High Uric Acid: ಅಧಿಕ ಯೂರಿಕ್ ಆಸಿಡ್ ಅನ್ನು ಎರಡೇ ದಿನದಲ್ಲಿ ನಿಯಂತ್ರಿಸಬಲ್ಲ ಐದು ಎಲೆಗಳಿವು
ನೀವು ಅಧಿಕ ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವು ಆಯುರ್ವೇದ ಎಲೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಆಯುರ್ವೇದ ತಜ್ಞರ ಪ್ರಕಾರ, ದೇಹದಲ್ಲಿ ಹೆಚ್ಚಿನ ಯೂರಿಕ್ ಆಮ್ಲವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಕೆಲವು ಆಯುರ್ವೇದ ಎಲೆಗಳು ಪ್ರಯೋಜನಕಾರಿ ಆಗಿದೆ. ಇವುಗಳ ದೈನಂದಿನ ಬಳಕೆಯಿಂದ ಯೂರಿಕ್ ಆಸಿಡ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು ಎನ್ನಲಾಗುತ್ತದೆ. ಅವುಗಳೆಂದರೆ...
ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿರುವ ತುಳಸಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲ ಶೇಖರಣೆಯನ್ನು ತಡೆಯಬಹುದು.
ಆಯುರ್ವೇದದಲ್ಲಿ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಎಲೆ ಎಂದು ಪರಿಗಣಿಸಲಾಗಿರುವ ಬೇವಿನ ಎಲೆ ಸೇವನೆಯು ರಕ್ತ ಶುದ್ಧೀಕರಣವನ್ನು ಪ್ರಚೋದಿಸುತ್ತದೆ. ಇದು ದೇಹದಿಂದ ಹೆಚ್ಚುವರಿ ಯೂರಿಕ್ ಆಸಿಡ್ ಅನ್ನು ತೆಗೆದುಹಾಕುವಲ್ಲೂ ಪ್ರಯೋಜನಕಾರಿಯಾಗಿದೆ.
ಆಯುರ್ವೇದದ ಪ್ರಸಿದ್ದ ಗಿಡಮೂಲಿಕೆಯಾಗಿರುವ ಅಮೃತಬಳ್ಳಿ ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಯೂರಿಕ್ ಆಸಿಡ್ ನಿಯಂತ್ರಿಸಿ ಕೀಲು ನೋವು ಮತ್ತು ಉರಿಯೂತವನ್ನು ನಿವಾರಿಸಲು ಸಹಕಾರಿ ಆಗಿದೆ.
ದೈನಂದಿನ ಆಹಾರದಲ್ಲಿ ಕೊತ್ತಂಬರಿ ಸೊಪ್ಪಿನ ಬಳಕೆಯೂ ಉರಿಯೂತವನ್ನು ಕಡಿಮೆ ಮಾಡಿ, ದೇಹದಿಂದ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ಸಹಕಾರಿ ಆಗಿದೆ.
ತ್ರಿಫಲವು ಮೂರು ಹಣ್ಣುಗಳ ಸಂಯೋಜನೆಯಾಗಿದ್ದು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಗೌಟ್‌ಗೆ ಸಂಬಂಧಿಸಿದ ಉರಿಯೂತವನ್ನು ಕಡಿಮೆ ಮಾಡಿ ದೇಹದಿಂದ ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.