರ್ಚ್ ಮಾಡಿದರೆ, ಸರ್ಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಮತ್ತು ನಿಮ್ಮನ್ನು ಜೈಲಿಗೂ ಕೂಡ ಕಳುಹಿಸಬಹುದು. ಹೀಗಾಗಿ ನೀವು ಹ್ಯಾಕಿಂಗ್‌ನಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಮಾಹಿತಿ ಕಲೆಹಾಕಲು ಪ್ರಯತ್ನಿಸದಿರುವುದು ಉತ್ತಮ.  

2. ನೀವು ಹೊಸ ಚಲನಚಿತ್ರ ಅಥವಾ ಹಾಡಿನ ಲಿಂಕ್‌ಗಾಗಿ ಹುಡುಕಾಟ ನಡೆಸುತ್ತಿದ್ದರೆ, ಅದು ಅಪರಾಧ ಚಟುವಟಿಕೆಯ ಶ್ರೇಣಿಯ ಅಡಿಯಲ್ಲಿ ಬರುವ ಕಾರಣ ನೀವು ಜೈಲಿಗೆ ಹೋಗಬೇಕಾಗಬಹುದು, ಹೀಗಾಗಿ, ನೀವು ಇಂತಹ ವಿಷಯಗಳ ಮೇಲೆ ಹುಡುಕುವುದನ್ನು ತಪ್ಪಿಸಬೇಕು.  

3. ಅನೇಕ ಬಾರಿ ಜನರು ಆಯುಧಗಳ ಬಗ್ಗೆ ಹುಡುಕುತ್ತಾರೆ ಮತ್ತು ಅದರ ಬಗ್ಗೆ ಮಾಹಿತಿಯನ್ನು ಪಡೆಯಲು ಬಯಸುತ್ತಾರೆ, ಆದರೆ ಅಂತಹ ಮಾಹಿತಿಯು ಸೂಕ್ಷ್ಮವಾಗಿದೆ ಎಂದು ನಿಮಗೆ ತಿಳಿದಿದೆಯೇ, ಅದರ ಬಗ್ಗೆ ಹುಡುಕುವುದು ನಿಮ್ಮನ್ನು ಜೈಲಿಗೆ ತಳ್ಳಬಹುದು.  

4. ನೀವು Google ಹುಡುಕಾಟದಲ್ಲಿ ಮಕ್ಕಳ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯಲು ಬಯುತ್ತಿದ್ದರೆ, ನೀವು ಹಾಗೆ ಮಾಡುವುದನ್ನು ತಪ್ಪಿಸಬೇಕು ಏಕೆಂದರೆ ಮಕ್ಕಳ ಅಪರಾಧದ ಬಗ್ಗೆ ಬಹಳ ಕಟ್ಟುನಿಟ್ಟಾದ ನಿಯಮವಿದೆ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀವು ಪದೇ ಪದೇ ಪಡೆದರೆ, ನೀವು ಜೈಲಿಗೆ ಹೋಗಬೇಕಾಗಬಹುದು.   

5. ನೀವು ಬಾಂಬ್‌ಗಳು ಅಥವಾ ಮದ್ದುಗುಂಡುಗಳನ್ನು ತಯಾರಿಸುವ ವಿಧಾನದ ಬಗ್ಗೆ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದರೆ, ನೀವು ಸಂಕಸ್ಥ ಎದುರಿಸಬೇಕಾಗಬಹುದು. ಏಕೆಂದರೆ ಭಾರತ ಸರ್ಕಾರವು ಅಂತಹ ಹುಡುಕಾಟಗಳ ಮೇಲ್ವಿಚಾರಣೆ ನಡೆಸುತ್ತದೆ, ಎಲ್ಲಿಂದ ಬಾಂಬ್‌ಗಳು ಮತ್ತು ಮದ್ದುಗುಂಡುಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂಬುದರ ಮೇಲೆ ಅದು ನಿಗಾವಹಿಸುತ್ತದೆ. ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಈ ರೀತಿ ಮಾಡುವುದು ತುಂಬಾ ಮುಖ್ಯ. ಏಕೆಂದರೆ ಪ್ರತಿ ಸರ್ಕಾರವು ಅಪರಾಧವನ್ನು ಎದುರಿಸಲು ಈ ರೀತಿಯ ಎಚ್ಚರಿಕೆ ವಹಿಸುತ್ತವೆ ಮತ್ತು ಇದರಿಂದ ನೀವು ಹೇಗೆ ಜೈಲಿಗೆ ಹೋಗಬೇಕಾಗಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link