ರಾಜ್ಯದಲ್ಲಿ ನವರಾತ್ರಿಯ 9 ದಿನ ಚಿಕನ್, ಮಟನ್ ಮಾರಾಟ ನಿಷೇಧ..! ʼಬಾರ್‌ʼ ಬಂದ್‌ ಆಗುತ್ತಾ..?

Wed, 02 Oct 2024-8:01 pm,

ನಾಳೆಯಿಂದ ಶರನ್ನವರಾತ್ರಿ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಯುಪಿ ಸರ್ಕಾರ ಚಿಕನ್ ಮತ್ತು ಮಟನ್ ಮಾರಾಟವನ್ನು ನಿಷೇಧಿಸಿದೆ. ಯೋಗಿ ಸರ್ಕಾರ ಅಕ್ಟೋಬರ್ 3 ರಿಂದ 12 ರವರೆಗೆ ಈ ಮಾರಾಟವನ್ನು ನಿಷೇಧಿಸಿದೆ.    

ಮಾರ್ಕಂಡೇಯ ಪುರಾಣದ ಪ್ರಕಾರ ಈ ನವರಾತ್ರಿಯಲ್ಲಿ 9 ಅವತಾರಗಳನ್ನು ಪೂಜಿಸಲಾಗುತ್ತದೆ. ದುರ್ಗಾದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ಭಕ್ತರು ಉಪವಾಸ ಮಾಡುತ್ತಾರೆ. ಮಹರ್ನವಮಿ ದಿನದಂದು ಹವನವನ್ನು ಮಾಡಲಾಗುತ್ತದೆ. ಈ ಉಪವಾಸವನ್ನು ದಸರಾದೊಂದಿಗೆ ಮುರಿಯಲಾಗುತ್ತದೆ.    

ಮಹಾನವಮಿ ದಿನದಂದು ಕಲಶವನ್ನು ಸ್ಥಾಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ 9 ದಿನಗಳ ಕಾಲ ಅಯೋಧ್ಯೆಯಲ್ಲಿ ಮಾಂಸ ಮಾರಾಟಕ್ಕೆ ಸಿಎಂ ಯೋಗಿ ಆದಿತ್ಯನಾಥ್ ನಿಷೇಧ ಹೇರಿದ್ದರು. ಕೆಲವು ವರದಿಗಳ ಪ್ರಕಾರ, ಇದು ಅಕ್ಟೋಬರ್ 3 ರಿಂದ 11 ರವರೆಗೆ ನಡೆಯಲಿದೆ.     

ಈ ಸಂದರ್ಭದಲ್ಲಿ ಅಯೋಧ್ಯೆ ಜಿಲ್ಲಾಡಳಿತವು ಈ ಒಂಬತ್ತು ದಿನಗಳ ಕಾಲ ಮಾಂಸ ಸಂಬಂಧಿತ ಉತ್ಪನ್ನಗಳನ್ನು ನಿಷೇಧಿಸಿದೆ. ಅಯೋಧ್ಯೆಯಲ್ಲಿ ಆಹಾರ ಸುರಕ್ಷತೆ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮಾಂಸಾಹಾರಿ ಮಾರಾಟ ಮಾಡುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೂ ಇದು ಅನ್ವಯಿಸುತ್ತದೆ.    

ಈ ಆದೇಶವನ್ನು ಎಲ್ಲಾ ಹೋಟೆಲ್‌ಗಳಿಗೂ ನೀಡಲಾಗಿದೆ. ಆದರೆ, ಮದ್ಯದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link