White Hair Remedy: ಅಕಾಲಿಕ ಬಿಳಿ ಕೂದಲನ್ನು ನೈಸರ್ಗಿಕ ಕಪ್ಪಾಗಿಸಲು ಈ ಮೂರು ಪುಡಿಗಳಷ್ಟೇ ಸಾಕು
ಬದಲಾದ ಜೀವನ ಶೈಲಿಯಲ್ಲಿ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ಆಯುರ್ವೇದದ ಪ್ರಕಾರ, ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಅಕಾಲಿಕ ಬಿಳಿ ಕೂದಲಿನಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ ಯಾವೆಲ್ಲ ಪದಾರ್ಥಗಳು ಬೇಕಾಗುತ್ತದೆ. ಅಕಾಲಿಕ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಇದನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.
ಅಕಾಲಿಕ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೂರು ಪುಡಿಗಳು ತುಂಬಾ ಪ್ರಯೋಜನಕಾರಿ ಆಗಿವೆ. ಇದರೊಂದಿಗೆ ನಿಂಬೆ ರಸವೂ ಬೇಕಾಗುತ್ತದೆ. ಅವುಗಳೆಂದರೆ... * 5-6 ಚಮಚ ಮೆಹಂದಿ ಪುಡಿ * 3 ಚಮಚ ಕಾಫಿ ಪುಡಿ * 2 ಚಮಚ ಆಮ್ಲಾ ಪುಡಿ * ಅರ್ಧ ನಿಂಬೆ ಹಣ್ಣು
ಮೊದಲಿಗೆ 5-6 ಚಮಚ ಮೆಹಂದಿ ಪುಡಿಯನ್ನು ರಾತ್ರಿಯೇ ನೆನೆಸಿಡಿ. ಬೆಳಿಗ್ಗೆ ಎದ್ದ ಬಳಿಕ ನೆನೆಸಿಟ್ಟ ಮೆಹಂದಿ ಪುಡಿಯಲ್ಲಿ 3 ಚಮಚ ಕಾಫಿ ಪುಡಿ, 2 ಚಮಚ ಆಮ್ಲಾ ಪುಡಿ ಮತ್ತು ಅರ್ಧ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಒಂದೆರಡು ಕುದಿ ಬಂದ ನಂತರ ಸ್ಟೌವ್ ಆಫ್ ಮಾಡಿ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.
ಈ ಹೇರ್ ಪ್ಯಾಕ್ ತಯಾರಾದ ಬಳಿಕ ಅದನ್ನು ಬುಡದಿಂದ ತುದಿಯವರೆಗೆ ಕೂದಲಿಗೆ ಹಚ್ಚಿ, ಚೆನ್ನಾಗಿ ಒಣಗಲು ಬಿಡಿ. 40-45 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಹೇರ್ ವಾಶ್ ಮಾಡಿ. ನೆನಪಿಡಿ:- ಹೇರ್ ವಾಶ್ ಮಾಡುವಾಗ ಯಾವುದೇ ರಾಸಾಯನಿಕ ಶಾಂಪೂಗಳನ್ನು ಬಳಸುವುದನ್ನು ತಪ್ಪಿಸಿ.
ಆಯುರ್ವೇದದ ಪ್ರಕಾರ, ಈ ಮನೆಮದ್ದನ್ನು ತಿಂಗಳಲ್ಲಿ ಕನಿಷ್ಠ ಒಂದು ಬಾರಿ ಬಳಸಿದರೂ ಸಹ ನಿಮ್ಮ ಅಕಾಲಿಕ ಬಿಳಿ ಕೂದಲುಗಳನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸುಲಭವಾಗಿ ನೈಸರ್ಗಿಕವಾಗಿ ಕಪ್ಪಾಗಿಸಬಹುದು ಎನ್ನಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.