43 ಬೌಂಡರಿ, 24 ಸಿಕ್ಸರ್... 152 ಎಸೆತಗಳಲ್ಲಿ 419 ರನ್ ಗಳಿಸಿದ 15 ವರ್ಷದ ಕ್ರಿಕೆಟಿಗ..! ಸಚಿನ ತೆಂಡೂಲ್ಕರ್‌ ಅವರ ದಾಖಲೆಗಳನ್ನು ಮುರಿದ ಈ ಬಾಲಕ ಯಾರು ಗೊತ್ತಾ..?

Wed, 20 Nov 2024-10:27 am,

Aayush shinde: ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ ಯುವ ಆರಂಭಿಕ ಆಟಗಾರ ಆಯುಷ್ ಶಿಂಧೆ 419 ರನ್‌ ಗಳಿಸಿದ್ದಾರೆ. 152 ಎಸೆತಗಳಲ್ಲಿ 43 ಬೌಂಡರಿ ಹಾಗೂ 24 ಸಿಕ್ಸರ್‌ಗಳನ್ನು ಸಿಡಿಸಿ ದೊಡ್ಡ ಮೊತ್ತವನ್ನು ಕಲೆಹಾಕಿದ್ದಾರೆ.  

ಜನರಲ್ ಎಜುಕೇಶನ್ ಅಕಾಡೆಮಿ ಪರ ಆಡುತ್ತಿರುವ ಆಯುಷ್ ಶಿಂಧೆ ಪಾರ್ಲ್ ತಿಲಕ್ ವಿದ್ಯಾ ಮಂದಿರದ ವಿರುದ್ಧ ಈ ಐತಿಹಾಸಿಕ ಇನ್ನಿಂಗ್ಸ್ ಅನ್ನು ಆಡಿದ್ದಾರೆ. ಇದರೊಂದಿಗೆ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ವರ್ಷಗಳ ಹಳೆಯ ದಾಖಲೆಯನ್ನೂ ಆಯುಷ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.   

ಕ್ರಾಸ್ ಫೀಲ್ಡ್ ನಲ್ಲಿ ನಡೆದ ಪಂದ್ಯದಲ್ಲಿ ಆಯುಷ್ ಈ ದಾಖಲೆಯನ್ನು ಸೃಷ್ಟಿಸಿದ್ದಾರೆ. 16 ವರ್ಷದೊಳಗಿನ ಬಾಲಕರ ಟೂರ್ನಿಯಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಆಯುಷ್‌ ಬಡ್ತಿ ಪಡೆದಿದ್ದಾರೆ.  

2009ರಲ್ಲಿ ಸರ್ಫರಾಜ್ ಖಾನ್ 12ನೇ ವಯಸ್ಸಿನಲ್ಲಿ 439 ರನ್ ಗಳಿಸಿ ದಾಖಲೆಯನ್ನು ಬರೆದಿದ್ದರು.   

ಆಯುಷ್ ಅವರ ಮ್ಯಾರಥಾನ್ ಇನ್ನಿಂಗ್ಸ್ ಆಧಾರದ ಮೇಲೆ, ಅವರ ತಂಡವು 464 ರನ್‌ಗಳ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ.  

ಆಯುಷ್ ಶಿಂಧೆ ಏಕಕಾಲದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ದಾಖಲೆಗಳನ್ನು ಮುರಿದಿದ್ದಾರೆ.   

ಶಾರದಾ ವಿದ್ಯಾ ಮಂದಿರ ಪರ ಆಡುತ್ತಿರುವಾಗ ಸಚಿನ್ 326 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ವಿನೋದ್ ಕಾಂಬ್ಳಿ ಅಜೇಯ 349 ರನ್ ಗಳಿಸಿದ್ದರು.  

ಇವರಿಬ್ಬರು 664 ರನ್‌ಗಳ ದಾಖಲೆಯ ಜೊತೆಯಾಟ ನಡೆಸಿ ತಂಡಕ್ಕೆ ದೊಡ್ಡ ಜಯ ತಂದುಕೊಟ್ಟಿದ್ದರು.   

ಆಯುಷ್ ಒಂದೇ ಸ್ಟ್ರೋಕ್‌ನಲ್ಲಿ ಇಬ್ಬರ ದಾಖಲೆಗಳನ್ನು ಇದೀಗ ಮುರಿದಿದ್ದಾರೆ. ಆಯುಷ್ ಅವರ ಈ ಇನ್ನಿಂಗ್ಸ್‌ನಿಂದಾಗಿ ಅವರ ತಂಡ 5 ವಿಕೆಟ್‌ಗೆ 648 ರನ್ ಗಳಿಸಿ ಬೃಹತ್‌ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link